ಪ್ರಶ್ನೆ: ನಮಸ್ಕಾರ ಸದ್ಗುರು, ನಾನು ಸರಿಯಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ನಾನು ಇತರರಿಗೆ ಹೊರೆಯಾಗುತ್ತಿದ್ದೇನೆ ಎಂಬ ಭಾವನೆ ನನ್ನಲ್ಲಿದೆ. ಅದರ ಬಗ್ಗೆ ನಾನು ಏನು ಮಾಡಬಹುದು?

ಸದ್ಗುರು: ಸದ್ಗುರು: ಒಂದು ಕ್ಷಣವೂ ಗಮನವನ್ನು ಸಡಿಲಿಸದೆ, ನೀವು ಏನು ಮಾಡಬೇಕೆಂಬುದರ ಬಗ್ಗೆ ನಿಮ್ಮ ಗಮನವನ್ನು ನಿರಂತರವಾಗಿ ಹಿಡಿದಿಟ್ಟುಕೊಳ್ಳಬೇಕು. ಮೊದಲಿಗೆ ದಿನವೂ ಒಂದು ಗಂಟೆಯ ಕಾಲ ನಿಮ್ಮ ಗಮನವನ್ನು ನೆಲೆಸುವುದರ ಮೂಲಕ ಪ್ರಾರಂಭಿಸಿರಿ, ನಂತರ ಅದನ್ನು ಒಂದು ದಿನಕ್ಕೆ ವಿಸ್ತರಿಸಿರಿ. ನಿಮ್ಮ ಗಮನವನ್ನು ನೀವು ಹತೋಟಿಯಲ್ಲಿಟ್ಟುಕೊಂಡರೆ ಮತ್ತು ಅದರಲ್ಲಿ ಸಾಕಷ್ಟು ತೀವ್ರತೆ ಇದ್ದರೆ, ವಿಶ್ವದ ಪ್ರತಿಯೊಂದು ಅವಕಾಶವು ನಿಮಗಾಗಿ ತೆರೆದುಕೊಳ್ಳುತ್ತದೆ. ನೀವು ಅದನ್ನು ನಿಮ್ಮ ಏಕೈಕ ಆದ್ಯತೆಯನ್ನಾಗಿ ಮಾಡಿದರೆ ಮಾತ್ರ ಅದರ ಕುರಿತಾದ ಸಾಧ್ಯತೆಯು ವಾಸ್ತವವಾಗುತ್ತದೆ. ಸಮಸ್ಯೆಯೆಂದರೆ, ನಿಮಗೆ ಇದೀಗ ಹಲವು ಆದ್ಯತೆಗಳಿವೆ. ಹಾಗೆಂದರೆ ನೀವು ನಿಮ್ಮ ಜೀವನವನ್ನೇ ತ್ಯಜಿಸಬೇಕು ಅಥವಾ ನೀವು ಒಂದು ನಿರ್ದಿಷ್ಟ ಕೆಲಸವನ್ನು ಮಾತ್ರ ಮಾಡಬೇಕು ಎಂದಲ್ಲ. ನೀವು ಏನು ಬೇಕಾದರೂ ಮಾಡುತ್ತಿರಬಹುದು, ಆದರೆ ನೀವು ಒಂದೇ ಒಂದು ಆದ್ಯತೆಯನ್ನು ಇಟ್ಟುಕೊಳ್ಳಬೇಕು. ನೀವು ಆ ದೃಷ್ಟಿಯಲ್ಲಿ ನೋಡಿದರೆ, ಹೇಗೆ ತಾನೆ ಹೊರೆಯಾಗುತ್ತೀರಿ?

