Main Centers
International Centers
India
USA
Wisdom
FILTERS:
SORT BY:
ನೀವು ನಿಮ್ಮ ದೇಹ, ಮನಸ್ಸು, ಪ್ರಾಣಶಕ್ತಿ, ಮತ್ತು ಭಾವನೆಗಳನ್ನು ಒಂದು ಮಟ್ಟದ ಪ್ರಬುದ್ಧತೆಗೆ ತಂದರೆ, ಧ್ಯಾನವು ಸಹಜವಾಗಿಯೇ ಅರಳುತ್ತದೆ.
ಜೀವನದ ಸಂಪೂರ್ಣ ಆಳ ಮತ್ತು ಆಯಾಮಗಳನ್ನು ಅನುಭವಿಸುವುದೇ ಜೀವನದ ಉದ್ದೇಶ.
ಮನಸ್ಸಿನಲ್ಲಿ ನೀವು ಹುಟ್ಟಿಸುವ ಪ್ರತಿಯೊಂದು ಯೋಚನೆ, ಪ್ರತಿಯೊಂದು ಅನುರಣನೆಯೂ ನಿಮ್ಮ ದೇಹದ ರಾಸಾಯನಿಕ ಸ್ಥಿತಿಗತಿಯನ್ನು ಬದಲಿಸುತ್ತದೆ.
ಜಗತ್ತಿನಲ್ಲಿ ಬಹಳ ಜನ ಹಸಿದಿರುವುದು ಆಹಾರದ ಕೊರತೆಯಿಂದಾಗಲ್ಲ, ಬದಲಿಗೆ ಮನುಷ್ಯರ ಹೃದಯಗಳಲ್ಲಿ ಪ್ರೀತಿ ಮತ್ತು ಕಾಳಜಿಯ ಕೊರತೆಯಿಂದಾಗಿ ಅಷ್ಟೆ.
ನೀವು ಈ ವಿಶ್ವದಲ್ಲಿ ಒಂದು ಸಣ್ಣ ಕಣವಷ್ಟೆ.ಆದರೆ ಈ ಸಣ್ಣ ಕಣಕ್ಕೆ ಸಮಸ್ತ ಬ್ರಹ್ಮಾಂಡವನ್ನೇ ಒಳಗೂಡಿಸಿಕೊಳ್ಳುವ ಸಾಮರ್ಥ್ಯವಿದೆ.
ನಿಚ್ಚಳ ಸ್ಪಷ್ಟತೆಯಿದ್ದರೆ ಧೈರ್ಯದ ಅವಶ್ಯಕತೆಯಿಲ್ಲ. ಏಕೆಂದರೆ ಸ್ಪಷ್ಟತೆಯೇ ನಿಮ್ಮನ್ನು ಮುಂದೆ ಸಾಗಿಸುತ್ತದೆ.
ಯಾವ ಕೆಲಸವೂ ತಾನಾಗೇ ಒತ್ತಡದಿಂದ ಕೂಡಿಲ್ಲ. ಒತ್ತಡವನ್ನು ಉಂಟುಮಾಡುವುದು ಸವಾಲಿನ ಸನ್ನಿವೇಶಗಳಿಗೆ ನಾವು ತೋರುವ ನಮ್ಮ ಪ್ರವೃತ್ತಿವಶ ಪ್ರತಿಕ್ರಿಯೆಗಳು.
ನಿಮ್ಮನ್ನು ನೀವು ದೇಹದ ಮತ್ತು ಮನಸ್ಸಿನ ಮಿತಿಗಳನ್ನು ಮೀರಿ ಅನುಭವಿಸಿದರೆ, ನಂತರ ಭಯ ಎಂಬುದಿರದು.
ಸಂತೋಷವನ್ನು ಹೊರಗಡೆ ಅರಸಬೇಕಾಗಿಲ್ಲ. ಅದು ಅಂತರ್ಗತವಾದುದು. ನೀವು ನಿಮ್ಮ ಮನಸ್ಸನ್ನು ಫಜೀತಿ ಮಾಡಿಕೊಳ್ಳದಿದ್ದರೆ, ನೀವು ಸ್ವಭಾವತಃ ಸಂತೋಷಭರಿತರಾಗಿರುತ್ತೀರಿ.
ಅಧ್ಯಾತ್ಮ ಎಂದರೆ ಬದುಕಿನಿಂದ ದೂರ ಸರಿಯುವುದಲ್ಲ. ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ಬದುಕಿನ ಎಲ್ಲ ವಿಷಯಗಳನ್ನೂ ನಿಮ್ಮನ್ನು ಬಂಧಿಸಿಕೊಳ್ಳುವ ಬದಲಿಗೆ ನಿಮ್ಮನ್ನು ಮುಕ್ತಗೊಳಿಸಿಕೊಳ್ಳಲು ಬಳಸುವುದು.
ಅತೀಂದ್ರಿಯಜ್ಞಾನಕ್ಕಾಗಿ ನೀವು ಹಾತೊರೆಯುತ್ತಿದ್ದರೆ, ನಿಮ್ಮ ಗ್ರಹಿಕೆಯ ಸದ್ಯದ ಮಿತಿಗಳನ್ನು ಮೀರಿ ಜೀವನದ ಇತರ ಆಯಾಮಗಳನ್ನು ಅರಿಯಲು ‘ನಾಗ’ವು ನಿಮಗೆ ಸಹಾಯ ಮಾಡುತ್ತದೆ.
ನಿಮಗೆ ನಿಮ್ಮ ನಶ್ವರತೆಯ ಅರಿವಿದ್ದಾಗ, ನೀವು ಅತ್ಯಂತ ಹೆಚ್ಚು ಜೀವನೋತ್ಸಾಹದಿಂದ ಬಾಳುತ್ತೀರಿ.