Main Centers
International Centers
India
USA
FILTERS:
SORT BY:
ಪುಸ್ತಕಜ್ಞಾನವನ್ನು ಓದಿ ಶೇಖರಿಸಬಹುದು. ಅಧ್ಯಾತ್ಮಜ್ಞಾನ ಎಂಬುದು ಒಂದು ಸಾಕ್ಷಾತ್ಕಾರ. ಮತ್ತು ಬಾಳಿನ ವಿವೇಕವು ನೀವು ಜೀವಮಾನದುದ್ದಕ್ಕೂ ಸಂಪಾದಿಸುವಂತದ್ದು.
ನಿಮ್ಮ ಯೋಚನೆಗಳು ಪುನರ್ಬಳಕೆ ಮಾಡಲಾಗುತ್ತಿರುವ ಮಾಹಿತಿ ಅಷ್ಟೆ. ಹೊಚ್ಚಹೊಸತಾದ ಏನೊಂದೂ ಅಲ್ಲಿ ಸಂಭವಿಸಲು ಸಾಧ್ಯವಿಲ್ಲ.
ನೀವು ಮಾಡುವ ಕೆಲಸ ಮುಖ್ಯವಾದುದು ಎಂದು ನೀವಂದುಕೊಂಡಿದ್ದರೆ, ನಿಮ್ಮನ್ನು ಹೆಚ್ಚು ಸಶಕ್ತರಾಗಿಸಲು ನಿಮ್ಮ ಮೇಲೆಯೇ ಕೆಲಸ ಮಾಡುವುದು ಇನ್ನೂ ಹೆಚ್ಚು ಮುಖ್ಯವಾದುದು.
ನಿಮಗೆ ಒಬ್ಬಂಟಿತನ ಕಾಡುತ್ತಿರುವುದು ನೀವು ಒಬ್ಬರೇ ಇದ್ದೀರಿ ಎಂಬ ಕಾರಣದಿಂದಲ್ಲ. ನಿಮಗೆ ಒಬ್ಬಂಟಿತನ ಕಾಡುತ್ತಿರುವುದು ಸುತ್ತಲಿರುವ ಎಲ್ಲವನ್ನೂ ನೀವು ತಿರಸ್ಕರಿಸುತ್ತಿರುವುದರಿಂದ.
ನಿಮ್ಮ ಜೀವನವು ಸುಂದರವಾಗುವುದು ನೀವು ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ನಿಮಗೇನು ದೊರೆಯುತ್ತದೆ ಎಂಬ ಪರಿವೆಯನ್ನೇ ಬಿಟ್ಟುಬಿಟ್ಟಾಗ. ಜೀವನದ ಆನಂದ ಇರುವುದು ಅಭಿವ್ಯಕ್ತಿಯಲ್ಲಿ, ಬೇಡುವುದರಲ್ಲಲ್ಲ.
ಕಷ್ಟ ಎಂಬುದು ನಾವು ಎದುರಿಸುವ ಬಾಹ್ಯ ಸನ್ನಿವೇಶ. ನರಳಾಟ ಎಂಬುದು ನಾವೇ ಉಂಟುಮಾಡಿಕೊಳ್ಳುವ ಮಾನಸಿಕ ಸ್ಥಿತಿ.
ನನಗೆ ಏನೆಲ್ಲ ತಿಳಿದಿದೆಯೋ, ನನ್ನ ಗುರುಗಳಿಗೆ ಏನೆಲ್ಲ ತಿಳಿದಿತ್ತೋ, ಮತ್ತು ಸಮಸ್ತ ಆಧ್ಯಾತ್ಮಿಕ ಪರಂಪರೆಗೆ ಏನೆಲ್ಲ ತಿಳಿದಿತ್ತೋ, ಅದೆಲ್ಲವೂ ಧ್ಯಾನಲಿಂಗದಲ್ಲಿ ಶಕ್ತಿರೂಪದಲ್ಲಿ ನಿಕ್ಷೇಪವಾಗಿದೆ. ನಾನು ಕೇವಲ ಒಂದು ಪರಿಣಾಮವಷ್ಟೆ.
ಯೋಗವು ಸೂಪರ್ ಮಾನವರಾಗುವ ಬಗ್ಗೆಯಲ್ಲ, ಬದಲಿಗೆ ಮಾನವರಾಗಿರುವುದೇ ಸೂಪರ್ ಎಂದು ಮನಗಾಣುವ ಬಗ್ಗೆಯಾಗಿದೆ.
ಅಂತರಾಳದ ನಿಶ್ಚಲತೆಯನ್ನು ಅನುಭವಿಸದವರು ಚಲನೆಯಲ್ಲಿ ಕಳೆದುಹೋಗುತ್ತಾರೆ.
ಆಸ್ತಿಕರಿಗೂ ನಾಸ್ತಿಕರಿಗೂ ನಡುವೆ ವ್ಯತ್ಯಾಸವಿಲ್ಲ. ಒಬ್ಬರು ‘ಇದೆ’ ಎಂದು ನಂಬಿದರೆ, ಇನ್ನೊಬ್ಬರು ‘ಇಲ್ಲ’ ಎಂದು ನಂಬುತ್ತಾರೆ. ತಮಗೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಲು ಇಬ್ಬರೂ ತಯಾರಿಲ್ಲ.
ನೀವು ಏನನ್ನು ಪಡೆಯುತ್ತೀರೋ ಅದರಿಂದ ನೀವು ಜೀವಿತ ನಡೆಸಬಹುದಷ್ಟೆ. ಆದರೆ ನಿಮ್ಮ ಜೀವನ ಧನ್ಯವಾಗುವುದು ನೀವು ಏನನ್ನು ನೀಡುತ್ತೀರಿ ಎಂಬುದರಿಂದ.
ನೀವು ಸಂತೋಷವನ್ನು ಹುಟ್ಟುಹಾಕಬೇಕಾಗಿಲ್ಲ. ತೊಳಲಾಟವನ್ನು ಉಂಟುಮಾಡಿಕೊಳ್ಳದಿದ್ದರೆ, ನೀವು ಸಂತೋಷವಾಗೇ ಇರುತ್ತೀರಿ.