FILTERS:
SORT BY:
ನೀವು ಸಿಟ್ಟು, ಕಹಿತನ, ಮತ್ತು ಹಗೆತನಗಳಿಂದ ಮುಕ್ತರಾಗಿದ್ದಾಗ, ನೀವು ಏನನ್ನೇ ಸ್ಪರ್ಶಿಸಿದರೂ ಪ್ರೀತಿಯಿಂದ ಸ್ಪರ್ಶಿಸುತ್ತೀರಿ.
ಸನ್ನಿವೇಶಗಳು ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು ನಿರ್ಧರಿಸದೆ, ನೀವೇ ಸನ್ನಿವೇಶಗಳು ಹೇಗಿರಬೇಕೆಂದು ನಿರ್ಧರಿಸಿದರೆ, ಅದೇ ಯಶಸ್ಸು.
ಜೀವನದಲ್ಲಿ ನೀವು ‘ಏನು’ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು ‘ಹೇಗೆ’ ಮಾಡುತ್ತೀರಿ ಎಂಬುದೇ ಅತ್ಯಂತ ಮುಖ್ಯ.
ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ. ಸ್ಫೂರ್ತಿಯುತ ಮನುಷ್ಯರು ಮಾತ್ರವೇ ತಮ್ಮ ಬದುಕನ್ನೂ ತಮ್ಮ ಸುತ್ತಲಿನವರ ಬದುಕನ್ನೂ ರೂಪಾಂತರಿಸಬಲ್ಲರು.
ಸ್ವೀಕರಿಸುವುದು ಹೇಗೆಂದು ಅರಿತಿರುವವರಿಗೆ ಜೀವನವು ಬಹಳ ಉದಾರವಾದುದು. ಯಾರು ಈ ಸ್ವೀಕೃತಿಯ ಪರಾಕಾಷ್ಠೆಯನ್ನು ತಲುಪುವರೋ ಅವರು ಧನ್ಯತೆಯನ್ನು ಅನುಭವಿಸುವರು. ಈ ಧನ್ಯಪೌರ್ಣಮಿಯಂದು, ಜೀವನದ ಉದಾರತೆಗೆ ನೀವು ತೆರೆದುಕೊಳ್ಳುವಂತಾಗಲಿ.
ನಾಳೆಯು ಎಂದೂ ಬರುವುದಿಲ್ಲ. ಇದುವೇ ಜೀವನದ ಸೊಬಗು: ನೀವು ಇಂದಿನ ದಿನವನ್ನು ನಿಭಾಯಿಸಲು ಕಲಿಯಬೇಕಷ್ಟೆ. ಒಮ್ಮೆಗೆ ಒಂದೇ ದಿನ, ಒಮ್ಮೆಗೆ ಒಂದೇ ಕ್ಷಣ.
ಸದೃಢವಾದ ರಾಷ್ಟ್ರವನ್ನು ಕಟ್ಟಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ, ಬಾಧ್ಯತೆ, ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಅದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ.
ಜೀವನವು ಅದರ ಗುರಿಯಲ್ಲಿಲ್ಲ. ಜೀವನ ಇರುವುದು ಅದರ ಪ್ರಕ್ರಿಯೆಯಲ್ಲಿ – ನೀವದನ್ನು ನಿಮ್ಮೊಳಗೆ ಈ ಕ್ಷಣ ಹೇಗೆ ಅನುಭವಿಸುತ್ತಿದ್ದೀರಿ ಎಂಬುದರಲ್ಲಿ.
ಜೀವಶಕ್ತಿಯಲ್ಲಿ ಲವಲವಿಕೆ, ಮನಸ್ಸಿನಲ್ಲಿ ತಾಜಾತನ, ಮತ್ತು ಹೃದಯದಲ್ಲಿ ಪ್ರೀತಿ – ಇಷ್ಟನ್ನು ನೀವು ನಿಮ್ಮಲ್ಲಿ ಕಾಪಾಡಿಕೊಂಡರೆ, ಪ್ರತಿದಿನವೂ ಒಂದು ಹೊಸ ರೋಚಕ ಪಯಣವಾಗುವುದು.
ನೀವು ಲಾಜಿಕ್, ಅಂದರೆ ತರ್ಕದ ಗುಲಾಮರಾದಾಗ, ಜೀವನದ ಮ್ಯಾಜಿಕ್ ಅನ್ನು ನೋಡಲಾರಿರಿ. ತರ್ಕದ ಮಿತಿಯನ್ನು ಮೀರಿ ತಮ್ಮ ಅಸ್ತಿತ್ವದ ನಿಜವಾದ ಮ್ಯಾಜಿಕ್ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ.
ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ ಉಪಸ್ಥಿತನಿದ್ದೇನೆ – ನಿಮ್ಮಿಡೀ ಜೀವನ ಮತ್ತು ಅದನ್ನೂ ಮೀರಿ. ದೇಹತ್ಯಾಗ ಮಾಡಿದ ನಂತರವೂ ನಾನು ಉಪಸ್ಥಿತನಿರುತ್ತೇನೆ.
ಹೊಸ ಸನ್ನಿವೇಶಗಳು ಎದುರಾದಾಗ, ಅವು ನಿಮಗೆ ಇಷ್ಟವಿಲ್ಲದಿದ್ದರೂ, ಅವುಗಳ ಬಗ್ಗೆ ಸ್ವೀಕೃತಿಯಿರಲಿ. ನಿಮ್ಮಲ್ಲಿ ಪ್ರತಿರೋಧ ಕಡಿಮೆಯಾದಷ್ಟೂ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತೀರಿ.