Main Centers
International Centers
India
USA
FILTERS:
SORT BY:
Even God cannot decide your inner wellbeing. If you refuse to cause misery to yourself, then no one can inflict it upon you.
ಪ್ರೀತಿ ಎಂಬುದು ಸ್ವ-ಪತನ. ಪ್ರೀತಿಯು ಉಂಟಾಗುವುದು ನೀವು ಅದರಲ್ಲಿ ಬಿದ್ದಾಗ, ಲೆಕ್ಕಾಚಾರ ಅಥವಾ ಅನುಕೂಲ ನೋಡಿಕೊಂಡಾಗಲ್ಲ.
ಜೀವನವು ಎಲ್ಲವನ್ನೂ ತನ್ನಲ್ಲಿ ಒಳಗೂಡಿಸಿಕೊಂಡಿದೆ. ಪ್ರತ್ಯೇಕತೆಯನ್ನು ಭಾವಿಸುವುದು ನಿಮ್ಮ ಮನಸ್ಸಷ್ಟೆ.
ಪ್ರಯತ್ನ ಬೇಕಿರುವುದು ಜೀವಂತವಾಗಿರಲು. ಸಾವು ಕರಾರುವಾಕ್ಕಾಗಿ ನಡೆಯುತ್ತದೆ – ಅದನ್ನು ನೀವು ಅಭ್ಯಾಸ ಮಾಡಬೇಕಾಗಿಲ್ಲ. ಆದರೆ ಜೀವಿಸಲು ಬಹಳ ಅಭ್ಯಾಸ ಅಗತ್ಯ.
ನೀವು ನಿಮ್ಮ ನೆನಪು ಮತ್ತು ಕಲ್ಪನೆಗಳನ್ನು ನರಳುತ್ತಿದ್ದರೆ, ಅದರರ್ಥ ನೀವು ಅಸ್ತಿತ್ವದಲ್ಲೇ ಇಲ್ಲದಿರುವುದನ್ನು ನರಳುತ್ತಿದ್ದೀರಿ.
ಭೂಮಿಯನ್ನು ನಾಶ ಮಾಡುತ್ತಿರುವುದು ಯಾರೋ ದುಷ್ಟ ಜನರಲ್ಲ. ಅದನ್ನು ಮಾಡುತ್ತಿರುವುದು ಸಂತೋಷದ ಹುಡುಕಾಟದಲ್ಲಿರುವ ನಾವೇ.
ನಾವು ಕೇವಲ ಈ ಭೂಮಿಯ ಮೇಲೆ ಜೀವಿಸುತ್ತಿಲ್ಲ – ನಾವು ಈ ಭೂಮಿಯೇ ಆಗಿದ್ದೇವೆ. ನಿಮಗೆ ಇದು ಇಂದು ಅರ್ಥವಾಗದೇ ಇದ್ದರೆ, ನಿಮ್ಮನ್ನು ಹೂತಾಗ ನಿಮಗಿದು ಅರ್ಥವಾಗುತ್ತದೆ.
ಎಲ್ಲ ಸಮಸ್ಯೆಗಳ ಮೂಲ ನಿಮ್ಮೊಳಗೇ ಇದೆ. ಪರಿಹಾರಗಳೂ ಕೂಡ ನಿಮ್ಮೊಳಗೇ ಇದೆ.
ನಿಮ್ಮೊಳಗೆ ನೀವು ಹೇಗಿದ್ದೀರಿ ಎಂಬುದು ನಿಮ್ಮಿಂದಲೇ ನಿರ್ಧರಿತವಾಗಬೇಕು. ‘ಆಧ್ಯಾತ್ಮಿಕ’ರಾಗಿರುವುದರ ಅರ್ಥ ಅದೇ.
ನಿಮ್ಮ ಅಂತರಂಗದ ಅನುಭವ ಚೆನ್ನಾಗಿದ್ದರೆ ಅದು ಹೊರಗಿನ ಸನ್ನಿವೇಶವನ್ನು ಸುಂದರವಾಗಿಸುತ್ತದೆ. ಆದರೆ ನಿಮ್ಮ ಅಂತರಂಗವು ಚೆನ್ನಾಗಿಲ್ಲದಿದ್ದರೆ, ನೀವು ವಸಂತವನ್ನೂ ನರಳುತ್ತೀರಿ.
ನೀವು ಜಗತ್ತನ್ನು ನಿಭಾಯಿಸಬೇಕಾಗಿಲ್ಲ. ನಿಮ್ಮನ್ನು ನೀವು ನಿಭಾಯಿಸಲು ಕಲಿತರೆ ಸಾಕು, ಎಲ್ಲವೂ ನಿಭಾಯಿಸಲ್ಪಡುತ್ತದೆ.
ಕೆಲವೇ ಕೆಲವರಷ್ಟೆ ನಿಜವಾಗಿಯೂ ಜೀವಿಸುತ್ತಿದ್ದಾರೆ. ಉಳಿದವರು ಜೀವಿಕೆ ನೋಡಿಕೊಳ್ಳುತ್ತಿದ್ದಾರೆ ಅಷ್ಟೆ.