Main Centers
International Centers
India
USA
Wisdom
FILTERS:
SORT BY:
ನೀವು ತೆಗೆದುಕೊಳ್ಳಬೇಕಾದ ಮೊಟ್ಟಮೊದಲ ಹೆಜ್ಜೆಯೆಂದರೆ, ನಿಮ್ಮ ಬದುಕಿನಲ್ಲಿ ಅದೇನೇ ನಡೆದರೂ, ನಿಮ್ಮ ಬದುಕು ನಿಮ್ಮ ಜವಾಬ್ದಾರಿ ಎಂದು ಗುರುತಿಸುವುದು.
ಈ ಭೂಮಿಯ ಮೇಲೆ ಇಲ್ಲಿಯವರೆಗೆ ಏನೇನಾಗಿದೆಯೋ ಅದೆಲ್ಲವನ್ನೂ ನಿಮ್ಮ ದೇಹವು ಇನ್ನೂ ನೆನಪಿಟ್ಟುಕೊಂಡಿದೆ – ಏಕೆಂದರೆ ನಿಮ್ಮ ದೇಹವು ಈ ಭೂಮಿಯ ಒಂದು ತುಣುಕಷ್ಟೆ.
ನಿಮ್ಮನ್ನು ನೀವು ತೆರೆದುಕೊಳ್ಳಲು ಸಿದ್ಧರಿಲ್ಲದಿದ್ದರೆ, ನೀವು ರೂಪಾಂತರಣೆ ಹೊಂದಲು ಸಿದ್ಧರಿಲ್ಲ ಎಂದರ್ಥ. ಯಾವುದು ರೂಪಾಂತರಣೆ ಹೊಂದುವುದಿಲ್ಲವೋ ಅದು ಸತ್ತಂತೆಯೇ.
ಬಹಳ ತಾರ್ಕಿಕವಾದ ಮನಸ್ಸನ್ನು ಹುಚ್ಚು ಹೃದಯದ ಮೂಲಕ ಸರಿದೂಗಿಸಲು ಪ್ರಯತ್ನಿಸುವುದೇ ಯೋಗ.
ಹೋಲಿಕೆಯ ಆಧಾರದಲ್ಲಿ ಮಾಡಿದ ಗ್ರಹಿಕೆಯು ಎಂದಿಗೂ ನಿಚ್ಚಳವಲ್ಲ – ಅದು ವಾಸ್ತವತೆಯನ್ನು ತಿರುಚುತ್ತದೆ.
ಬೇಷರತ್ತಾದ ಪ್ರೀತಿ ಎಂಬುದಿಲ್ಲ. ಪ್ರತಿಯೊಂದು ಸಂಬಂಧದಲ್ಲೂ ಷರತ್ತುಗಳಿರುತ್ತವೆ.
ನೀವು ಯಾರಾಗಿರುವಿರೋ, ಏನಾಗಿರುವಿರೋ, ಅದು ದೈವಿಕತೆಯ ಒಂದು ಅಭಿವ್ಯಕ್ತಿಯಾಗಿದೆ.
ನೀವು ನಿಜವಾಗಿಯೂ ಸತ್ಯವನ್ನು ಅನ್ವೇಷಿಸುತ್ತಿದ್ದರೆ, ಏನನ್ನೂ ಭಾವಿಸಿಕೊಳ್ಳಬೇಡಿ. ಸುಮ್ಮನೆ ಅನ್ವೇಷಿಸಿ ಅಷ್ಟೆ.
ನೀವು ನಿಜವಾಗಿಯೂ ಪ್ರಜ್ಞಾಪೂರ್ವಕರಾದರೆ, ನೀವು ಇರಬಹುದಾದ ಏಕೈಕ ಸ್ಥಳ ‘ಈ ಕ್ಷಣ’.
ನಿಮಗೆ ನಿಮ್ಮ ಮಗುವು ನಿಜವಾಗಿಯೂ ಅರಳಬೇಕೆಂದಿದ್ದರೆ, ಮೊದಲು ನಿಮ್ಮನ್ನು ನೀವು ಪ್ರೀತಿ, ಸಂತೋಷ, ಮತ್ತು ಶಾಂತಿಯಿಂದ ತುಂಬಿದ ವ್ಯಕ್ತಿಯಾಗಿ ಪರಿವರ್ತಿಸಿಕೊಳ್ಳಿ.
ಯಾವತ್ತೂ ಇನ್ನೊಬ್ಬರ ಕರ್ಮದ ಬಗ್ಗೆ ಮಾತನಾಡಬೇಡಿ – ನಿಮ್ಮ ಕರ್ಮವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ.
ಪ್ರೀತಿಯ ಮುದ ಮತ್ತು ಸಂತೋಷದ ರಂಗು ತುಂಬಿರುವ ಸ್ಫೂರ್ತಿಯುತ ಪರಿಸರವನ್ನು ನಿರ್ಮಿಸಿದ್ದೇ ಆದಲ್ಲಿ, ಮಕ್ಕಳಿಗೆ ನೀವು ಹೆಚ್ಚೇನೂ ‘ಕಲಿಸ’ಬೇಕಾಗಿಲ್ಲ. ಅವರು ಸಹಜವಾಗಿಯೇ ಅರಳಿ ತಮ್ಮ ಸಂಪೂರ್ಣ ಅಂತಸ್ಸತ್ವವನ್ನು ಕಂಡುಕೊಳ್ಳುತ್ತಾರೆ.