Main Centers
International Centers
India
USA
FILTERS:
SORT BY:
ಭಾರತದ ರಾಷ್ಟ್ರೀಯತೆ ಎಲ್ಲ ಮತಧರ್ಮಗಳಿಗಿಂತಲೂ ಪ್ರಾಚೀನವಾದದ್ದು. ನಾವು ಹಿಂದೆಯೂ ಒಂದು ರಾಷ್ಟ್ರವಾಗಿದ್ದೆವು, ಮತ್ತು ಈಗಲೂ ಒಂದು ರಾಷ್ಟ್ರವಾಗಿದ್ದೇವೆ. ಪರಮಮುಕ್ತಿಯ ಹಂಬಲವು ನಮ್ಮನ್ನು ಸದಾ ಒಂದಾಗಿರಿಸಿದೆ.
ಯೌವನ ಎಂಬುದು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಜೀವಂತಿಕೆ ಮತ್ತು ತೊಡಗುವಿಕೆಗೆ ಸಂಬಂಧಿಸಿದ್ದು.
ಕಾಮವು ಪ್ರಬಲವಾದ ಪ್ರಚೋದನೆ. ಪ್ರೀತಿಯು ಪ್ರಚೋದನೆಯಲ್ಲ, ಅದೊಂದು ಹಾತೊರೆತ. ನೀವು ಪ್ರೀತಿಸಿದಾಗ, ನೀವು ನಿಮ್ಮೊಳಗೆ ನೆಲೆಗೊಳ್ಳುವಿರಿ. ಆಗ ಮತ್ತೇನೂ ಬೇಕಾಗಿರುವುದಿಲ್ಲ.
ಸಾಯಲು ಸಿದ್ಧವಿರುವವರು ಮಾತ್ರ ಪರಿಪೂರ್ಣವಾಗಿ ಜೀವಿಸಬಲ್ಲರು.
ನನಗೆ ಗುಹೆಯಲ್ಲಿ ಕೂರುವ ಅಗತ್ಯವಿಲ್ಲ. ನನ್ನ ಅಧ್ಯಾತ್ಮ ಅಷ್ಟು ದುರ್ಬಲವಲ್ಲ. ನಾನು ಮಾರುಕಟ್ಟೆಯಲ್ಲಿದ್ದರೂ ಹಾಗೇ ಇರಬಲ್ಲೆ.
ನೀವು ಬಹಳ ಅಹಂಕಾರಿಯಾಗಿದ್ದರೆ, ಜೀವನವು ನಿಮ್ಮನ್ನು ರುಬ್ಬುತ್ತದೆ. ಅದಕ್ಕೆ ಬೇರೆ ಯಾವ ಚಿಕಿತ್ಸೆಯೂ ಇಲ್ಲ.
ಪೂರ್ತಿ ಜೀವಂತವಾಗಿರುವುದು ಅದ್ಭುತವಾಗಿರುತ್ತದೆ. ಅರೆಜೀವಂತವಾಗಿರುವುದು ಒಂದು ನರಳಾಟ.
ಆನಂದವೇ ಗುರಿಯಲ್ಲ. ಅದು ನರಳಾಟದ ಭಯವನ್ನು ತೊಡೆದುಹಾಕುತ್ತದೆ. ‘ನನಗೇನಾಗುತ್ತದೆ’ ಎಂಬುದು ಮಾಯವಾದಾಗ ಮಾತ್ರ ನಿಮಗೆ ಜೀವನವನ್ನು ಪರಿಶೋಧಿಸುವ ಧೈರ್ಯ ಬರುತ್ತದೆ.
ಒಳಿತು ಮತ್ತು ತೊಳಲಾಟಗಳೆರಡೂ ಉಂಟಾಗುವುದು ನಿಮ್ಮೊಳಗಿನಿಂದಲೇ. ಆಯ್ಕೆ ನಿಮ್ಮದೇ.
ಹೊಗಳುವಿಕೆ ನನ್ನನ್ನು ಉಬ್ಬಿಸುವುದೂ ಇಲ್ಲ, ತೆಗಳುವಿಕೆ ನನ್ನನ್ನು ತಗ್ಗಿಸುವುದೂ ಇಲ್ಲ. ಆ ಅಧಿಕಾರವನ್ನು ನಾನು ಯಾರಿಗೂ ನೀಡಿಲ್ಲ.
ನಿಮ್ಮ ಜೀವನವು ನಿಮ್ಮದೇ ಕರ್ಮ – ಅದನ್ನು ಮಾಡಿಕೊಂಡಿದ್ದು ನೀವೇ. ಇದನ್ನು ನೀವು ಮನಗಾಣುವವರೆಗೆ ನಿಮ್ಮ ಬದುಕು ನಿಜವಾಗಿಯೂ ನಿಮ್ಮದಲ್ಲ.
ದೇಹ-ಮನಸ್ಸುಗಳು ಮೆಟ್ಟಿಲುಗಳಾಗಬೇಕಿತ್ತು. ಆದರೆ ಅವು ಕೆಸರುಮಣ್ಣಾಗಿಬಿಟ್ಟು ಜನರು ಅವುಗಳೊಳಗೆ ಜೀವಮಾನವಿಡೀ ಕುಸಿಯುತ್ತಿರುತ್ತಾರೆ.