ಪ್ರಶ್ನೆ: ಸದ್ಗುರು, ನೀವು ಬೆನ್ನುಹುರಿಯ ಎಳೆಯನ್ನು ಸ್ಪರ್ಶಿಸುವುದರ ಕುರಿತು ಮತ್ತು ಸುಷುಮ್ನಾನಾಡಿ ಸಚೇತನಗೊಳ್ಳುವ ಕುರಿತು ಮಾತನಾಡಿದ್ದೀರಿ. ನೀವು ಅದರ ಕುರಿತು ವಿವರವಾಗಿ ಹೇಳುತ್ತೀರಾ?

ಸದ್ಗುರು: ನಾನು ಭಾರತದಲ್ಲಿ ಸಿಎಫ್ಎಲ್ ಬಲ್ಬ್‍ಗಾಗಿ ಮಾಡಿದ ಒಂದು ಸುಂದರವಾದ ಪ್ರಚಾರದ ವಿಡಿಯೋವನ್ನು ನೋಡಿದ್ದೇನೆ. ಟಿಬೆಟ್ಟಿನ ಒಬ್ಬ ಸಣ್ಣ ಬಾಲಕ ಒಂದು ಪುಸ್ತಕವನ್ನು ಹಿಡಿದು ಒಂದು ಹೊಸ್ತಿಲ ಮೇಲೆ ಕುಳಿತು ಕೊಂಡಿರುತ್ತಾನೆ. ಅವನ ಸುತ್ತಲೂ ಒಂದು ಪ್ರಭಾವಳಿ ಇರುತ್ತದೆ. ಇದನ್ನು ನೋಡಿದ ಒಬ್ಬ ವಯೋವೃದ್ಧ ಮಹಿಳೆ “ರಿಂಪೋಚೆ, ರಿಂಪೋಚೆ (ಟಿಬೆಟ್ ಬೌದ್ಧ ಧರ್ಮದ ಆಚಾರ್ಯರನ್ನು ಸಂಭೋದಿಸುವ ಗೌರವ ಸೂಚಕ ಪದ)” ಎಂದು ಹೇಳಲು ಪ್ರಾರಂಭಿಸುತ್ತಾಳೆ. ಇದನ್ನು ಕೇಳಿಸಿಕೊಂಡ ಊರಿನ ಜನರು ಸ್ವಲ್ಪ ಹೊತ್ತಿನಲ್ಲಿ ಬಾಲಕನ ಮುಂದೆ ಬಂದು ಸೇರಿ “ರಿಂಪೋಚೆ, ರಿಂಪೋಚೆ” ಎನ್ನಲು ಪ್ರಾರಂಭಿಸುತ್ತಾರೆ. ಇದೆಲ್ಲವನ್ನೂ ನೋಡಿದ ಬಾಲಕ ಕೆಳಗಿಳಿದು ಬಂದು ತಾನೂ ಅವರು ಹೇಳುವುದನ್ನೇ ಹೇಳಲು ಪ್ರಾರಂಭಿಸುತ್ತಾನೆ. ಅಲ್ಲಿದ್ದ ಪ್ರಭಾವಳಿ ವಾಸ್ತವವಾಗಿ ಒಂದು ಸಿಎಫ್ಎಲ್ ಬಲ್ಬ್‍ನದಾಗಿರುತ್ತದೆ.

ನಿಮಗೆ ಆ ರೀತಿಯಲ್ಲಿ ಬೆಳಗಲು ಸಾಧ್ಯವಾಗದಿರಬಹುದು ಆದರೆ ಏನೋ ಒಂದು ಬೆಳಗುತ್ತದೆ. ಏನೂ ಬೆಳಗದಿದ್ದರೆ, ನಾವು ಇಲ್ಲಿ ಈಶ ಯೋಗ ಕೇಂದ್ರದಲ್ಲಿ ನಿರ್ಮಿಸಿರುವ ವಾತಾವರಣವು ನಿಮಗೆ ಯಾವುದೋ ಒಂದು ರೀತಿಯ ಮಾನಸಿಕ ಅಥವಾ ಸಾಮಾಜಿಕ ಸೌಕರ್ಯವನ್ನು ಒದಗಿಸಲು ಅಲ್ಲ. ಅದು ನಿಮಗೆ ಯಾವುದೇ ರೀತಿಯ ಅಧಿಕಾರ ಅಥವಾ ಹಿಡಿತವನ್ನು ನೀಡುವ ವಾತಾವರಣವಲ್ಲ.

ನಾವು ಈಶ ಯೋಗವನ್ನು ಜನರ ಮನಸ್ಸುಗಳನ್ನು ಹದಗೊಳಿಸಲು ಒಂದು ಪರಿಣಾಮಕಾರಿ ಉಪಕರಣವನ್ನಾಗಿ ಬಳಸುತ್ತಿದ್ದೇವೆ. ಅದು ನಿಮ್ಮನ್ನು ಚೆನ್ನಾಗಿ ಉರುಳಾಡಿಸುತ್ತದೆ ಮತ್ತು ಮಾನಸಿಕ ಪ್ರಕ್ರಿಯೆಯಲ್ಲಿನ ಅಲ್ಪ ಪ್ರಮಾಣದ ಮುಕ್ತತೆಯ ಆ ಕ್ಷಣದಲ್ಲಿ, ನಾವು ನಿಮ್ಮ ಬೆನ್ನುಹುರಿಯನ್ನು ಸ್ಪರ್ಶಿಸುತ್ತೇವೆ.

ನಮ್ಮಲ್ಲಿ ಪ್ರತಿಯೊಬ್ಬರ ಜೀವನವನ್ನು ಸಾಕಷ್ಟು ವ್ಯಾಕುಲತೆಯಲ್ಲಿಡುವುದು, ಆದರೆ ಅವರು ಪರಿಸ್ಥಿತಿಯಿಂದ ಓಡಿ ಹೋಗದಷ್ಟು ಪ್ರಮಾಣದಲ್ಲಿ ವ್ಯಾಕುಲತೆಯಲ್ಲಿಡುವುದು ಹೇಗೆ ಎನ್ನುವ ಬಗ್ಗೆ ಒಂದು ಅತ್ಯಂತ ವಿಸ್ತೃತವಾದ ವ್ಯವಸ್ಥೆಯಿದೆ. ಅದೊಂದು ಅತ್ಯಂತ ಲೆಕ್ಕಾಚಾರದಿಂದ ಹದಗೊಳಿಸಿದ ವ್ಯಾಕುಲತೆಯಾಗಿದೆ ಏಕೆಂದರೆ ಜನರು ಒಂದೆಡೆ ನೆಲೆ ನಿಲ್ಲುವುದು ನಮಗೆ ಬೇಕಾಗಿಲ್ಲ.ಇದು ಮನೆಯಿಂದ ದೂರವಾಗಿರುವ ಮನೆಯಲ್ಲ. ಇದು ಪೂರ್ತಿಯಾಗಿ ಮನೆಯಿಲ್ಲದೇ ಜೀವಿಸುವುದನ್ನು ಕಲಿತುಕೊಳ್ಳುವ ರೀತಿಯಾಗಿದೆ. ಧ್ಯಾನಲಿಂಗ ಒಂದು ಮನೆಯಲ್ಲ, ಅದೊಂದು ಗರ್ಭ. ಒಬ್ಬ ಹೆಂಗಸು ತನ್ನ ಗರ್ಭದಲ್ಲಿರುವ ಮಗುವಿನ ಮೇಲಿರುವ ಪ್ರೀತಿಯಿಂದ ಅದನ್ನು ಶಾಶ್ವತವಾಗಿ ತನ್ನ ಗರ್ಭದಲ್ಲೇ ಇಟ್ಟುಕೊಳ್ಳುವುದನ್ನು ನೀವೆಲ್ಲಿಯಾದರೂ ಕೇಳಿದ್ದೀರಾ? ಅವಳು ಅದನ್ನು ಎಷ್ಟೇ ಪ್ರೀತಿಸಿದರೂ, ಮಗುವಿಗೆ ಜನ್ಮ ನೀಡುತ್ತಾಳೆ. ಅದು ಸಹಜವಾದದ್ದು.

