ಸದ್ಗುರು: ಜಗತ್ತಿನಲ್ಲಿ ಪ್ರತಿವರ್ಷ 8 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂಖ್ಯೆ ಕೊಲೆಗಳು ಮತ್ತು ಯುದ್ಧ ಸಾವುಗಳ ಒಟ್ಟು ಸಂಖ್ಯೆಗೂ ಮೀರಿದ್ದು. ಇದರರ್ಥ ಪ್ರತಿ ನಲವತ್ತು ಸೆಕೆಂಡಿಗೆ ಒಬ್ಬರು ತಮ್ಮ ಪ್ರಾಣವನ್ನು ತೆಗೆದುಕೊಳ್ಳುತ್ತಿದ್ದಾರೆ. ನಿಮಗೆ ತಿಳಿದಿರುವ ಯಾರಾದರೂ ಅಥವಾ ಸಮಾಜದಲ್ಲಿನ ಜನಪ್ರಿಯ ವ್ಯಕ್ತಿಗಳು ಯಾರಾದರೂ ಸತ್ತಾಗ ಮಾತ್ರ ಇದು ಎಲ್ಲರ ಗಮನಕ್ಕೆ ಬರುತ್ತದೆ. 

ಆತ್ಮಹತ್ಯಾ ಆಲೋಚನೆಗಳಿಗೆ ಕಾರಣವೇನು?

ಮನುಷ್ಯರು ತಮ್ಮ ಪ್ರಾಣವನ್ನೇ ತೆಗೆದುಕೊಳ್ಳಲು ಏಕೆ ಬಯಸುತ್ತಾರೆ? ಕೆಲವರು ತಮ್ಮ ಜೀವನದಲ್ಲಿನ ಸನ್ನಿವೇಶಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ಬಹುಪಾಲು ಜನರು ತಮ್ಮ ಮಾನಸಿಕ ಸಂದರ್ಭಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಯಾರಾದರೂ ತಮ್ಮ ಸ್ವಭಾವದಿಂದಲೇ ಆನಂದಮಯವಾಗಿದ್ದರೆ, ಅವರು ತಮ್ಮ ಜೀವವನ್ನು ಏಕೆ ತೆಗೆದುಕೊಳ್ಳುತ್ತಾರೆ? ಜನರೇಕೆ ಖಿನ್ನತೆಗೆ ಒಳಗಾಗುತ್ತಾರೆ?

ನಮ್ಮ ಶರೀರ ವಿಜ್ಞಾನ ಮತ್ತು ಮಾನಸಿಕ ರಚನೆಯನ್ನು ಹೇಗೆ ನಿರ್ವಹಿಸಬೇಕು ಎಂಬ ತಿಳುವಳಿಕೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಎಲ್ಲಿಯೂ ರಚಿಸಿಲ್ಲ. ಬಹಳ ಜನರಿಗೆ ತಮ್ಮ ಬುದ್ಧಿವಂತಿಕೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನೇ ಕಲಿಸಲಾಗುತ್ತಿಲ್ಲ. ನಿಮ್ಮಲ್ಲಿ ಈಗಿರುವುದರ ಅರ್ಧದಷ್ಟು ಮೆದುಳು ಇದ್ದಿದ್ದರೆ, ನಿಮಲ್ಲಿ ಯಾವುದೇ ರೀತಿಯ ಮಾನಸಿಕ ಕಾಯಿಲೆಗಳು ಇರುವುದಿಲ್ಲ. ಈಗ, ನೀವು ಒಂದು ನಿರ್ದಿಷ್ಟ ಮಟ್ಟದ ಬುದ್ಧಿವಂತಿಕೆಯನ್ನು ಹೊಂದಿದ್ದೀರಿ ಆದರೆ ಅವು ತರಬೇತಿಯ ಮೂಲಕ ಬಂದಿಲ್ಲ ಅಥವಾ ನಿಮ್ಮ ಬುದ್ಧಿವಂತಿಕೆಯನ್ನು ನಿಮ್ಮ ಯೋಗಕ್ಷೇಮಕ್ಕೆ ಹೇಗೆ ಬಳಸಬೇಕೆಂದು ಕಲಿಸುವ ಸಾಮಾಜಿಕ ಪರಿಸ್ಥಿತಿಯಲ್ಲಿ ನೀವು ವಾಸಿಸುತ್ತಿಲ್ಲ. ಆದ್ದರಿಂದ ನಿಮ್ಮ ಸ್ವಂತ ಬುದ್ಧಿವಂತಿಕೆ ನಿಮ್ಮ ವಿರುದ್ಧ ತಿರುಗುತ್ತಿದೆ. ಇದರಿಂದ ಹೊರಬರಲು ಯಾವುದೇ ಮಾರ್ಗವಿಲ್ಲ ಎಂಬಂತೆ ಅದು ಹತಾಶವಾಗಿದೆ. ಇದು ಜನರ ಆತ್ಮಹತ್ಯೆಗೆ ಕಾರಣವಾಗುತ್ತಿದೆ.

