FILTERS:
SORT BY:
ನಿಮ್ಮ ಹೃದಯ ತುಂಬಿದ್ದಾಗ, ಮತ್ತು ಮನಸ್ಸು ‘ನಾನು’ ಎಂಬುದರಿಂದ ಮುಕ್ತವಾಗಿದ್ದಾಗ, ನಿಮ್ಮ ಕಾಲುಗಳು ಕುಣಿಯುತ್ತವೆ.
ಸಂಗಾತಿಯು ನಿಮ್ಮ ಜೀವನದ ಗುರಿಯಲ್ಲ, ಬದಲಿಗೆ ನಿಮ್ಮ ಸಹಯಾತ್ರಿ.
ಈ ದೇಹವು ಭೂಮಿಯ ಒಂದು ತುಣುಕಷ್ಟೆ. ಭೂಮಿ ಸ್ವಸ್ಥವಾಗಿಲ್ಲದೆ ನಾವು ಒಳ್ಳೆಯ ಜೀವನವನ್ನು ಹೊಂದುವುದು ಸಾಧ್ಯವಿಲ್ಲ.
ಗಾಳಿಮಾತುಗಳಿಂದ ಮನಸ್ಸಿಗೆ ನೋವಾಗುವುದು ಮೂರ್ಖರಿಗಷ್ಟೆ. ಗಾಳಿಮಾತುಗಳನ್ನು ಹರಟುವವರು ತಮಗೆ ತಾವೇ ಅತ್ಯಂತ ಹೆಚ್ಚು ನೋವುಂಟು ಮಾಡಿಕೊಳ್ಳುತ್ತಿದ್ದಾರೆ.
ನೀವು ಸಾವಿರ ವರ್ಷ ಬದುಕಿದರೂ ಮಾನವ ಕಲ್ಪನೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲ. ಆದರೆ ಆ ವಿಫಲತೆಯಲ್ಲೂ ನಾವು ಆನಂದಮಯರಾಗಿರಬಹುದು.
ನೀವು ನಿಮ್ಮ ಸುತ್ತ ಕಟ್ಟಿಕೊಳ್ಳುವ ಸ್ವರಕ್ಷಣೆಯ ಗೋಡೆಗಳು, ಕಾಲಾಂತರದಲ್ಲಿ ಸ್ವಬಂಧನದ ಗೋಡೆಗಳಾಗುತ್ತವೆ.
ವಿಶ್ವಾಸ ಎಂದರೆ ಬೇರೆಯವರು ನಿಮ್ಮ ನಿರೀಕ್ಷೆಯಂತೆ ನಡೆದುಕೊಳ್ಳಬೇಕು ಎಂದಲ್ಲ. ವಿಶ್ವಾಸ ಎಂದರೆ ನಿಮ್ಮನ್ನು ನೀವು ಪ್ರಜ್ಞಾಪೂರ್ವಕವಾಗಿ ಅಸುರಕ್ಷಿತರಾಗಿಸಿಕೊಳ್ಳುವುದು.
ತಂತ್ರಜ್ಞಾನವು ಮನುಷ್ಯರಿಗಿಂತ ವೇಗವಾಗಿ ಬೆಳೆಯುತ್ತಿದೆ. ನಾವು ತಂತ್ರಜ್ಞಾನಕ್ಕಿಂತ ವೇಗವಾಗಿ ವಿಕಾಸ ಹೊಂದದೇ ಇದ್ದಲ್ಲಿ, ನಾವದನ್ನೆಂದೂ ವಿವೇಚನಾಯುತವಾಗಿ ಬಳಸಲಾರೆವು.
Guilt is a socially cultivated emotion – a poison directed at yourself.
ನೀವು ನಿಮ್ಮ ನೆನಪುಗಳಲ್ಲಿ ಜೀವಿಸುತ್ತಿದ್ದಾಗ, ಕಣ್ಣ ಮುಂದಿರುವುದನ್ನೇ ನೀವು ನೋಡಲಾರಿರಿ.
ಮತ್ತೆ ಮತ್ತೆ ಅದೇ ಸಮಸ್ಯೆ ಉಂಟಾಗುತ್ತಿದ್ದರೆ, ಅದರರ್ಥ ಮೂಲ ಸಮಸ್ಯೆ ನೀವೇ.
ಬಹುತೇಕ ಮನುಷ್ಯರು ತಮ್ಮೊಳಗೆ ಅಡಗಿರುವ ಮೇಧಾಶಕ್ತಿಯನ್ನು ಜಾಗೃತಗೊಳಿಸದೆಯೇ ಜೀವನಪೂರ್ತಿ ಕಳೆದು ಸಾವನ್ನಪ್ಪುತ್ತಾರೆ.