ಪ್ರೀತಿಯ ಬಗ್ಗೆ ನಿಮಗಿರುವ ತಿಳುವಳಿಕೆ ವಿಕಾಸಗೊಳ್ಳಬೇಕಿದೆ. ನೀವು ಯಾವಾಗಲೂ ಪ್ರೀತಿಯೆಂದರೆ ಹಿಡಿದುಕೊಳ್ಳುವುದು ಎಂದು ಭಾವಿಸಿಕೊಂಡಿದ್ದೀರಿ. ಪ್ರೀತಿಯೆಂದರೆ ಸ್ವತಂತ್ರಗೊಳಿಸುವುದು ಮತ್ತು ಮುಂದುವರೆಯಲು ಬೆಂಬಲವನ್ನು ನೀಡುವುದು. ನೀವು ನಿಜವಾಗಲೂ ಜೀವನದ ಬಗ್ಗೆ ಕಾಳಜಿ ವಹಿಸುವುದಾದರೆ, ಪ್ರೀತಿಯೆಂದರೆ ಜೀವನವನ್ನು ಅದರ ಅತ್ಯುನ್ನತ ಸಾಧ್ಯತೆಯೆಡೆಗೆ ಕೊಂಡೊಯ್ಯುವುದು. ನೀವು ಯಾವುದೇ ರೂಪದ ಜೀವದೊಂದಿಗೆ ಪ್ರೀತಿಯಲ್ಲಿದ್ದರೆ, ನೀವು ಆ ಜೀವ ಅದರ ಅಂತಿಮ ಶ್ರೇಯಸ್ಸನ್ನು ಪಡೆಯಲಿ ಎಂದು ಬಯಸುತ್ತೀರಿ.

ನಾವು ಈಶ ಯೋಗವನ್ನು ಜನರ ಮನಸ್ಸುಗಳನ್ನು ಹದಗೊಳಿಸಲು ಒಂದು ಪರಿಣಾಮಕಾರಿ ಉಪಕರಣವನ್ನಾಗಿ ಬಳಸುತ್ತಿದ್ದೇವೆ. ಅದು ನಿಮ್ಮನ್ನು ಚೆನ್ನಾಗಿ ಉರುಳಾಡಿಸುತ್ತದೆ ಮತ್ತು ಮಾನಸಿಕ ಪ್ರಕ್ರಿಯೆಯಲ್ಲಿನ ಅಲ್ಪ ಪ್ರಮಾಣದ ಮುಕ್ತತೆಯ ಆ ಕ್ಷಣದಲ್ಲಿ, ನಾವು ನಿಮ್ಮ ಬೆನ್ನುಹುರಿಯನ್ನು ಸ್ಪರ್ಶಿಸುತ್ತೇವೆ. ಮುಕ್ತತೆಯು ಸಾಧ್ಯವಾದಾಗ, ನಿಮ್ಮ ಬೆನ್ನುಹುರಿಯನ್ನು ಮುಚ್ಚಿಟ್ಟುಕೊಳ್ಳಲಾಗದು. ತಕ್ಷಣದಲ್ಲಿ ಅದನ್ನು ಸ್ಪರ್ಶಿಸಲಾಗುತ್ತದೆ. ಅದನ್ನು ನೀವು ಬೆಳೆಯಲು ಬಿಡುತ್ತೀರೋ ಅಥವಾ ಪ್ರತಿರೋಧಿಸುತ್ತೀರೋ ಮತ್ತು ಬೆಳಕಿಗಿಂತ ಹೆಚ್ಚು ಉಷ್ಣತೆಯನ್ನು ಸೃಷ್ಟಿಸುತ್ತೀರೋ ಅದು ನಿಮಗೆ ಬಿಟ್ಟಿದ್ದು. ಅದು ನಿಮ್ಮ ಕೈಯಲ್ಲೇ ಇದೆ. ಅದನ್ನು ಸ್ಪರ್ಶಿಸಲಾಗಿದೆ ಮತ್ತು ಶಕ್ತಿಯು ಚಾಲನೆಯಲ್ಲಿದೆ. ನೀವು ಪ್ರತಿರೋಧಿಸಿದರೆ, ನೀವು ಹೆಚ್ಚು ಉಷ್ಣತೆಯನ್ನು ಉತ್ಪಾದಿಸುತ್ತೀರಿ ಮತ್ತು ಕಡಿಮೆ ಬೆಳಕನ್ನು ಉತ್ಪಾದಿಸುತ್ತೀರಿ. ನೀವು ಪ್ರತಿರೋಧಿಸದಿದ್ದರೆ, ನೀವು ಸಾಕಷ್ಟು ಬೆಳಕನ್ನು ಸೃಷ್ಟಿಸುತ್ತೀರಿ ಮತ್ತು ಕಡಿಮೆ ಉಷ್ಣತೆಯನ್ನು ಸೃಷ್ಟಿಸುತ್ತೀರಿ.

