Main Centers
International Centers
India
USA
Sadhguru Quotes
FILTERS:
SORT BY:
Clear All
ಭೂಮಿಯಂತೆ, ಮರದಂತೆ ಅಪ್ಪಟ ಜೀವಚೈತನ್ಯವಾಗಿ. ನೀವು ಅಪ್ಪಟ ಜೀವವಾಗಿದ್ದರೆ, ನಿಮ್ಮ ಮಾನವ ಪ್ರಜ್ಞೆಯು ಸಹಜವಾಗಿಯೇ ಅಭಿವ್ಯಕ್ತಿ ಪಡೆಯುತ್ತದೆ.
ನಿಮ್ಮ ಜಿಜ್ಞಾಸೆಯು ಸಾಕಷ್ಟು ತೀವ್ರವಾದರೆ, ಜ್ಞಾನವು ದೂರದಲ್ಲಿಲ್ಲ, ಏಕೆಂದರೆ ನೀವು ಅರಸುತ್ತಿರುವ ಪರಮವಸ್ತುವು ನಿಮ್ಮೊಳಗೇ ಇದೆ.
ಬದ್ಧರಾಗಿರುವವರಿಗೆ ಅಸಫಲತೆಯೆಂಬುದಿಲ್ಲ. ಅವರಿಗೆ ಮಾರ್ಗದಲ್ಲಿ ಕಲಿಯಬೇಕಿರುವ ಪಾಠಗಳಿರುತ್ತವೆ ಅಷ್ಟೆ.
ಮೂಲಭೂತವಾಗಿ, ನಿಮಗೆ ಅರ್ಪಿಸಲು ಸಾಧ್ಯವಿರುವುದು ನಿಮ್ಮನ್ನಷ್ಟೆ.
ನಿಮಗೆ ನಿಮ್ಮ ನಶ್ವರತೆಯ ಅರಿವು ಸತತವಾಗಿ ಇದ್ದರೆ, ನಿಮ್ಮ ಆಧ್ಯಾತ್ಮಿಕ ಅನ್ವೇಷಣೆಯು ಅಚಲವಾಗಿರುತ್ತದೆ.
ಬೇರೆಯವರು ಸನ್ನಿವೇಶಗಳನ್ನು ಸೃಷ್ಟಿಸಬಲ್ಲರು ಅಷ್ಟೆ. ಅವರೇನೋ ಹೇಳಬಹುದು ಅಥವಾ ಮಾಡಬಹುದು, ಆದರೆ ನೀವದನ್ನು ನರಳುತ್ತೀರೋ ಇಲ್ಲವೋ ಎಂಬುದು ನಿಮ್ಮದೇ ಆಯ್ಕೆ.
ಧೈರ್ಯವಂತರು ಮೂರ್ಖ ಸಂಗತಿಗಳನ್ನು ಮಾಡುತ್ತಾರೆ. ಭಯಭೀತರು ಹೆಚ್ಚೇನೂ ಮಾಡಲು ಹೋಗುವುದೇ ಇಲ್ಲ. ಆದರೆ ನಿರ್ಭಯರು ಜೀವನವನ್ನು ಅದು ಇರುವಂತೆಯೇ ನೋಡುತ್ತಾರೆ, ಮತ್ತು ಅಗತ್ಯವಿರುವುದನ್ನು ಮಾಡುತ್ತಾರೆ.
ಒಬ್ಬರ ಆಧ್ಯಾತ್ಮಿಕತೆಯನ್ನು ಅವರ ವರ್ತನೆಯನ್ನು ನೋಡಿ ಅಳೆಯಬೇಡಿ. ಆಧ್ಯಾತ್ಮಿಕ ಪ್ರಕ್ರಿಯೆಯು ಶರೀರ, ಮನಸ್ಸುಗಳ ಹಾವಭಾವಗಳನ್ನು ಮೀರಿದ್ದು.
ಸಂಪತ್ತು ಶ್ರೇಯಸ್ಸಾಗಿ ಮಾರ್ಪಡಬೇಕಾದರೆ ನಿಮ್ಮೊಳಗೆ ಒಂದು ಆಧ್ಯಾತ್ಮಿಕ ಅರಿವಿರಬೇಕು. ಅದಿಲ್ಲದೇ ಹೋದರೆ, ನಿಮ್ಮ ಯಶಸ್ಸು ನಿಮ್ಮದೇ ವಿರುದ್ಧವಾಗಿ ಕೆಲಸ ಮಾಡಬಹುದು.
ಜ್ಞಾನೋದಯಕ್ಕಾಗಿ ಹಂಬಲಿಸಬೇಡಿ. ನಿಮ್ಮ ಹಂಬಲವು ನಿಮ್ಮ ಸದ್ಯದ ಮಿತಿಗಳನ್ನು ಆದಷ್ಟು ಬೇಗ ಮೀರಿ ಹೋಗುವ ಬಗ್ಗೆಯಾಗಿರಬೇಕು.
ಜೀವನದಲ್ಲಿ ವಿಷಯಗಳು ಕೆಟ್ಟುಹೋದಾಗಲೇ ನೀವು ಯಾರು ಎಂಬುದು ಬಯಲಾಗುವುದು. ಎಲ್ಲಾ ಚೆನ್ನಾಗಿ ನಡೆಯುತ್ತಿದ್ದಾಗ ಎಲ್ಲರೂ ಅದ್ಭುತವಾಗಿರುವಂತೆ ನಟಿಸಬಹುದು.
ನೀವು ಮಾಡುತ್ತಿರುವುದಕ್ಕೆ ನೀವು ಸಂಪೂರ್ಣವಾಗಿ ಸಮರ್ಪಿತರಾಗಿದ್ದಾಗ ಮಾತ್ರ ನೀವು ಜಗತ್ತಿನಲ್ಲಿ ಏನೋ ಮಹತ್ವಪೂರ್ಣವಾದುದನ್ನು ಸೃಜಿಸಬಲ್ಲಿರಿ.