Main Centers
International Centers
India
USA
FILTERS:
SORT BY:
ಸೃಷ್ಟಿಯ ಪರಿಪೂರ್ಣತೆಯನ್ನು ಆಲಿಸುವವರಿಗೆ ಎಲ್ಲವೂ ಸಂಗೀತವೇ.
ನಿಮ್ಮ ವ್ಯಕ್ತಿತ್ವವು ನೀವು ನಿಮ್ಮ ಸಾಮಾಜಿಕ ವ್ಯವಹಾರಗಳಿಗಾಗಿ ಸೃಷ್ಟಿಸಿಕೊಂಡ ಒಂದು ಮುಖವಾಡ. ಸಮಸ್ಯೆಯೇನೆಂದರೆ, ಈಗ ಆ ಮುಖವಾಡವು ನಿಮಗೆ ಅಂಟಿಕೊಂಡುಬಿಟ್ಟಿದೆ.
ಬದುಕಿನಲ್ಲಿ ನೀವು ಮಾಡಬಹುದಾದ ‘ಅತ್ಯುತ್ತಮ’ ಸಂಗತಿ ಎಂಬುದಿಲ್ಲ. ನೀವು ಏನು ಮಾಡುತ್ತಿದ್ದೀರೋ ಅದಕ್ಕೆ ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದೇ ಮಹತ್ವಪೂರ್ಣವಾದುದು.
ಶಿಕ್ಷಕರೆಂದರೆ ಕೇವಲ ಮಾಹಿತಿಯನ್ನು ಬಡಬಡಿಸುವುದಲ್ಲ. ಶಿಕ್ಷಕರ ಮಹತ್ವವು ಪ್ರತಿ ವಿದ್ಯಾರ್ಥಿಗೂ ಪ್ರೇರಣೆ ನೀಡಿ ಅವರ ಮಾನವಸಹಜ ಸಾಮರ್ಥ್ಯಗಳನ್ನು ವರ್ಧಿಸುವುದರಲ್ಲಿದೆ.
ಜೀವನವು ಬಹಳ ಚುಟುಕಾದ ಆಟ, ಮತ್ತು ಎಲ್ಲವನ್ನೂ ಮೀರಿಸಿದ ಆಟ. ಅದನ್ನು ಸಂತೋಷದಿಂದ ಆಡಿ, ನ್ಯಾಯಯುತವಾಗಿ ಆಡಿ, ಮತ್ತು ತೀವ್ರವಾಗಿ ಆಡಿ.
ಯಶಸ್ಸು ಎಂದರೆ ಯಾವುದನ್ನೇ ಆದರೂ, ಅದು ಸರಿಯಾಗಿ ಕೆಲಸ ಮಾಡುವ ರೀತಿಯಲ್ಲಿ ಮಾಡುವುದು.
ಈ ಜಗತ್ತಿಗೆ ಏನಾದರೂ ಉಪಯುಕ್ತವಾದುದನ್ನು ಮಾಡುವ ಅವಕಾಶ ಎಲ್ಲರಿಗೂ ಇದೆ. ಇನ್ನೊಬ್ಬರು ಏನು ಮಾಡುತ್ತಿದ್ದಾರೆ ಎಂದು ನೋಡುವ ಬದಲು, ನಿಮ್ಮ ಕೈಯಲ್ಲೇನು ಸಾಧ್ಯ ಎಂದು ನೋಡಿ.
ನಿಮ್ಮ ಮಾನವೀಯತೆ ಉಕ್ಕಿ ಹರಿದರೆ, ದೈವಿಕತೆ ಇಳಿದು ಬರಲೇಬೇಕು.
ನಿಮ್ಮ ಮಾನಸಿಕ ನಾಟಕ ನಿಮಗೆ ಬೇಕಾದಂತೆ ನಡೆಯಬೇಕು. ಅದರ ನಿರ್ದೇಶಕರು ನೀವೇ.
ಮನುಷ್ಯರಾಗಿರುವುದು ಎಂದರೆ ಪ್ರತಿಯೊಂದು ಜೀವಿಯನ್ನೂ ಕೋಮಲವಾದ ದೃಷ್ಟಿಯಿಂದ ನೋಡುವ ಸಾಮರ್ಥ್ಯವನ್ನು ಹೊಂದಿರುವುದು.
ನಿಮ್ಮ ಆಹಾರವು ಕೇವಲ ನಿಮ್ಮ ದೈಹಿಕ ಆರೋಗ್ಯವನ್ನು ಮಾತ್ರವಲ್ಲ, ಬದಲಿಗೆ ನೀವು ಯೋಚಿಸುವ, ಭಾವಿಸುವ, ಮತ್ತು ಜೀವನವನ್ನು ಅನುಭವಿಸುವ ರೀತಿಯನ್ನೇ ನಿರ್ಧರಿಸುತ್ತದೆ.