ಶಕ್ತಿಯ ಮೂಲವಾಗುವಿಕೆ

ನೀವು ಇದನ್ನು ಮುಂದಕ್ಕೆ ರೂಢಿಸಿಕೊಳ್ಳುವುದಾದರೆ, ಆ ಬೆಳಗು ಕೇವಲ ನಿಮ್ಮ ಪರಿವರ್ತನೆಗಾಗಿಯಷ್ಟೇ ಅಲ್ಲದೇ, ಈ ಭೂಮಿಯ ಮೇಲೆ ನೀವೊಂದು “ಶಕ್ತಿಯ ಪರ್ಯಾಯ ಮೂಲ”ವಾಗಬೇಕೆಂದರೆ, ನೀವು ಬಹಳ ಗಮನ ಕೊಡಬೇಕು. ಬಹಳ ಅಂದರೆ ಬಹಳ. ಆದರೆ ನೀವು ಅಪಾರವಾದ ಗಮನವನ್ನು ನೀಡಲು ಸಾಧ್ಯವಿಲ್ಲ ಏಕೆಂದರೆ ನಿಮ್ಮಲ್ಲಿರುವುದನ್ನಷ್ಟೇ ನೀವು ಕೊಡಬಹುದು. ಆದರೆ ನೀವು ನಿಮ್ಮಲ್ಲಿರುವುದನ್ನೂ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತೀರಿ – ಅದು ಸರಿಯಲ್ಲ. ಈಗ ನಿಮ್ಮ ಬಳಿ ಇರುವ ಗಮನದ ಮಟ್ಟ ನಿಮ್ಮ ಅಂತಿಮ ಸಾಮರ್ಥ್ಯವಲ್ಲ. ನಿಮ್ಮಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯವಿದೆ ಆದರೆ ಅದು ಇನ್ನೂ ಅವ್ಯಕ್ತ ಸ್ಥಿತಿಯಲ್ಲಿದೆ, ನಿಮಗೆ ಅದರ ಅರಿವಿಲ್ಲ. ಆದರೆ ಕೊನೆಯ ಪಕ್ಷ ನೀವು ನಿಮ್ಮಲ್ಲಿರುವುದನ್ನು ನೀಡಬೇಕು. ನೀವು ಅದರಲ್ಲಿ ಹಿಂಜರಿದರೆ, ನೀವಿರುವ ಹಂತದಿಂದ ವಿಕಾಸವಾಗುವ ಅಥವಾ ಸುಧಾರಿಸುವ ಸಾಧ್ಯತೆಗಳು ದೂರವಾಗುತ್ತವೆ.

ಬೇರೆ ಬೇರೆ ಸಮಯಗಳಲ್ಲಿ ನಿಮ್ಮ ಗಮನ ಬೇರೆ ಬೇರೆ ಹಂತಗಳಲ್ಲಿರುತ್ತದೆ, ಮತ್ತು ನೀವು ನಿಮ್ಮ ಜೀವನದಲ್ಲಿ ಹೊಂದಿದ ಅತ್ಯಂತ ಅತ್ಯುನ್ನತ ಗಮನ ಯಾವುದೇ ಆಗಿದ್ದರೂ, ಅದು ಎಲ್ಲವೂ ಅಲ್ಲ. ಅದು ಅದರ ಒಂದು ಸಣ್ಣ ಭಾಗವಷ್ಟೆ.

