Main Centers
International Centers
India
USA
FILTERS:
SORT BY:
ಇಬ್ಬರು ವ್ಯಕ್ತಿಗಳು ಜೊತೆಗೂಡಿದಾಗ, ಅದು ಪರಸ್ಪರ ಸಂತೋಷವನ್ನು ಹಂಚುವ ಪ್ರಕ್ರಿಯೆಯಾಗಬೇಕೇ ಹೊರತು ಪರಸ್ಪರರಿಂದ ಸಂತೋಷವನ್ನು ಹಿಂಡುವ ಪ್ರಕ್ರಿಯೆಯಾಗಬಾರದು.
ಮಾನಸಿಕ ಒತ್ತಡ ಉಂಟಾಗುವುದು ಸನ್ನಿವೇಶಗಳಿಂದಾಗಿಯಲ್ಲ, ಬದಲಿಗೆ ನಿಮ್ಮನ್ನು ನೀವು ಹೇಗೆ ನಿಭಾಯಿಸಬೇಕೆಂದು ನಿಮಗೆ ಗೊತ್ತಿಲ್ಲದೇ ಇರುವುದರಿಂದ.
ನಿಮ್ಮೊಳಗಿನ ಜೀವನದ ಮೂಲವೇ ನಿಮ್ಮ ಪರಮ ಪ್ರಮಾಣವಾದಾಗ, ನಿಮ್ಮ ಕುರಿತಾದ ಇತರರ ಅಭಿಪ್ರಾಯ ಮತ್ತು ತೀರ್ಪುಗಳು ನಗಣ್ಯವಾಗುತ್ತವೆ.
ಅಂತರಾಳದ ನಿಶ್ಚಲತೆಯನ್ನು ಅನುಭವಿಸದವರು ಚಲನೆಯಲ್ಲಿ ಕಳೆದುಹೋಗುತ್ತಾರೆ.
ನೀವು ಸಂಗ್ರಹಿಸುವುದು ನಿಮ್ಮದಾಗಬಹುದೇ ಹೊರತು ಅದೆಂದಿಗೂ ನೀವೇ ಆಗಲಾರದು.
ನಿಮ್ಮ ಯೋಚನೆ-ಭಾವನೆಗಳು ನಿಮ್ಮದೇ ಭೂತಗಳು. ನೀವೇ ಅವನ್ನು ಸೃಷ್ಟಿಸುತ್ತೀರಿ, ಮತ್ತು ಅವು ನಿಯಂತ್ರಣ ತಪ್ಪಿ ನಿಮ್ಮನ್ನೇ ಅಟ್ಟಾಡಿಸುತ್ತವೆ. ಇದೊಂದು ಕೆಟ್ಟದಾಗಿ ನಿರ್ದೇಶಿಸಲಾದ ದೆವ್ವದ ಸಿನಿಮಾ ಅಷ್ಟೆ.
ಪುಸ್ತಕಜ್ಞಾನವನ್ನು ಓದಿ ಶೇಖರಿಸಬಹುದು. ಅಧ್ಯಾತ್ಮಜ್ಞಾನ ಎಂಬುದು ಒಂದು ಸಾಕ್ಷಾತ್ಕಾರ. ಮತ್ತು ಬಾಳಿನ ವಿವೇಕವು ನೀವು ಜೀವಮಾನದುದ್ದಕ್ಕೂ ಸಂಪಾದಿಸುವಂತದ್ದು.
ನಿಮ್ಮ ಯೋಚನೆಗಳು ಪುನರ್ಬಳಕೆ ಮಾಡಲಾಗುತ್ತಿರುವ ಮಾಹಿತಿ ಅಷ್ಟೆ. ಹೊಚ್ಚಹೊಸತಾದ ಏನೊಂದೂ ಅಲ್ಲಿ ಸಂಭವಿಸಲು ಸಾಧ್ಯವಿಲ್ಲ.
ಯಾರಾದರೂ ತಮ್ಮನ್ನು ತಾವೇ ಬಹಳ ಒಳ್ಳೆಯವರು ಅಂದುಕೊಂಡಾಗ, ಅವರು ಕೊಟ್ಟಕೊನೆಗೆ ತುಂಬ ಕ್ರೂರಿಗಳಾಗುತ್ತಾರೆ.
ಸ್ವಾತಂತ್ರ್ಯವೆಂದರೆ ಬೇರೇನೂ ನಿಮ್ಮ ಬದುಕನ್ನು ರೂಪಿಸಲು ಅವಕಾಶ ನೀಡದೆ, ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವುದು.
ನಿಮ್ಮ ಜೀವನವು ಸುಂದರವಾಗುವುದು ನೀವು ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ನಿಮಗೇನು ದೊರೆಯುತ್ತದೆ ಎಂಬ ಪರಿವೆಯನ್ನೇ ಬಿಟ್ಟುಬಿಟ್ಟಾಗ. ಜೀವನದ ಆನಂದ ಇರುವುದು ಅಭಿವ್ಯಕ್ತಿಯಲ್ಲಿ, ಬೇಡುವುದರಲ್ಲಲ್ಲ.
ಕಷ್ಟ ಎಂಬುದು ನಾವು ಎದುರಿಸುವ ಬಾಹ್ಯ ಸನ್ನಿವೇಶ. ನರಳಾಟ ಎಂಬುದು ನಾವೇ ಉಂಟುಮಾಡಿಕೊಳ್ಳುವ ಮಾನಸಿಕ ಸ್ಥಿತಿ.