ಮಾನವ ಬುದ್ಧಿಶಕ್ತಿಯು ಪರಮಸಾಧ್ಯತೆಗೆ ಒಂದು ಮೆಟ್ಟಿಲಾಗಬಹುದು, ಅಥವಾ ಅದು ಅತ್ಯಂತ ವಿನಾಶಕಾರಿ ಶಸ್ತ್ರವಾಗಬಹುದು. ನಾವು ಈ ಬುದ್ಧಿಶಕ್ತಿಯನ್ನು ಪ್ರಜ್ಞೆಯಾಗಿ ಅರಳುವಂತೆ ಮಾಡುತ್ತೇವೆಯೇ ಅಥವಾ ಅದನ್ನು ಪ್ರಾಣಿಗಳಲ್ಲಿರುವಂತೆ ಪ್ರವೃತ್ತಿವಶವಾಗಿ ಇಡುತ್ತೇವೆಯೇ ಎಂಬುದು ಮಾನವ ಸಮಾಜಗಳು ಎಲ್ಲಿಗೆ ಸಾಗುತ್ತವೆ ಎಂಬುದನ್ನು ನಿರ್ಧರಿಸುತ್ತದೆ.