ನಿಮ್ಮ ಮಾನಸಿಕ ಗಮನದ ವಿಚಾರದಲ್ಲಿಯೂ ಅಷ್ಟೆ, ಅದು ಸಂಪೂರ್ಣ ಪ್ರಮಾಣದಲ್ಲಿ ಇಲ್ಲ, ದಯವಿಟ್ಟು ನೋಡಿ. ನೀವು ನಿಮ್ಮ ಜೀವನದಲ್ಲಿ ವಿಭಿನ್ನ ಸಮಯಗಳಲ್ಲಿ ವಿಭಿನ್ನ ಹಂತಗಳ ಗಮನವನ್ನು ಹೊಂದಿರುತ್ತೀರಿ. ನೀವು ನಿಮ್ಮ ಕೆಲಸ ಮಾಡುತ್ತಿರುವಾಗ, ನೀವು ಒಂದು ರೀತಿಯ ಗಮನವನ್ನು ಹೊಂದಿರುತ್ತೀರಿ; ನೀವು ಧ್ಯಾನ ಮಾಡುತ್ತಿರುವಾಗ ವಿಭಿನ್ನ ಹಂತದ ಗಮನವನ್ನು ಹೊಂದಿರುತ್ತೀರಿ; ನೀವು ಅತ್ಯಂತ ಇಷ್ಟ ಪಡುವ ಆಹಾರವನ್ನು ತಿನ್ನುತ್ತಿರುವಾಗ ನೀವು ಒಂದು ವಿಭಿನ್ನ ಹಂತದ ಗಮನವನ್ನು ಹೊಂದಿರುತ್ತೀರಿ; ನೀವು ಒಂದು ವಿಡಿಯೋವನ್ನು ಅಥವಾ ನೀವು ಇಷ್ಟಪಡುವ ಸಂಗತಿಯನ್ನು ನೋಡುತ್ತಿರುವಾಗ, ನೀವು ಬೇರೆ ರೀತಿಯ ಗಮನವನ್ನು ಹೊಂದಿರುತ್ತೀರಿ. ಬೇರೆ ಬೇರೆ ಸಮಯಗಳಲ್ಲಿ ನಿಮ್ಮ ಗಮನ ಬೇರೆ ಬೇರೆ ಹಂತಗಳಲ್ಲಿರುತ್ತದೆ, ಮತ್ತು ನೀವು ನಿಮ್ಮ ಜೀವನದಲ್ಲಿ ಹೊಂದಿದ ಅತ್ಯಂತ ಅತ್ಯುನ್ನತ ಗಮನ ಯಾವುದೇ ಆಗಿದ್ದರೂ, ಅದು ಎಲ್ಲವೂ ಅಲ್ಲ. ಅದು ಅದರ ಒಂದು ಸಣ್ಣ ಭಾಗವಷ್ಟೆ. ನಿಮಗೆ ಇನ್ನೂ ಹೆಚ್ಚಿನ ಗಮನದ ಸಾಮರ್ಥ್ಯವಿದೆ.


ನಾನು ನಿಮ್ಮನ್ನು ರಾತ್ರಿಯ ಹೊತ್ತು ಕಗ್ಗತ್ತಲಿನಲ್ಲಿ ಯಾವುದೇ ಟಾರ್ಚ್ ಇಲ್ಲದೇ ಒಂದು ಕಾಡಿನಲ್ಲಿ ಬಿಟ್ಟರೆ, ನೀವು ಒಂದು ವಿಭಿನ್ನ ಹಂತದ ಗಮನಿಸುವಿಕೆಯಲ್ಲಿರುವುದನ್ನು ನೀವು ಕಾಣುತ್ತೀರಿ. ನೀವು ಅಪಾಯದ ಪರಿಸ್ಥಿತಿಯಲ್ಲಿದ್ದಾಗ ಮತ್ತು ನೀವು ಏನನ್ನೂ ಕಾಣಲು ಸಾಧ್ಯವಿಲ್ಲದಾಗ, ಕಾಡು ಪ್ರಾಣಿಗಳ ಶಬ್ದಗಳನ್ನು ಕೇಳಿದಾಗ, ನೀವು ಒಂದು ವಿಭಿನ್ನ ಹಂತದ ಗಮನದಲ್ಲಿರುತ್ತೀರಿ. ಅದು ಸಾವು ಬದುಕಿನ ಪ್ರಶ್ನೆಯಾದಾಗ, ನೀವು ಸಂಪೂರ್ಣವಾಗಿ ಒಂದು ವಿಭಿನ್ನ ರೀತಿಯ ಗಮನಿಸುವಿಕೆಯಲ್ಲಿರುತ್ತೀರಿ.