ದಕ್ಷಿಣ ಭಾರತದಲ್ಲಿ ಹೊಂಗೆ ಮರ ಎಂಬ ಬಹು ಮೌಲ್ಯದ ಮರವಿದೆ. ಇದು ಯಾವುದೇ ಹಣ್ಣುಗಳನ್ನು ನೀಡುವುದಿಲ್ಲ. ಬೇವಿನ ಮರದಂತೆ ಅದರ ಕೊಂಬೆಗಳ ಕಡ್ಡಿಯಿಂದ ನಿಮ್ಮ ಹಲ್ಲುಗಳನ್ನು ಉಜ್ಜುವಂತಿಲ್ಲ. ಆದರೂ ಅದು ಭಾರಿ ಮೌಲ್ಯವನ್ನು ಹೊಂದಿದೆ, ಏಕೆಂದರೆ ಅದು ಯಾವುದೇ ಸದ್ದಿಲ್ಲದೆ ತನ್ನದೇ ಆದ ಕೆಲಸವನ್ನು ಮಾಡುತ್ತದೆ. ಈ ಮರವನ್ನು ದಕ್ಷಿಣ ಭಾರತದ ಹಾಡುವ ಪಕ್ಷಿಗಳು ಬಹಳ ಇಷ್ಟಪಡುತ್ತವೆ ಎಂದು ಹೇಳಲಾಗುತ್ತದೆ. ಈ ಮರಗಳು ಇತರ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತವೆ, ಆದ್ದರಿಂದಲೇ ಅವು ಇತರ ಮರಗಳಿಗಿಂತ ಹೆಚ್ಚು ಜೀವವೈವಿಧ್ಯವನ್ನು ತಮ್ಮೆಡೆಗೆ ಸೆಳೆಯುತ್ತವೆ ಎಂದು ವೈಜ್ಞಾನಿಕವಾಗಿ ಕಂಡುಕೊಳ್ಳಲಾಗಿದೆ. ನಾನು ಇದರ ಬಗ್ಗೆ ಹೆಚ್ಚು ಮುಂದುವರೆಯಲು ಬಯಸುವುದಿಲ್ಲ, ಆದರೆ ನೀವು ಹೊಂಗೆ ಮರದ ಕೆಳಗೆ ಕುಳಿತುಕೊಂಡರೆ, ನೀವು ಅದರ ನೆರಳಿನಲ್ಲಿ ಕುಳಿತಾಗ ಅದು ಕೊಡುವ ತಂಪು ಇತರ ಯಾವುದೇ ಮರಗಳಿಗಿಂತ ಬಹಳ ಭಿನ್ನವಾಗಿರುತ್ತದೆ. ನಾವು ಹಲವು ಕಾರಣಗಳನ್ನು ಹುಡುಕಬಹುದು, ಆದರೆ ಅದನ್ನು ಕುಯ್ದು ಒಳನೋಡುವುದರ ಮೂಲಕ, ನೀವು ಅದರ ಭೌತಿಕ ಅಂಶಗಳನ್ನು ಮಾತ್ರ ತಿಳಿಯಬಲ್ಲಿರಿ - ಅದರ ಸಾರವನ್ನು ಅರಿಯಲು ಸಾಧ್ಯವಿಲ್ಲ.

ಜೀವನದ ಮೌಲ್ಯವು ಉಪಯುಕ್ತತೆಯಲ್ಲಿಲ್ಲ

ನಾವು ಜೀವನವನ್ನು ಅದರ ಸೌಂದರ್ಯ, ಉತ್ಸಾಹ ಮತ್ತು ತೀವ್ರತೆಗಾಗಿ ಗೌರವಿಸುತ್ತೇವೆ, ಅದರ ಉಪಯುಕ್ತತೆಗಾಗಿ ಅಲ್ಲ. ಆದ್ದರಿಂದ, ಒಂದು ಆಸ್ತಿಯಂತೆ ಆಗಲು ಪ್ರಯತ್ನಿಸಬೇಡಿ, ಯಾರಾದರೂ ನಿಮ್ಮನ್ನು ಖರೀದಿಸಲು ಬಯಸುತ್ತಾರೆ ಅಷ್ಟೇ. ನಿಮ್ಮೊಳಗೆಯೇ ಉತ್ಸಾಹಭರಿತ, ಸಂತೋಷದಾಯಕ ಮತ್ತು ಸುಂದರವಾಗಿರಿ. ಹಸಿದ ಜನರು ಮರದಲ್ಲಿ ಹಣ್ಣುಗಳನ್ನು ಹುಡುಕುತ್ತಾರೆ. ಸಂತೋಷಭರಿತ ಜನರು ಮರದಲ್ಲಿ ಹೂವುಗಳನ್ನು ಹುಡುಕುತ್ತಾರೆ. ನಾವು ಆಶ್ರಮವನ್ನು ಪ್ರಾರಂಭಿಸಿದಾಗ, ಇಡೀ ಜಾಗದಲ್ಲಿ ಕೇವಲ ಮೂರು ಮರಗಳು ಮಾತ್ರ ಇದ್ದವು. ಸ್ವಯಂಸೇವಕರು ಮತ್ತು ಇಲ್ಲಿನ ನಿವಾಸಿಗಳು ಮರಗಳನ್ನು ನೆಡಲು ಒಗ್ಗೂಡಿದಾಗ, ಹಣ್ಣಿನ ಮರಗಳು ಮತ್ತು ತರಕಾರಿಗಳನ್ನು ಮಾತ್ರ ಬಯಸುವ ಜನರ ಒಂದು ಭಾಗವಿತ್ತು. ಆದರೆ ನಾನು ಹೂಬಿಡುವ ಮರಗಳನ್ನೂ ನೆಡಲು ಒತ್ತಾಯಿಸಿದೆ.

