Main Centers
International Centers
India
USA
Wisdom
FILTERS:
SORT BY:
ಮೂಲಭೂತವಾಗಿ, ನಿಮಗೆ ಅರ್ಪಿಸಲು ಸಾಧ್ಯವಿರುವುದು ನಿಮ್ಮನ್ನಷ್ಟೆ.
ಯೋಗವಿಜ್ಞಾನವು ಬರೀ ಆರೋಗ್ಯ ಮತ್ತು ಸದೃಢತೆಯ ಬಗ್ಗೆಯಾಗಿಲ್ಲ. ಅದು ಮಾನವ ಜೀವನದ ಪ್ರತಿಯೊಂದು ಅಂಶಕ್ಕೂ ಒಂದು ಪರಮ ಪರಿಹಾರವಾಗಿದೆ.
ನಿಮ್ಮ ಬದುಕಲ್ಲಿ ನಿಮ್ಮನ್ನು ಅಹಿತವಾದ ಸನ್ನಿವೇಶಗಳಿಗೆ ಒಡ್ಡಲಾಗಿದ್ದರೆ, ಬೇರೆ ಯಾರನ್ನೂ ಅಂತಹ ಸನ್ನಿವೇಶಗಳಿಗೆ ಒಡ್ಡದೇ ಇರುವಷ್ಟು ವಿವೇಚನೆ ನಿಮ್ಮಲ್ಲಿರಬೇಕು.
ಒತ್ತಡ, ಭಯ, ಅಥವಾ ಇನ್ಯಾವುದೇ ರೀತಿಯ ಋಣಾತ್ಮಕತೆಯನ್ನು ನೀವು ಅನುಭವಿಸಿದರೂ, ಅವೆಲ್ಲದಕ್ಕೂ ಇರುವುದು ಒಂದೇ ಮೂಲ ಕಾರಣ: ನಿಮ್ಮ ಅಂತರಂಗದ ಸ್ವರೂಪದ ಬಗೆಗಿನ ಅಜ್ಞತೆ.
ಒಬ್ಬರ ಆಧ್ಯಾತ್ಮಿಕತೆಯನ್ನು ಅವರ ವರ್ತನೆಯನ್ನು ನೋಡಿ ಅಳೆಯಬೇಡಿ. ಆಧ್ಯಾತ್ಮಿಕ ಪ್ರಕ್ರಿಯೆಯು ಶರೀರ, ಮನಸ್ಸುಗಳ ಹಾವಭಾವಗಳನ್ನು ಮೀರಿದ್ದು.
ಆತ್ಮಸಾಕ್ಷಾತ್ಕಾರ ಎಂದರೆ ನೀವು ಎಂತಹ ಪೆದ್ದರಾಗಿದ್ದಿರಿ ಎಂದು ಮನಗಾಣುವುದು. ಎಲ್ಲವೂ ಇಲ್ಲಿಯೇ ನಿಮ್ಮೊಳಗೇ ಇತ್ತು, ಆದರೆ ನಿಮಗದು ಗೊತ್ತೇ ಆಗಲಿಲ್ಲ.
ಯೋಚನೆ ಮತ್ತು ಭಾವನೆಗಳು ಪ್ರತ್ಯೇಕ ಸಂಗತಿಗಳಲ್ಲ. ನೀವು ಯೋಚಿಸುವ ರೀತಿಯೇ ನೀವು ಭಾವಿಸುವ ರೀತಿಯಾಗಿರುತ್ತದೆ.
ಬದುಕನ್ನು ಸುಂದರವಾಗಿಸುವುದು ನೀವು ಎಷ್ಟು ಕೆಲಸ ಮಾಡಿದಿರಿ ಎಂಬುದಲ್ಲ, ಬದಲಿಗೆ ಅದನ್ನು ಹೇಗೆ ಮಾಡಿದಿರಿ ಎಂಬುದು.
ನೀವು ಮಾಡುತ್ತಿರುವುದಕ್ಕೆ ನೀವು ಸಂಪೂರ್ಣವಾಗಿ ಸಮರ್ಪಿತರಾಗಿದ್ದಾಗ ಮಾತ್ರ ನೀವು ಜಗತ್ತಿನಲ್ಲಿ ಏನೋ ಮಹತ್ವಪೂರ್ಣವಾದುದನ್ನು ಸೃಜಿಸಬಲ್ಲಿರಿ.
ಸಮಸ್ತ ಅಸ್ತಿತ್ವವು ಒಂದು ಅನುರಣನೆಯಾಗಿದೆ; ನಿಮ್ಮ ಯೋಚನೆಯೂ ಕೂಡ. ನೀವೊಂದು ಶಕ್ತಿಯುತವಾದ ಯೋಚನೆಯನ್ನು ಹುಟ್ಟಿಸಿ ಅದನ್ನು ಹೊರಗೆಡಹಿದರೆ, ಅದು ತಾನಾಗೇ ಮೈದಾಳುತ್ತದೆ.
ನಿಮ್ಮ ಜೀವಶಕ್ತಿಯನ್ನು ಲವಲವಿಕೆಭರಿತವೂ ಕೇಂದ್ರಿತವೂ ಆಗಿಟ್ಟುಕೊಂಡರೆ ನಿಮಗೆ ಬೇಕಿದ್ದುದೆಲ್ಲವೂ ತಾನಾಗೇ ನಡೆಯುತ್ತದೆ.
ಚಲಿಸುವುದೆಲ್ಲವೂ ಒಂದು ದಿನ ತೀರಿ ಹೋಗುವುದು. ಅಚಲವಾದುದು ಮಾತ್ರ ಶಾಶ್ವತ. ಧ್ಯಾನವೆಂದರೆ ಮೂಲತಃ ಆ ಅಚಲತೆಯೆಡೆಗೆ ಸಾಗುವುದು, ಮತ್ತು ಅಸ್ತಿತ್ವದ ಜೀವಾಳದಂತಾಗುವುದು.