ಕೆಲ ವರ್ಷಗಳ ಹಿಂದೆ, ನಾನು ಜನರ ಒಂದು ಸಣ್ಣ ಗುಂಪೊಂದನ್ನು ಕರ್ನಾಟಕದ ಸುಬ್ರಹ್ಮಣ್ಯ ಮತ್ತು ಮಂಗಳೂರು ಮಧ್ಯದಲ್ಲಿರುವ ರೈಲು ಸುರಂಗದಲ್ಲಿ ಚಾರಣಕ್ಕೆ ಕರೆದುಕೊಂಡು ಹೋಗಿದ್ದೆ. ಅದು ಸುಮಾರು 300 ಸೇತುವೆಗಳು ಮತ್ತು 100 ಸುರಂಗಗಳನ್ನು ಒಳಗೊಂಡ ದಾರಿಯಾಗಿತ್ತು. ಬಹುತೇಕ ಸಮಯಗಳಲ್ಲಿ, ನೀವು ಒಂದೋ ಸೇತುವೆಯ ಮೇಲಿರುತ್ತೀರಿ ಅಥವಾ ಒಂದು ಸುರಂಗದಲ್ಲಿರುತ್ತೀರಿ, ಮತ್ತು ಅದೊಂದು ಅದ್ಭುತವಾದ ಪರ್ವತವಾಗಿತ್ತು. ಕೆಲವು ಸುರಂಗಗಳು ಒಂದು ಕಿಲೋ ಮೀಟರ್‍‍ವರೆಗೂ ಉದ್ದವಿದ್ದವು. ನೀವು ಅವುಗಳ ಒಳಗೆ ಹೋದರೆ ಹಗಲು ಹೊತ್ತಿನಲ್ಲೂ ಕಗ್ಗತ್ತಲಿರುತ್ತದೆ. ನಿಮ್ಮ ಕೈಯನ್ನೂ ನೀವು ನೋಡಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಸಮಯದ ನಂತರ ನೀವು ಕಣ್ಣುಗಳನ್ನು ತೆರೆದಿದ್ದೀರೋ ಅಥವಾ ಮುಚ್ಚಿದ್ದೀರೋ ನಿಮಗೆ ಗೊತ್ತಾಗುವುದಿಲ್ಲ, ಅಷ್ಟು ಕತ್ತಲಿರುತ್ತದೆ. ಬಹುಶಃ, ಬಹುತೇಕ ಜನರು ತಮ್ಮ ಜೀವನದಲ್ಲಿ ಎಂದಿಗೂ ಅಂತಹ ಸ್ಥಳದಲ್ಲಿ ಇದ್ದಿರುವುದಿಲ್ಲ – ನಕ್ಷತ್ರಗಳ ಬೆಳಕಾದರೂ ನಿಮಗೆ ಸ್ವಲ್ಪವಾದರೂ ದೃಷ್ಟಿಯ ಅರಿವನ್ನು ನೀಡುತ್ತವೆ. ಸುರಂಗಗಳಲ್ಲಿ, ಸಂಪೂರ್ಣವಾಗಿ ಏನೂ ಕಾಣುವುದಿಲ್ಲ; ಅದು ಕಗ್ಗತ್ತಲು. ಸ್ವಲ್ಪ ಸಮಯದ ನಂತರ ನೀವು ಕಣ್ಣುಗಳನ್ನು ಮುಚ್ಚಿದ್ದೀರೋ ಅಥವಾ ತೆರೆದುಕೊಂಡಿದ್ದೀರೋ ಎನ್ನುವುದು ನಿಮಗೆ ಗೊತ್ತಾಗುವುದಿಲ್ಲ ಏಕೆಂದರೆ ಅದು ಯಾವುದೇ ವ್ಯತ್ಯಾಸವನ್ನುಂಟುಮಾಡುವುದಿಲ್ಲ.

