ಪ್ರಶ್ನೆ: ನನಗೆ ಕುಣಿಕೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳು ಹಾಗು ಪರಿವಾರದೊಂದಿಗಿರುವ ಬಾಂಧವ್ಯದಿಂದಾಗಿ ಅವರಿಗೇನಾದರೂ ಆದರೆ ನನ್ನನ್ನು ಬಹಳ ಸುಲಭವಾಗಿ ಗೊಂದಲಗೊಳಿಸುತ್ತದೆ. ಇದಕ್ಕೆ ಏನಾದರೂ ಪರಿಹಾರ ನೀಡಿ.

ಸದ್ಗುರು: ಕುಣಿಕೆಯಿಂದ ಬಿಡಿಸಿಕೊಳ್ಳಿ ಎಂದು ನಾನೆಂದೂ ಹೇಳಿಲ್ಲ. ದುರದೃಷ್ಟವಶಾತ್ ಸದ್ಯದಲ್ಲಿ ನಿಮ್ಮ ತಾಯಿ ಕರುಳಿನ ಬಳ್ಳಿ ಬಹಳ ಮಿತಿಯಿದ್ದಾಗಿದೆ. ಅದನ್ನು ಸ್ವಲ್ಪ ವಿಸ್ತರಿಸಿ. ಕೇವಲ ಸ್ವಲ್ಪ ಪ್ರಮಾಣವಲ್ಲದೇ ಭೂಮಿಯಲ್ಲಿರುವ ಪ್ರತಿಯೊಂದು ಜೀವವನ್ನೂ ಅದರೊಂದಿಗೆ ಜೋಡಿಸಿ.

ಕುಣಿಕೆಯಿಂದ ಬಿಡಿಸಿಕೊಳ್ಳಲು ಏಕೆ ಬಯಸುತ್ತೀರಿ? ಅದರಿಂದ ಬಿಡಿಸಿಕೊಳ್ಳುವ ಅಗತ್ಯವಿಲ್ಲ. ತಮ್ಮನ್ನು ತಾವು ತೊಡಗಿಸಿಕೊಳ್ಳುವುದಕ್ಕೂ ಹಾಗು ಬಂಧನಕ್ಕೆ ಸಿಕ್ಕಿಕೊಳ್ಳುವುದಕ್ಕೂ ನಡುವೆ ಅಂತರವಿದೆ. ಜೀವನವನ್ನು ತಿಳಿದುಕೊಳ್ಳಬೇಕಾದರೆ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಇದು ಕೇವಲ ಅಧ್ಯಾತ್ಮ ವಿಚಾರವಲ್ಲ. ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ಯಾವುದಾದರೂ ವಿಷಯವನ್ನು ತಿಳಿದುಕೊಳ್ಳಲು ಸಾಧ್ಯವೇ? ಜನರಲ್ಲಿ ಇರುವ ಕೊರತೆಯೆಂದರೆ ತಮ್ಮನ್ನು ತೊಡಗಿಸಿಕೊಳ್ಳುವುದು.

ತಾರತಮ್ಯವಿಲ್ಲದ ತೊಡಗಿಸಿಕೊಳ್ಳುವಿಕೆ

ನೀವು ತೊಡಗಿಸಿಕೊಂಡಾಗ ತಾರತಮ್ಯವಿದ್ದರೆ ಅದು ಬಂಧನವಾಗುತ್ತದೆ, ತಾರತಮ್ಯವಿಲ್ಲದಿರುವಂತೆ ನೋಡಿಕೊಳ್ಳಬೇಕು. ನೀವು ನಡೆಯುವ ಭೂಮಿ, ಸೇವಿಸುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ, ಇರುವ ಸ್ಥಳ, ಇವುಗಳೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ನೋಡಿ. ನೀವು ಈಗಾಗಲೇ ಅರಿವಿಲ್ಲದೆ ತೊಡಗಿಕೊಂಡಿದ್ದೀರಿ. ನೀವು ಉಸಿರಾಡುವ ಗಾಳಿಯೊಂದಿಗೆ ತೊಡಗಿಕೊಳ್ಳದಿದ್ದರೆ ಜೇವಂತವಾಗಿರುತ್ತಿರಲಿಲ್ಲ. ಜೀವನವು ಇದೆ ರೀತಿ ನಡೆಯಲಿದೆಯೆಂದು ನೀವು ಜಾಗೃತರಾಗಬೇಕು. ನೀವು ಜಾಗೃತರಾಗಿ ತೊಡಗಿಸಿಕೊಳ್ಳಬೇಕೆಂಬುದರ ಬಗ್ಗೆ ನೋಡಿಕೊಳ್ಳಬೇಕು.