ಹೂವುಗಳು ನಿಷ್ಪ್ರಯೋಜಕ ಮತ್ತು ದುರ್ಬಲವಾಗಿರುತ್ತವೆ. ಆದರೆ ನೀವು ಆಶ್ರಮಕ್ಕೆ ಬಂದರೆ, ವಿಶೇಷವಾಗಿ ದೊಡ್ಡ ನಗರಗಳಲ್ಲಿ ವಾಸಿಸುವವರು - ಪ್ರತಿದಿನವೂ ದುರ್ವಾಸನೆಯಲ್ಲಿ ಬದುಕುತ್ತಿದ್ದರೆ - ಈ ಸ್ಥಳದ ಸುಗಂಧವನ್ನು ನೀವು ಆನಂದಿಸಬಹುದು, ಈ ನಿರುಪಯುಕ್ತ ಹೂವುಗಳಿಂದಾಗಿ ಇದು ನಡೆಯುತ್ತಿದೆ. ಆದ್ದರಿಂದ ಯಾವುದೇ ರೀತಿಯಲ್ಲಿ ಆಸ್ತಿಯಂತಾಗಲು ಪ್ರಯತ್ನಿಸಬೇಡಿ. ಕೇವಲ ಜೀವವಾಗಿರಿ - ಎಲ್ಲ ರೀತಿಯಲ್ಲೂ ಪೂರ್ಣ ಪ್ರಮಾಣದ ಜೀವ. ಪ್ರತಿಯೊಬ್ಬರೂ ಪೂರ್ಣ ಪ್ರಮಾಣದ ಜೀವ(ನ)ವನ್ನು ಇಷ್ಟಪಡುತ್ತಾರೆ. ನೀವು ಹೊಲಸನ್ನು ಕಟ್ಟಿಕೊಂಡ ಜೀವ(ನ)ವಾಗಿದ್ದರೆ, ನಿಧಾನವಾಗಿ ದುರ್ವಾಸನೆಯು ನಿಮ್ಮ ತಲೆಗೆ ಏರುತ್ತದೆ. ಶುದ್ಧತೆಯು ಒಂದು ಗುಣವಲ್ಲ - ಅದು ಹೊಲಸು ಇಲ್ಲದಿರುವುದು. ನೀವು ಅದ್ಭುತ ಮನುಷ್ಯರಾಗಲು ಬಯಸಿದರೆಂದರೆ, ನಿಮ್ಮ ಜೀವನಕ್ಕೆ ಯಾವುದೇ ಸೇರ್ಪಡೆಗಳ ಅಗತ್ಯವಿಲ್ಲ - ನಿಮಗೆ ಕಳೆದುಕೊಳ್ಳುವ ಗುಣವಿರಬೇಕು. ನೀವು ಕೆಲವು ವಿಷಯಗಳನ್ನು ಕೈಬಿಟ್ಟರೆಂದರೆ, ಅದ್ಭುತವಾಗುತ್ತೀರಿ.