ನಾನು ಅವರು ಈ ಸುರಂಗಗಳ ಮೂಲಕ ಯಾವುದೇ ರೀತಿಯ ಬೆಳಕಿನ ಸಹಾಯವಿಲ್ಲದೆ ನಡೆದು ಹೋಗುವಂತೆ ಮಾಡಿದೆ. ಅಲ್ಲಿ ಒಂದು ಹಳ್ಳವಿರಬಹುದು, ಬಿರುಕು ಇರಬಹುದು, ಏನಾದರೂ ಇರಬಹುದು. ಮತ್ತು ಬಾವಲಿಗಳು ಅಲ್ಲೆಲ್ಲಾ ಹಾರಾಡುತ್ತಿದ್ದವು – ಅವುಗಳಿಗೆ ಏನೂ ಕಾಣುವುದಿಲ್ಲ ಆದರೆ ಅವುಗಳಿಗೆ ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವುದು ಖಚಿತವಾಗಿ ಗೊತ್ತಿರುತ್ತದೆ. ಅವು ನಿಮ್ಮ ಹತ್ತಿರವೇ ಹಾರಾಡುತ್ತಿರುತ್ತವೆ. ಪ್ರಾರಂಭದಲ್ಲಿ ಜನರು ಭಯಭೀತರಾದರು ಆದರೆ ಸ್ವಲ್ಪ ಸಮಯದ ನಂತರ, ನಿಧಾನವಾಗಿ ಅವರು ನಡೆಯಲು ಪ್ರಾರಂಭಿಸಿದರು ಮತ್ತು ಇಡೀ ಅನುಭವವನ್ನು ಆನಂದಿಸಲು ಪ್ರಾರಂಭಿಸಿದರು. ನೀವು ಅಂತಹ ಸ್ಥಳದಲ್ಲಿದ್ದರೆ, ನಿಮ್ಮ ಗಮನ ನಿಜವಾಗಿಯೂ ಉತ್ತಮಗೊಳ್ಳುತ್ತದೆ. ನೀವು ನಿಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ಈ ರೀತಿಯ ಗಮನವನ್ನು ನೀಡಿದರೆ, ಆಗ ನೀವು ಬೆಳಗುತ್ತೀರಿ.

ಗಮನವನ್ನು ನೀಡಿರಿ

ಆಶ್ರಮದ ಪ್ರತಿಯೊಂದು ಸಣ್ಣ ಸಣ್ಣ ಸಂಗತಿಗಳ ಕಡೆ ಗಮನ ನೀಡುವಂತೆ ಆಶ್ರಮದಲ್ಲಿರುವ ಜನರನ್ನು ನಾನು ನಿರಂತರವಾಗಿ ಒತ್ತಾಯಿಸುವುದು ಕೇವಲ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿಯಷ್ಟೇ ಅಲ್ಲ. ಅದು ಈ ಸ್ಥಳದ ಸೌಂದರ್ಯದ ಕುರಿತಾದದ್ದಷ್ಟೇ ಅಲ್ಲ, ಬದಲಾಗಿ ಪ್ರತಿಯೊಂದು ಸಣ್ಣ ಸಂಗತಿಯ ಬಗ್ಗೆಯೂ ಸಂಪೂರ್ಣವಾಗಿ ಗಮನ ಕೊಡುವಂತಾಗಲಿ ಎನ್ನುವುದು ನನ್ನ ಉದ್ಧೇಶ. ಒಂದು ಕಲ್ಲು ಕಲ್ಲು ತಲೆಕೆಳಗಾದರೂ, ನೀವದನ್ನು ಗಮನಿಸಬೇಕು. ಅದು ಕಲ್ಲಿನ ಕುರಿತಾದದ್ದಲ್ಲ, ನೀವು ಶ್ರದ್ಧಾವಂತರಾಗಿದ್ದೀರಿ ಎನ್ನುವುದೇ ಮುಖ್ಯ. ನೀವು ಈ ಶ್ರದ್ಧೆಯನ್ನು ಅತ್ಯುನ್ನತ ಹಂತಕ್ಕೆ ತೆಗೆದುಕೊಂಡು ಹೋದರೆ, ಆಗ ನಿಮ್ಮ ಬೆನ್ನುಹುರಿ ನಿಜವಾಗಿಯೂ ಬೆಳಗುತ್ತದೆ. ಅದನ್ನು ನೀವು ಸ್ಪರ್ಶಿಸಿರುತ್ತೀರಿ, ಅದರಲ್ಲೇನೂ ಸಂಶಯವಿಲ್ಲ. ನೀವು ಅದನ್ನು ಬೆಳಗುವಂತೆ ಮಾಡಬೇಕೆಂದಿದ್ದರೆ, ನೀವು ಗಮನವನ್ನು ನೀಡಬೇಕು. ನೀವು ಉನ್ನತವಾದ ಗಮನದ ಅರಿವನ್ನು ಕಲಿಯಬೇಕೆಂದರೆ, ನೀವು ನಿಮ್ಮೊಳಗೆ ಯಾವುದರ ಬಗ್ಗೆ ಗಮನ ಕೊಡಬೇಕು ಮತ್ತು ಯಾವುದರ ಬಗ್ಗೆ ಗಮನ ಕೊಡಬಾರದು ಎಂಬುದನ್ನು ಅರಿಯುವ ವಿಧಾನಗಳನ್ನು ಕಲಿಸಿಕೊಡಬಹುದು.