ಎಲ್ಲಿ ತಮ್ಮ ಸ್ವಭಾವದಿಂದಲೇ ಆನಂದಮಯವಾಗಿರಬಹುದೋ, ಎಲ್ಲಿ ಜೀವನದ ಅನುಭವವು ಸ್ವಾಭಾವಿಕವಾಗಿಯೇ ಆಹ್ಲಾದಕರವಾಗಿರುತ್ತದೆಯೋ, ಅಂತಹ ಅನುಭವವನ್ನು ಕೊಡುವಂತಹ ಕೆಲವು ಪ್ರಕ್ರಿಯೆಗಳನ್ನು ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ಕಲಿಸುವಂತಹ ಸರಿಯಾದ ವ್ಯವಸ್ಥೆ ಇದ್ದರೆ ಅದನ್ನು ಸುಲಭವಾಗಿ ನಿಲ್ಲಿಸಬಹುದು, ಅವರು ತಮ್ಮ ಸ್ವಭಾವದಿಂದಲೇ ಆನಂದಮಯವಾಗಿದ್ದಾಗ, ತಮ್ಮ ಜೀವವನ್ನು ಅವರು ಏಕೆ ಕೊನೆಗೊಳಿಸುತ್ತಾರೆ? ಅವರು ಖಿನ್ನತೆಗೆ ಏಕೆ ಒಳಗಾಗುತ್ತಾರೆ?

ಖಿನ್ನತೆಯಿಂದ ಹೊರಬರುವುದು

“ಖಿನ್ನತೆ” ಎಂಬ ಪದವು ಕೇವಲ ಖಾಯಿಲೆಗೆ ಸಂಬಂಧ ಪಟ್ಟ ಖಿನ್ನತೆಗೆ ಮಾತ್ರ ಬಳಸಲಾಗುವುದಿಲ್ಲ. ಇಂದು ನಿಮ್ಮ ಜೀವನದಲ್ಲಿ ಎರಡು ವಿಷಯಗಳು ತಪ್ಪಾಗಿ ನಡೆದರೆ, ನೀವು ಸ್ವಲ್ಪ ಖಿನ್ನತೆಗೆ ಒಳಗಾಗಬಹುದು. ಬಹುಪಾಲು ಜನರು ಕೆಲವು ಬದುಕಿನ ಪರಿಸ್ಥಿತಿಗಳಿಂದಾಗಿ ಒಂದಲ್ಲ ಒಂದು ಸಮಯದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಕೆಲವೇ ಗಂಟೆಗಳಲ್ಲಿ ಅವರು ಅದರಿಂದ ಹೊರಬರುತ್ತಾರೆ. ಅವರು ಅದರಿಂದ ಹೊರಬರಲು ಕೆಲವು ರೀತಿಯ ಸ್ಫೂರ್ತಿಯನ್ನು ಬಳಸುತ್ತಾರೆ – ಯಾರನ್ನಾದರೂ ಕುರಿತು ಅಥವಾ ತಮ್ಮ ದೇಶದ ಕುರಿತು ಅವರ ಪ್ರೀತಿ, ಅಥವಾ ಅವರ ಜೀವನದಲ್ಲಿ ಅವರಿಗೆ ಬಹು ಮುಖ್ಯವೆನಿಸುವ ವಿಷಯಗಳಲ್ಲಿ ತೊಡಗಿಸಿಕೊಂಡು ತಮಗೆ ತಾವು ಖಿನ್ನತೆಯಿಂದ ಹೊರಬರುತ್ತಾರೆ- . ಒಂದೋ ನಿಮ್ಮಷ್ಟಕ್ಕೆ ಮಾತನಾಡಿ ಅಥವಾ ನಿಮ್ಮ ಸ್ನೇಹಿತ ಅಥವಾ ಕುಟುಂಬದೊಂದಿಗೆ ಮಾತನಾಡಿ ನಿಮ್ಮನ್ನು ಖಿನ್ನತೆಯಿಂದ ಪಾರುಮಾಡಿಕೊಳ್ಳುತ್ತೀರಿ. ಆಗದಿದ್ದಲ್ಲಿ, ನೀವು ವೃತ್ತಿಪರ ಸಹಾಯವನ್ನು ಪಡೆಯುತ್ತೀರಿ.

