Main Centers
International Centers
India
USA
FILTERS:
SORT BY:
ಸಂತೋಷಭರಿತರಾಗಿರುವವರಿಗೆ ಜೀವನವು ಚುಟುಕಾದದ್ದು. ತೊಳಲಾಡುತ್ತಿರುವವರಿಗೆ ಅದು ಬಹಳ ದೀರ್ಘವಾದುದು.
ನಂಬಿಕೆ ಎನ್ನುವುದು ಮಾನಸಿಕ ಸಾರಾಯಿಯಷ್ಟೆ. ಸಾರಾಯಿ ದೇಹದ ಮೇಲೆ ಕಾರ್ಯಗೈದರೆ, ನಂಬಿಕೆ ಮನಸ್ಸಿನ ಮೇಲೆ ಕಾರ್ಯಗೈಯುತ್ತದೆ.
ಮನಸ್ಸು ಬಹಳ ಕೆಟ್ಟ ಯಜಮಾನ, ಆದರೆ ಅದ್ಭುತ ಗುಲಾಮ. ಅದನ್ನು ಹಾಗೆಯೇ ಇಟ್ಟುಕೊಳ್ಳಬೇಕು.
ಭಕ್ತಿ ಎಂದರೆ ಪೂಜೆ ಮಾಡುವುದಲ್ಲ. ಭಕ್ತಿ ಎಂದರೆ ನಿಮ್ಮನ್ನು ನೀವು ಕಳೆದುಕೊಳ್ಳುವುದು.
ನಿಮ್ಮ ಮನಸ್ಸನ್ನು ನೀವು ನಡೆಸಬೇಕು. ಮನಸ್ಸು ನಿಮ್ಮನ್ನು ನಡೆಸುವುದಲ್ಲ.
ನಿಮ್ಮ ಒಂದು ಕಣ್ಣು ಗುರಿಯ ಮೇಲಿದ್ದರೆ, ದಾರಿಯನ್ನು ನೋಡಲು ಉಳಿಯುವುದು ಒಂದೇ ಕಣ್ಣು. ಜೀವನದ ಮೂಲಕ ಸಾಗಲು ಅದು ಸಕ್ಷಮವಾದ ವಿಧಾನವಲ್ಲ.
ಜನರು ಇರುವುದು ಬಳಸಲ್ಪಡಲು ಅಲ್ಲ. ಜನರು ಇರುವುದು ಪ್ರೀತಿಸಲು ಮತ್ತು ನಿಮ್ಮ ಬಳಿಯಿರುವುದನ್ನು ಹಂಚಲು. ಬಳಸಬೇಕಿರುವುದು ವಸ್ತುಗಳನ್ನು, ಜನರನ್ನಲ್ಲ.
ಓರ್ವ ಮನುಷ್ಯರಾಗಿ, ನಿಮ್ಮ ಜೀವನದ ಅನುಭವವನ್ನು ಗ್ರಹ-ನಕ್ಷತ್ರಗಳು ನಿರ್ಧರಿಸಬೇಕಾಗಿಲ್ಲ. ನಿಮ್ಮ ಅಂತರಂಗದ ಅನುಭವವನ್ನು ನೀವಷ್ಟೆ ನಿರ್ಧರಿಸಬೇಕು.
ನೀವು ಪ್ರಜ್ಞಾಪೂರ್ವಕರಾಗಿ ಸ್ಪಂದಿಸಿದರೆ, ನಿಮಗೆ ಬೇಕಿರುವುದು ನಡೆಯುತ್ತದೆ. ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದರೆ, ಬೇರೆಯವರಿಗೆ ಬೇಕಿರುವುದು ನಡೆಯುತ್ತದೆ.
ನಿಮ್ಮ ಬದುಕಿನಲ್ಲಿ ಕಹಿಯಾದ ಅನುಭವಗಳಾದರೆ, ನಿಮಗಿರುವ ಆಯ್ಕೆ ಇಷ್ಟೆ – ಒಂದೋ ನೀವು ವಿವೇಕಿಗಳಾಗಬಹುದು, ಅಥವಾ ಮನಸ್ಸನ್ನು ಹುಣ್ಣು ಮಾಡಿಕೊಳ್ಳಬಹುದು.
ಮೇಲೆದ್ದು ಮಿಂಚಿ. ನೀವು ಸಂತೋಷ ಮತ್ತು ಲವಲವಿಕೆಯಿಂದ ತುಂಬಿದ್ದಾಗ ಜನರು ಸಹಜವಾಗಿಯೇ ನಿಮ್ಮನ್ನು ಪ್ರೀತಿಸುತ್ತಾರೆ.
ಯೋಗ ಎಂದರೆ ಅನಂತ ಶಕ್ತಿಯ ಮೂಲದೊಂದಿಗೆ ತಡೆಯಿಲ್ಲದ ಸಂಪರ್ಕ ಹೊಂದುವುದು.