If you are unconsciously involved, it looks like one big burden. If you are consciously involved, it will become blissful. Today, we can scientifically prove that every subatomic particle in your body is in communication with the whole cosmos. You are trying to ignore such a big phenomenon that is the basis of your life and creation. You suffer because you ignore that, not because you are involved with your family.

ಸರಿಯಾದ ದೃಷ್ಟಿಕೋನದ ಅವಶ್ಯಕತೆ

ಈ ದಿನ ಸರಿಯಾದ ಕಾಲದಲ್ಲಿ ಸೂರ್ಯೋದಯ ಆಯಿತಲ್ಲವೇ? ಹೌದು. ಈ ಭೂಮಿ ಕಾಲಕ್ಕನುಗುಣವಾಗಿ ತಿರುಗುತ್ತಿದೆ, ಹೂವುಗಳು ಸಕಾಲದಲ್ಲಿ ಅರಳುತ್ತಿದೆ, ಈ ಬ್ರಹ್ಮಾಂಡಲ್ಲಿರುವ ಅನಂತ ನಕ್ಷತ್ರಕೂಟಗಳಲ್ಲಿನ ಪ್ರತಿಯೊಂದು ವಿಷಯವೂ ನಿಖರವಾಗಿ ನಡೆಯುತ್ತಲೇ ಇದೆ - ಆದರೆ ನಿಮ್ಮ ಮೆದುಳಿನಲ್ಲಿ ಮಾತ್ರ “ಈದಿನ ಅಶುಭ ದಿನ “ ಎಂಬ ಒಂದು ಕ್ಷುಲ್ಲಕ ಯೋಚನೆ ನುಸುಳಿದೆ. ಸಮಸ್ಯೆಯೇನೆಂದರೆ ನೀವು ಯಾರು ಎಂಬ ಸರಿಯಾದ ದೃಷ್ಟಿಕೋನವನ್ನು ಕಳೆದುಕೊಂಡಿದ್ದೀರಿ. ನೀವು ನಿಮ್ಮ ಬಗ್ಗೆ ಬಹಳವಾಗಿ ಕಲ್ಪನೆ ಮಾಡುತ್ತಿರುತ್ತೀರಿ.

ಭೌತಿಕ ಅಸ್ತಿತ್ವದಲ್ಲಿ ನೀವೇನೂ ಅಲ್ಲ. ಇದನ್ನು ನೀವು ಗ್ರಹಿಸಿದರೆ ಪ್ರತಿಯೊಂದು ವಸ್ತುವನ್ನು ವಿಸ್ಮಯದಿಂದ ಹಾಗು ಎಲ್ಲವನ್ನು ಒಳಗೊಂಡು ನೋಡುತ್ತೀರಿ.

ಸದ್ಯದಲ್ಲಿ ನಿಮ್ಮ ಜೀವನದ ಇಡೀ ಅನುಭವ ನೀವಿರುವ ಭೌತಿಕ ರೂಪಕ್ಕೆ ಮಾತ್ರ ಸೀಮಿತ. ಭೌತಿಕವಾಗಿ ಇಡೀ ಬ್ರಹ್ಮಾಂಡದಲ್ಲಿ ನೀವು ಏನು? ನಿಮ್ಮ ಮನೆಗಳಲ್ಲಿ ನಿಮಗೊಂದು ಏನೋ ಸ್ಥಾನವಿದೆ, ರಸ್ತೆಯಲ್ಲಿ ಅಷ್ಟಿಲ್ಲ, ಊರಿನಲ್ಲಿ ಮತ್ತೇನಿಲ್ಲ. ಇಡೀ ಬ್ರಹ್ಮಾಂಡದಲ್ಲಿ ನೀವು ಒಂದು ಧೂಳಿನ ಕಣ ಕೂಡ ಅಲ್ಲ. ಸರಿಯಾದ ದೃಷ್ಟಿಕೋನವನ್ನು ಪಡೆಯಿರಿ. ಭೌತಿಕ ಅಸ್ತಿತ್ವದಲ್ಲಿ ನೀವೇನೂ ಅಲ್ಲ. ಇದನ್ನು ನೀವು ಗ್ರಹಿಸಿದರೆ ಪ್ರತಿಯೊಂದು ವಸ್ತುವನ್ನು ವಿಸ್ಮಯದಿಂದ ಹಾಗು ಎಲ್ಲವನ್ನು ಒಳಗೊಂಡು ನೋಡುತ್ತೀರಿ. ಆಗ ಒಂದು ಚಿಕ್ಕ ವಿಚಾರ ಅಥವಾ ಒಂದು ಭಾವನೆಯೂ ಮಹತ್ತರವೆನಿಸುವುದಿಲ್ಲ ಏಕೆಂದರೆ ಅದು ಕಾಳಜಿ ಇಲ್ಲದ್ದು. ಇದು ನಿಮ್ಮದೇ ಆದ ಸೃಷ್ಟಿ. ನಿಮ್ಮ ಮನಸ್ಸಿನಲ್ಲಿ ನಡೆಯುವುದೆಲ್ಲಾ ನಿಮ್ಮದೇ ಸೃಷ್ಟಿ. ಒಂದು ಕೆಟ್ಟ ಜೋಕ್ ಹೇಳಲೇ?