ಖಿನ್ನತೆಯಿಂದ ಹೊರಬರಲು ಯಾವುದೇ ಮಾರ್ಗವಿಲ್ಲ ಎಂಬುದಾದರೆ, ಮನಶ್ಶಾಸ್ತ್ರಜ್ಞರು ನಿಮ್ಮೊಂದಿಗೆ ಕುಳಿತು ಗಂಟೆಗಳ ಕಾಲ ಏಕೆ ಮಾತನಾಡುತ್ತಾರೆ? ನಿಸ್ಸಂಶಯವಾಗಿ, ಮಾತುಕಥೆಯ ಮೂಲಕ ಸಮಸ್ಯೆ ಬಗೆಹರಿಸಬಹುದು ಎಂದು ಅವರಿಗೆ ತಿಳಿದಿದೆ. ಇದಿಲ್ಲದಿದ್ದರೆ ರಾಸಾಯನಿಕ ಸಹಾಯವಿದೆ. ರಸಾಯನಶಾಸ್ತ್ರದ ವಿಷಯಕ್ಕೆ ಬಂದರೆ, ಈ ಮಾನವ ಕಾರ್ಯವಿಧಾನವು ಪ್ರಪಂಚದ ಅತ್ಯಂತ ಅತ್ಯಾಧುನಿಕ ರಾಸಾಯನಿಕ ಕಾರ್ಖಾನೆಯಾಗಿದೆ. ಈ ಕಾರ್ಖಾನೆಯಲ್ಲಿ ನೀವು ಉತ್ತಮ ವ್ಯವಸ್ಥಾಪಕರಾಗಿದ್ದೀರಾ ಅಥವಾ ಕೆಟ್ಟದಾದ ವ್ಯವಸ್ಥಾಪಕರಾಗಿದ್ದೀರಾ ಎಂಬುದೇ ಪ್ರಶ್ನೆ. ಯೋಗದ ಮೂಲಕ ನೀವು ನಿಮ್ಮ ಸ್ವಂತ ರಾಸಾಯನಿಕ ಕಾರ್ಖಾನೆಯ ಸಮರ್ಥ ವ್ಯವಸ್ಥಾಪಕರಾಗುತ್ತೀರಿ.

ಯೋಗದ ಮೂಲಕ ಆತ್ಮಹತ್ಯೆ ತಡೆಗಟ್ಟುವಿಕೆ

ಲಕ್ಷಾಂತರ ಜನರು ಯೋಗದಿಂದ ಪ್ರಯೋಜನ ಪಡೆದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅದು ಕಾರ್ಯನಿರ್ವಹಿಸುತ್ತದೆ ಎಂದು ನಮ್ಮಲ್ಲಿ ಸಾಕಷ್ಟು ಪ್ರಾಯೋಗಿಕ ದತ್ತಾಂಶವಿದೆ. ಆದರೆ ಈಗಂತೂ ರಕ್ತದ ಗುರುತುಗಳನ್ನು ಅಧ್ಯಯನ ಮಾಡಲಾಗುತ್ತಿದೆ ಮತ್ತು ಯೋಗದ ಅಭ್ಯಾಸಗಳಿಂದ ಆನುವಂಶಿಕ ಸ್ವರೂಪಗಳು ಸಹ ಬದಲಾಗುತ್ತಿವೆ ಎಂದು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ.

..ಈಗಂತೂ ರಕ್ತ ಗುರುತುಗಳನ್ನು ಅಧ್ಯಯನ ಮಾಡಲಾಗುತ್ತಿದೆ ಮತ್ತು ಯೋಗದ ಅಭ್ಯಾಸಗಳಿಂದ ಆನುವಂಶಿಕ ನಿಲುವುಗಳು ಸಹ ಬದಲಾಗುತ್ತಿವೆ ಎಂದು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ.

ಸರಿಯಾದ ಯೋಗಾಭ್ಯಾಸಗಳನ್ನು ಮಾಡುವುದರ ಮೂಲಕ ನೀವು ಈ ಮಾನಸಿಕ ಕಾಯಿಲೆಗಳನ್ನು ತಡೆಯಲು ಸಾಧ್ಯ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ನೀವು ಅದರಿಂದ ಹೊರಬರಬಹುದು ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಯಾರಾದರೂ ಮಾನಸಿಕ ಖಿನ್ನತೆಯ ಸ್ಥಿತಿಯಲ್ಲಿದ್ದಾಗ, ಯೋಗಾಭ್ಯಾಸಗಳನ್ನು ಮಾಡಲು ಅವರನ್ನು ಪ್ರೇರೇಪಿಸುವುದು ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಸಮರ್ಪಿತ ಜನರು ಇದ್ದು, ಪ್ರತಿದಿನ ಅವರು ಅಭ್ಯಾಸವನ್ನು ಮಾಡಲು ಪ್ರೇರೇರಿಪಿಸದ ಹೊರತು, ಇದು ನಡೆಯುವುದಿಲ್ಲ. ವಿವಿಧ ಮಾನಸಿಕ ಸಮಸ್ಯೆಗಳಿಂದ ಹೊರಬಂದ ಸಾವಿರಾರು ಜನರನ್ನು ನಾನು ನಿಮಗೆ ತೋರಿಸಬಲ್ಲೆ ಏಕೆಂದರೆ ನಾವು ಪೂರಕ ವಾತಾವರಣವನ್ನು ಸೃಷ್ಟಿಸುತ್ತೇವೆ. ಪ್ರತಿ ಮನೆಯಲ್ಲೂ ಅದನ್ನು ಮಾಡಲು ಸಾಧ್ಯವಾಗದಿರಬಹುದು. ಆದಾಗ್ಯೂ, ಕೆಲವು ರೋಗ ಪ್ರಕರಣಗಳು ಬಹಳ ಕಠಿಣವಾಗಿರುತ್ತವೆ. ನಾವು ಅಂತಹ ಪ್ರಕರಣಗಳನ್ನು ಸಹ ನೋಡಿದ್ದೇವೆ ಮತ್ತು ಅವರ ಔಷಧಿಗಳ ಮಟ್ಟವನ್ನು ಗಮನಾರ್ಹವಾಗಿ ಇಳಿಸಿದ್ದೇವೆ. 

 

Editor's Note:  ಖಿನ್ನತೆ ಮತ್ತು ನಕಾರಾತ್ಮಕತೆಗೆ ವಿದಾಯ ಹೇಳಿ ಹಾಗು ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್‌ನೊಂದಿಗೆ ಸಂತೋಷದಾಯಕ, ಉತ್ಸಾಹಭರಿತ ಮತ್ತು ಪರಿಪೂರ್ಣ ಜೀವನವನ್ನು ನಡೆಸುವುದು ಹೇಗೆಂದು ಕಲಿಯಿರಿ, ಇದು COVID ವಾರಿಯರ್ಸ್‌ಗೆ ಉಚಿತವಾಗಿ ಮತ್ತು ಮತ್ತೆಲ್ಲರಿಗೂ 50 % ಗೆ ಲಭ್ಯವಿದೆ. ಈಗಲೇ ನೋಂದಣಿ ಮಾಡಿಕೊಳ್ಳಿ!

IEO