Main Centers
International Centers
India
USA
FILTERS:
SORT BY:
ಜೀವವು ನಿರಾಳವಾಗಿಯೇ ಇದೆ. ಒತ್ತಡದಲ್ಲಿರುವುದು ಮನಸ್ಸು ಅಷ್ಟೆ.
ಜಗತ್ತಿನಲ್ಲಿ ಬಹುತೇಕರು ಬ್ಯುಸಿಯಾಗಿಲ್ಲ, ಅವರ ಮನಸ್ಸು ಅನಗತ್ಯ ಸಂಗತಿಗಳಿಂದ ಕಿಕ್ಕಿರಿದು ಹೋಗಿದೆ ಅಷ್ಟೆ.
ದೇವರಿಗೆ ನಿಮ್ಮ ಭಕ್ತಿಯ ಅಗತ್ಯವಿಲ್ಲ. ಭಾವನೆಯ ಉತ್ತುಂಗವನ್ನು ಅನುಭವಿಸುವ ಅಗತ್ಯವಿರುವುದು ಮಾನವ ಹೃದಯಕ್ಕೆ.
ಅಟ್ಯಾಚ್ಮೆಂಟ್ ಎಂಬುದು ಪ್ರೀತಿಯಲ್ಲ. ನೀವು ಯಾರನ್ನಾದರೂ ಹಚ್ಚಿಕೊಂಡಾಗ ಅದು ಆ ವ್ಯಕ್ತಿಯ ಬಗ್ಗೆಯಾಗಿರುವುದಿಲ್ಲ, ಬದಲಿಗೆ ನಿಮ್ಮೊಳಗೇ ಇರುವ ಅಪೂರ್ಣತೆಯ ಬಗ್ಗೆಯಾಗಿರುತ್ತದೆ.
ವಯಸ್ಸಿನೊಂದಿಗೆ ನಿಮ್ಮ ದೈಹಿಕ ಚುರುಕುತನ ಕುಗ್ಗಬಹುದು. ಆದರೆ ನಿಮ್ಮ ಜೀವಂತಿಕೆ ಕುಗ್ಗಬೇಕಾಗಿಲ್ಲ.
ನಿಮಗೆ ಬಹಳ ಹತ್ತಿರದವರು ಮತ್ತು ಆತ್ಮೀಯರಾದವರಿಗೇ ನಿಮ್ಮ ಅತ್ಯಂತ ಕೆಟ್ಟ ರೂಪ ನೋಡಲು ಸಿಗುತ್ತದೆ. ಯಾವ ಅಪರಿಚಿತರಿಗೂ ಆ ಕೊಳಕು ನೋಡಲು ಸಿಗುವುದಿಲ್ಲ.
ಅರಿವು ಎಂಬುದು ನೀವು ‘ಮಾಡು’ವ ವಿಷಯವಲ್ಲ. ಅರಿವು ನಿಮ್ಮ ಸ್ವರೂಪವೇ ಆಗಿದೆ.
ಮನಸ್ಸು ಎಂಬುದು ಸಮಾಜದ ಕಸದ ಬುಟ್ಟಿ. ಹಾದು ಹೋಗುವ ಎಲ್ಲರೂ ಅದರಲ್ಲಿ ಏನನ್ನಾದರೂ ತುರುಕುತ್ತಾರೆ.
ನಿಮ್ಮನ್ನು ಇತರರಿಗೆ ಹೋಲಿಸಿಕೊಳ್ಳುತ್ತಾ ನಿಮ್ಮ ಬದುಕನ್ನು ವ್ಯರ್ಥ ಮಾಡಬೇಡಿ. ನೀವು ನಿನ್ನೆಗಿಂತ ಸ್ವಲ್ಪವಾದರೂ ಹೆಚ್ಚು ಉತ್ತಮರಾಗಿದ್ದೀರಾ ಎಂದು ನೋಡಿ ಅಷ್ಟೆ.
ನೀವು ಮಾಡುವ ವಿಷಯಗಳು ನೀವು ಯಾರು ಎಂಬುದನ್ನು ನಿರ್ಧರಿಸಬಾರದು. ನೀವು ಯಾರು ಎಂಬುದು ನೀವೇನನ್ನು ಮಾಡುತ್ತೀರಿ ಎಂಬುದನ್ನು ನಿರ್ಧರಿಸಬೇಕು.
ನಿಮಗೆ ನಿಮ್ಮ ಪ್ರಸ್ತುತ ಜೀವನದ ಎಲ್ಲೆಗಳನ್ನು ಮೀರಿ ಹೋಗಬೇಕೆಂದಿದ್ದರೆ, ನಿಮ್ಮ ಹೃದಯದಲ್ಲಿ ಹುಚ್ಚಿರಬೇಕು, ಆದರೆ ತಲೆಯಲ್ಲಿ ನಿಚ್ಚಳ ಸಂತುಲನೆಯಿರಬೇಕು.
ಇಬ್ಬರು ವ್ಯಕ್ತಿಗಳು ಜೊತೆಗೂಡಿದಾಗ, ಅದು ಪರಸ್ಪರ ಸಂತೋಷವನ್ನು ಹಂಚುವ ಪ್ರಕ್ರಿಯೆಯಾಗಬೇಕೇ ಹೊರತು ಪರಸ್ಪರರಿಂದ ಸಂತೋಷವನ್ನು ಹಿಂಡುವ ಪ್ರಕ್ರಿಯೆಯಾಗಬಾರದು.