ಒಮ್ಮೆ ಒಬ್ಬ ಮಹಿಳೆಯ ನಿದ್ದೆಯಲ್ಲಿ, ಅವಳಿಗೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಒಬ್ಬ ದೈತ್ಯಾಕಾರದ ವ್ಯಕ್ತಿ ನಿಂತು ತನ್ನನ್ನೇ ದಿಟ್ಟಿಸಿ ನೋಡುತ್ತಿರುವ ಹಾಗೆ ಕಂಡಿತು. ಅವನು ಇನ್ನೂ ಸಮೀಪಕ್ಕೆ ಬರಲಾರಂಭಿಸಿದನು. ಅವನು ಎಷ್ಟು ಸಮೀಪಕ್ಕೆ ಬಂದನೆಂದರೆ ಅವನ ಉಸಿರಾಟವೂ ಇವಳ ಅನುಭವಕ್ಕೆ ಬರಲಾರಂಭಿಸಿತು. ಇದರಿಂದ ದಿಗ್ಬ್ರಾಂತಳಾಗಿ, "ನೀನು ನನಗೇನು ಮಾಡುವೆ?" ಎಂದು ಭಯದಿಂದ ಕೇಳಿದಳು. ಅದಕ್ಕೆ ಆ ವ್ಯಕ್ತಿ, "ಇದು ಕೇವಲ ನಿನ್ನ ಕನಸು ತಾನೇ" ಎಂದನು.

ನಿಮ್ಮ ಮೆದುಳಿನಲ್ಲಿ ನಡೆಯುತ್ತಿರುವುದೆಲ್ಲ ಕೇವಲ ಕನಸು. ಈಗ ನಿಮ್ಮ ಸಮಸ್ಯೆ ಜೀವನ ನಿಮ್ಮ ಇಷ್ಟಕ್ಕೆ ಅನುಗುಣವಾಗಿ ನಡೆಯುತ್ತಿಲ್ಲವೆಂಬುದಲ್ಲ, ನಿಮ್ಮ ಕನಸು ಕೂಡ ನಿಮ್ಮ ಇಷ್ಟದಂತೆ ನಡೆಯುತ್ತಿಲ್ಲ ಎಂದು. ಕನಿಷ್ಠ ಪಕ್ಷ ಕನಸುಗಳು ನಿಮ್ಮ ಇಷ್ಟದಂತೆ ನಡೆಯಲುಬಿಡಿ. ಜಗತ್ತು ನೀವು ಬಯಸಿದಂತೆ ನಡೆಯುತ್ತಿಲ್ಲವೆಂದರೆ ಅದು ಬೇರೆ, ಕನಿಷ್ಠ ನಿಮ್ಮ ಕನಸುಗಳು ನೀವು ಬಯಸಿದಂತೆ ನಡೆದರೆ ನೀವು ಆನಂದಮಯವಾಗಿಯೇ ಇರುವಿರಿ.

Editor’s Note: The “Power to Create” meditations for Peace, Love, Health, and Success (also known as “Chit Shakti”) enable each one of us to become our own alchemist, by empowering us to transform long cherished desires into reality. Try them out!