ನಿಮ್ಮಲ್ಲಿ ನಿರ್ದಿಷ್ಟ ಪ್ರಮಾಣದ ಗಮನವಿರುವುದರಿಂದಲೇ ನಿಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಚಿಂತನೆ ಮೂಡಿದೆ.

ನೀವು ಅತ್ಯಂತ ಗಮನ ಶೀಲರಾದರೆ, ಆ ಗಮನಿಸುವಿಕೆಯನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ನೋಡಬಹುದು. ನೀವು ನಿಮ್ಮ ಜೀವನದ ಬಗ್ಗೆ ನಿಜವಾಗಿಯೂ ಗಮನವನ್ನು ನೀಡಿದಾಗ ಮಾತ್ರ, ಈ ಜೀವನ ಎಲ್ಲಿ ಪ್ರಾರಂಭವಾಗಿದೆ ಮತ್ತು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದು ನಿಮಗೆ ಗೊತ್ತಿಲ್ಲ ಎಂಬ ಅರಿವು ನಿಮಗೆ ಆಗುತ್ತದೆ. ಈಗ ನೀವು ಮಾಡುತ್ತಿರುವುದೇ ಘನಕಾರ್ಯ ಎಂಬಂತೆ ನೀವು ಬದುಕುತ್ತಿರುವಿರಿ. ನೀವು ಸ್ವಲ್ಪ ಗಮನವನ್ನು ನೀಡಿದರೆ, “ಇದು ಅದಲ್ಲ” ಎಂಬುದು ನಿಮಗೆ ಗೊತ್ತಾಗುತ್ತದೆ.

ನಿಮ್ಮಲ್ಲಿ ನಿರ್ದಿಷ್ಟ ಪ್ರಮಾಣದ ಗಮನವಿರುವುದರಿಂದಲೇ ನಿಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಚಿಂತನೆ ಮೂಡಿದೆ. ನೀವು ಎಲ್ಲ ಸಂಗತಿಗಳಿಗೂ ಇನ್ನಷ್ಟು ಹೆಚ್ಚಿನ ಗಮನ ನೀಡಿದರೆ, ಮೇಲಾಗಿ ನೀವು ನಿಮ್ಮ ಗಮನಿಸುವ ಸಾಮರ್ಥ್ಯವನ್ನು ಉನ್ನತಪಡಿಸಿಕೊಂಡರೆ, ಅದನ್ನು ಪವಾಡ ಸದೃಶ ರೀತಿಗಳಲ್ಲಿ ಉಪಯೋಗಿಸಬಹುದು. ಅದು ನಿಜವಾಗಿಯೂ ಶಕ್ತಿಯ ಪರ್ಯಾಯ ಮೂಲವೊಂದನ್ನು ಸೃಷ್ಟಿಸಬಲ್ಲುದು.

Editor’s Note: Find more of Sadhguru’s insights in the ebook “From Creation to Creator”, available at Isha Downloads. Pay what you wish and download it. Enter “0” or click “Claim for free” for a free download.