FILTERS:
SORT BY:
ವಿಷುವತ್ ಸಂಕ್ರಾಂತಿಯಂದು ಸೂರ್ಯನ ಶಕ್ತಿಯು ನಮಗೆ ಅತ್ಯಂತ ಚೈತನ್ಯದಾಯಕವಾಗಿರುತ್ತದೆ. ಬದುಕಿನಲ್ಲಿ ಕಾಲೆಳೆಯುತ್ತಾ ಸಾಗಬೇಡಿ – ನವಚೇತನ ಮತ್ತು ತೀವ್ರತೆಯೊಂದಿಗೆ ಅದರಲ್ಲಿ ಧುಮುಕಿ.
ಕಾರ್ಯಗೈಯುವುದು ಕರ್ಮವಾಗಿರುವಂತೆಯೇ, ನಿಷ್ಕ್ರಿಯತೆಯೂ ಕರ್ಮವೇ.
ನೀವು ಸಮಾಜದಲ್ಲಿ ಬಹಳ ಚಾಣಾಕ್ಷರಾಗಿರಬಹುದು, ಆದರೆ ಜೀವನದ ವಿಷಯದಲ್ಲಿ ತೀರಾ ಪೆದ್ದರಾಗಿರಬಹುದು.
ನೀವದನ್ನು ಒತ್ತಡ, ತಳಮಳ, ಅಥವಾ ಖಿನ್ನತೆ ಇತ್ಯಾದಿಯಾಗಿ ಹೇಗಾದರೂ ಕರೆಯಿರಿ – ಮೂಲ ವಿಷಯವೇನೆಂದರೆ, ನಿಮ್ಮ ಬುದ್ಧಿಶಕ್ತಿ ನಿಮ್ಮದೇ ವಿರುದ್ಧ ತಿರುಗಿಬಿಟ್ಟಿದೆ ಅಷ್ಟೆ.
ಭೂಮಿಯ ಮೇಲೆ ಗಟ್ಟಿಯಾದ ಹೆಜ್ಜೆ ಗುರುತುಗಳನ್ನು ಉಳಿಸಲು ಬಯಸುವವರು ಎಂದೂ ಹಾರುವುದಿಲ್ಲ.
ನಿಮ್ಮ ಮನಸ್ಸು ಚುರುಕಾಗಿರಬೇಕು. ಇಲ್ಲದಿದ್ದರೆ ಜೋಕ್ಗಳು ನಿಮಗೆ ಅರ್ಥವಾಗುವುದಿಲ್ಲ. ಜೋಕ್ ಅರ್ಥವಾಗದಿದ್ದರೆ, ನೀವೇ ಒಂದು ಜೋಕ್ ಆಗುತ್ತೀರಿ.
ಆರೋಗ್ಯವೆಂದರೆ ಬರೀ ರೋಗವಿಲ್ಲದೇ ಇರುವುದಲ್ಲ – ಅದು ನಿಮ್ಮೊಳಗಿನ ಒಂದು ಪರಿಪೂರ್ಣತೆಯ ಭಾವ.
ನೀವು ಯಾರನ್ನಾದರೂ ಭೇಟಿಯಾದಾಗ, ನಿಮ್ಮ ವ್ಯಕ್ತಿತ್ವದ ಅತ್ಯಂತ ಮಧುರವಾದ ಅಂಶಗಳಷ್ಟೆ ಅವರನ್ನು ಸೋಕಬೇಕು.
ನೀವು ಅವರಿಂದಲೂ, ಮತ್ತು ಅವರು ನಿಮ್ಮಿಂದಲೂ ಸಂತೋಷವನ್ನು ಹಿಂಡಲು ಪ್ರಯತ್ನಿಸುತ್ತಿದ್ದರೆ, ಅಂತಹ ಸಂಬಂಧವು ಕಾಲಾಂತರದಲ್ಲಿ ಯಾತನಾಮಯವಾಗುತ್ತದೆ.
ಸಂತೋಷವನ್ನು ಹೊಂದಬೇಕು ಎಂಬ ಕಾರಣಕ್ಕೆ ನೀವು ಯಶಸ್ಸನ್ನು ಬಯಸುತ್ತೀರಿ. ಆದರೆ ನಿಮಗೆ ನಿಮ್ಮ ಪಾಡಿಗೆ ಸಂತೋಷದಿಂದ ಇರುವುದು ಹೇಗೆಂದು ಗೊತ್ತಿದ್ದರೆ, ನೀವು ಸದಾ ಯಶಸ್ವಿ.
ಯೋಗಸಾಧನೆಯನ್ನು ಮಾಡುವಾಗ ಅದನ್ನು ಜೀವಮಾನವಿಡೀ ಮಾಡುತ್ತೇನೆ ಎಂದೆಲ್ಲ ಯೋಚಿಸಬೇಡಿ. ಅದನ್ನು ಇಂದಿಗಾಗಿ ಮಾಡಿ ಅಷ್ಟೆ.
ನೀವು ಬುದ್ಧಿವಂತರಾಗಿದ್ದರೆ ನಿಮ್ಮ ಪ್ರತಿ ಹೆಜ್ಜೆಯನ್ನೂ ಗಮನವಿಟ್ಟು ನೋಡುವಿರಿ. ಎಲ್ಲದರ ಬಗ್ಗೆ ಪೂರ್ತಿ ಖಚಿತರಾಗಿರುವುದು ಮೂರ್ಖರಷ್ಟೆ.