ಸಂಪೂರ್ಣ ಜೀವನ

ಜೀವನವು ತಾನಾಗಿಯೇ ಸಂಪೂರ್ಣವಾಗಿದೆ ಮತ್ತು ಸುಂದರವಾಗಿದೆ, ಅದಕ್ಕೆ ಯಾವುದೇ ಹೆಚ್ಚುವರಿ ಭಾಗಗಳ ಅಗತ್ಯವಿಲ್ಲ. ನೀವೇ ಗಮನಿಸಿ - ನಿಮ್ಮ ವ್ಯವಸ್ಥೆ ತಾನು ಸಹಜವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ನಿರ್ವಹಿಸಬೇಕಾದರೆ, ನೀವು ಸಂಪೂರ್ಣ ಜೀವವಾಗಿರಬೇಕು. ನಿಮಗೆ ಈಗ ಸಂಪೂರ್ಣತೆಯ ಭಾವನೆ ಇಲ್ಲದಿದ್ದರೆ, ನಿಮ್ಮ ಮೆದುಳನ್ನು ಹೇಗೆ ಬಳಸಬೇಕೆಂದು ನಿಮಗೆ ತಿಳಿದಿಲ್ಲ ಎಂದರ್ಥ. ಒಂದು, ನೀವು ಅದನ್ನು ನಿಮ್ಮ ಯೋಗಕ್ಷೇಮಕ್ಕಾಗಿ ಬಳಸಿಕೊಳ್ಳಲು ಕಲಿಯಬೇಕು, ಅಥವಾ ಸ್ವಲ್ಪ ಸಮಯದವರೆಗೆ ಅದನ್ನು ಪಕ್ಕಕ್ಕೆ ಇರಿಸಲು ನೀವು ಕಲಿಯಬೇಕು. ನಿಮ್ಮನ್ನು ಹಾಗೂ ಇತರರನ್ನೂ ಕೇವಲ ಸ್ವತ್ತು ಅಥವಾ ಹೊಣೆಯೆಂದು ನೋಡಬೇಡಿ. ನಾನು ಜೀವನವನ್ನು ಅದರ ಉಪಯುಕ್ತತೆಗಾಗಿ ಗೌರವಿಸುವುದಿಲ್ಲ ಬದಲಾಗಿ ಅದರ ಗುಣಮಟ್ಟ ಮತ್ತು ಉತ್ಸಾಹಪೂರ್ಣತೆಗೆ ಗೌರವಿಸುತ್ತೇನೆ.

ಎತ್ತಿನಗಾಡಿಯನ್ನು ತಳ್ಳಲು ಬಳಸಲ್ಪಟ್ಟ ಎತ್ತು, ಕಾಡಿನಲ್ಲಿ ಸುಮ್ಮನೆ ಅಲೆದಾಡುತ್ತಿರುವ ಗೂಳಿಯನ್ನು ನೋಡುತ್ತಾ, “ಎಂತಹ ಅನುಪಯುಕ್ತ ಜೀವನ!” ಎಂದು ಯೋಚಿಸುತ್ತದೆ. ಜೀವನದ ಉಪಯುಕ್ತತೆಯ ಬಗ್ಗೆ ಮಾತ್ರ ಯೋಚಿಸಿದರೆ ನಿಮಗೆ ಹೀಗೆಯೇ ಆಗುವುದು. ನೀವು ಜನ್ಮ ಪಡೆದು, ಒಂದು ದಿನ ಸಾಯುವ ಹಾಗಿದ್ದರೆ ಏನು ತಾನೆ ಉಪಯೋಗ? ಮಾನವ ಜನಾಂಗದ ಉಪಯೋಗವೇನು? ಈ ಜೀವನದ ಉಪಯೋಗವೇನು? ಜೀವನಕ್ಕೆ ಯಾವುದೇ ರೀತಿಯ ಉಪಯೋಗವಿರುವುದಿಲ್ಲ. ನೀವು ಸರಿಯಾದ ಲಯವನ್ನು ಕಂಡುಕೊಂಡರೆ, ಜೀವನವು ಅದ್ಭುತವಾಗಿರುತ್ತದೆ.

IEO

ಸಂಪಾದಕರ ಟಿಪ್ಪಣಿ: ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಈಗ ಕನ್ನಡದಲ್ಲಿ ಲಭ್ಯ. ಸವಾಲಿನ ಸಮಯಕ್ಕಾಗಿ 50% ಗೆ ಅರ್ಪಿಸಲಾಗುತ್ತಿದೆ. ಈಗಲೇ ನೋಂದಾಯಿಸಿ. ಕೋವಿಡ್ ಯೋಧರಿಗೆ ಉಚಿತ.

A version of this article was originally published in Isha Forest Flower, January 2017. Download as PDF on a “name your price, no minimum” basis or subscribe to the print version.