FILTERS:
SORT BY:
ಮತ್ತೆ ಮತ್ತೆ ಅದೇ ಸಮಸ್ಯೆ ಉಂಟಾಗುತ್ತಿದ್ದರೆ, ಅದರರ್ಥ ಮೂಲ ಸಮಸ್ಯೆ ನೀವೇ.
ಬಹುತೇಕ ಮನುಷ್ಯರು ತಮ್ಮೊಳಗೆ ಅಡಗಿರುವ ಮೇಧಾಶಕ್ತಿಯನ್ನು ಜಾಗೃತಗೊಳಿಸದೆಯೇ ಜೀವನಪೂರ್ತಿ ಕಳೆದು ಸಾವನ್ನಪ್ಪುತ್ತಾರೆ.
ವಿಷುವತ್ ಸಂಕ್ರಾಂತಿಯಂದು ಸೂರ್ಯನ ಶಕ್ತಿಯು ನಮಗೆ ಅತ್ಯಂತ ಚೈತನ್ಯದಾಯಕವಾಗಿರುತ್ತದೆ. ಬದುಕಿನಲ್ಲಿ ಕಾಲೆಳೆಯುತ್ತಾ ಸಾಗಬೇಡಿ – ನವಚೇತನ ಮತ್ತು ತೀವ್ರತೆಯೊಂದಿಗೆ ಅದರಲ್ಲಿ ಧುಮುಕಿ.
ಕಾರ್ಯಗೈಯುವುದು ಕರ್ಮವಾಗಿರುವಂತೆಯೇ, ನಿಷ್ಕ್ರಿಯತೆಯೂ ಕರ್ಮವೇ.
ಗಾಳಿಮಾತುಗಳಿಂದ ಮನಸ್ಸಿಗೆ ನೋವಾಗುವುದು ಮೂರ್ಖರಿಗಷ್ಟೆ. ಗಾಳಿಮಾತುಗಳನ್ನು ಹರಟುವವರು ತಮಗೆ ತಾವೇ ಅತ್ಯಂತ ಹೆಚ್ಚು ನೋವುಂಟು ಮಾಡಿಕೊಳ್ಳುತ್ತಿದ್ದಾರೆ.
ಪ್ರೀತಿಯು ಮುಕ್ತಗೊಳಿಸುವಂತಹ ಒಂದು ಶಕ್ತಿ. ಮೋಹವು ಬಂಧಿಸುವಂತಹ ಪ್ರಕ್ರಿಯೆ.
ಭೂಮಿಯ ಮೇಲೆ ಗಟ್ಟಿಯಾದ ಹೆಜ್ಜೆ ಗುರುತುಗಳನ್ನು ಉಳಿಸಲು ಬಯಸುವವರು ಎಂದೂ ಹಾರುವುದಿಲ್ಲ.
ನಿಮ್ಮ ಮನಸ್ಸು ಚುರುಕಾಗಿರಬೇಕು. ಇಲ್ಲದಿದ್ದರೆ ಜೋಕ್ಗಳು ನಿಮಗೆ ಅರ್ಥವಾಗುವುದಿಲ್ಲ. ಜೋಕ್ ಅರ್ಥವಾಗದಿದ್ದರೆ, ನೀವೇ ಒಂದು ಜೋಕ್ ಆಗುತ್ತೀರಿ.
ತಂತ್ರಜ್ಞಾನವು ಮನುಷ್ಯರಿಗಿಂತ ವೇಗವಾಗಿ ಬೆಳೆಯುತ್ತಿದೆ. ನಾವು ತಂತ್ರಜ್ಞಾನಕ್ಕಿಂತ ವೇಗವಾಗಿ ವಿಕಾಸ ಹೊಂದದೇ ಇದ್ದಲ್ಲಿ, ನಾವದನ್ನೆಂದೂ ವಿವೇಚನಾಯುತವಾಗಿ ಬಳಸಲಾರೆವು.
ಯೋಗವು ವ್ಯಾಯಾಮವಲ್ಲ. ಅದು ಅಂತರಂಗದ ಒಂದು ಸ್ಥಿತಿ.
ನೀವು ಅವರಿಂದಲೂ, ಮತ್ತು ಅವರು ನಿಮ್ಮಿಂದಲೂ ಸಂತೋಷವನ್ನು ಹಿಂಡಲು ಪ್ರಯತ್ನಿಸುತ್ತಿದ್ದರೆ, ಅಂತಹ ಸಂಬಂಧವು ಕಾಲಾಂತರದಲ್ಲಿ ಯಾತನಾಮಯವಾಗುತ್ತದೆ.
ಸಂತೋಷವನ್ನು ಹೊಂದಬೇಕು ಎಂಬ ಕಾರಣಕ್ಕೆ ನೀವು ಯಶಸ್ಸನ್ನು ಬಯಸುತ್ತೀರಿ. ಆದರೆ ನಿಮಗೆ ನಿಮ್ಮ ಪಾಡಿಗೆ ಸಂತೋಷದಿಂದ ಇರುವುದು ಹೇಗೆಂದು ಗೊತ್ತಿದ್ದರೆ, ನೀವು ಸದಾ ಯಶಸ್ವಿ.