Main Centers
International Centers
India
USA
FILTERS:
SORT BY:
ನಿಮ್ಮ ಬದುಕಿನ ಅತ್ಯಂತ ಮಧುರವಾದ ಕ್ಷಣಗಳು ನೀವು ಸಂತೋಷವನ್ನು ವ್ಯಕ್ತಪಡಿಸುವ ಕ್ಷಣಗಳು, ಸಂತೋಷವನ್ನು ಅರಸುವ ಕ್ಷಣಗಳಲ್ಲ.
ಯೋಗವನ್ನು ಚಿಕಿತ್ಸೆಯಾಗಿ ಬಳಸುವುದು ವಿಮಾನವನ್ನು ಬಸ್ಸಾಗಿ ಬಳಸಿದಂತೆ.
ಜೀವನದ ಬಗ್ಗೆ ನೀವು ಹೆಚ್ಚು ಸಿದ್ಧಾಂತಗಳನ್ನು ಮಾಡಿಕೊಂಡಷ್ಟೂ ನಿಮ್ಮ ಜೀವಂತಿಕೆ ಕಡಿಮೆಯಾಗುತ್ತದೆ.
ನಿಶ್ಚಲತೆ, ಲವಲವಿಕೆ, ಮತ್ತು ಉನ್ಮತ್ತತೆ – ಇವೆಲ್ಲವೂ ಒಟ್ಟಾಗಿ ನಡೆಯುವುದೇ ಜೀವನದ ಪರಮೋಚ್ಛ ಸ್ಥಿತಿ.
ಜಗತ್ತು ನಿಮ್ಮತ್ತ ಏನನ್ನು ಬೀಸುತ್ತದೆ ಎಂಬುದು ಯಾವಾಗಲೂ ನಿಮ್ಮ ಕೈಯಲ್ಲಿಲ್ಲ. ಆದರೆ ನೀವದರಿಂದ ಏನನ್ನು ಮಾಡಿಕೊಳ್ಳುತ್ತೀರಿ ಎಂಬುದು ನೂರಕ್ಕೆ ನೂರು ನಿಮ್ಮದೇ ಕೈಯಲ್ಲಿದೆ.
ನಿಮ್ಮ ಮನಸ್ಸಿನಲ್ಲಿ ಏನೇ ತೊಳಲಾಟ ಉಂಟಾದರೂ ನಿಮ್ಮ ಬುದ್ಧಿಶಕ್ತಿ ನಿಮಗೇ ವಿರುದ್ಧವಾಗಿಬಿಟ್ಟಿದೆ ಎಂದರ್ಥ.
ಪ್ರೀತಿ ಎಂಬುದು ನಿಮ್ಮೊಳಗಿನ ಒಂದು ಮಧುರವಾದ ಭಾವನೆ. ಆ ಇನ್ನೊಬ್ಬ ವ್ಯಕ್ತಿ ಹೊರಟು ಹೋದರೂ ನೀವು ನಿಮ್ಮೊಳಗೆ ಪ್ರೀತಿಯನ್ನು ಅನುಭವಿಸಬಲ್ಲಿರಿ.
ನಿನ್ನೆ ನಡೆದದ್ದನ್ನು ನೀವು ನರಳುತ್ತಿದ್ದರೆ, ನೀವು ನರಳುತ್ತಿರುವುದು ನಿಮ್ಮ ನೆನಪನ್ನು, ನಿಮ್ಮ ಜೀವನವನ್ನಲ್ಲ.
ಕಲಿಯುವಿಕೆ ಎಂಬುದು ಮಾಹಿತಿ ಸಂಗ್ರಹಣೆಯಲ್ಲ. ಕಲಿಯುವಿಕೆ ಎಂಬುದು ಗ್ರಹಣಶೀಲತೆ.
ನೀವು ನಶ್ವರರು ಎಂದು ನೀವು ಮನಗಂಡರಷ್ಟೇ ನೀವು ಪ್ರಜ್ಞಾಪೂರ್ವಕರಾಗುತ್ತೀರಿ. ಇಲ್ಲವಾದರೆ ನೀವು ಬಾಳನ್ನು ಪ್ರಜ್ಞಾಹೀನವಾಗಿ ಬಾಳುತ್ತೀರಿ.
ಸಂತೋಷವು ನೀವು ಪಡೆಯುವಂತದ್ದಲ್ಲ, ಬದಲಿಗೆ ನೀವು ನಿಮ್ಮ ಸ್ವರೂಪಕ್ಕೆ ಮರಳುವುದಾಗಿದೆ.
ಭಾರತದ ರಾಷ್ಟ್ರೀಯತೆ ಎಲ್ಲ ಮತಧರ್ಮಗಳಿಗಿಂತಲೂ ಪ್ರಾಚೀನವಾದದ್ದು. ನಾವು ಹಿಂದೆಯೂ ಒಂದು ರಾಷ್ಟ್ರವಾಗಿದ್ದೆವು, ಮತ್ತು ಈಗಲೂ ಒಂದು ರಾಷ್ಟ್ರವಾಗಿದ್ದೇವೆ. ಪರಮಮುಕ್ತಿಯ ಹಂಬಲವು ನಮ್ಮನ್ನು ಸದಾ ಒಂದಾಗಿರಿಸಿದೆ.