FILTERS:
SORT BY:
ನಂಬಿಕೆ ಎಂದರೆ ನಿಮಗೆ ಎಳ್ಳಷ್ಟೂ ಗೊತ್ತಿಲ್ಲದ ವಿಷಯಗಳ ಬಗ್ಗೆ ಸಿದ್ಧಾಂತಗಳನ್ನು ಮಾಡಿಕೊಳ್ಳುವುದು.
ಸ್ನೇಹಿತ ಎಂದರೆ ಯಾರು? ಸ್ನೇಹಿತರೆಂದರೆ ನಿಮ್ಮಂತೆಯೇ ಗೊಂದಲದಲ್ಲಿರುವ ಇನ್ನೊಬ್ಬ ವ್ಯಕ್ತಿ. ನೀವಿಬ್ಬರೂ ಪ್ರಾಮಾಣಿಕರಾಗಿ ಒಬ್ಬರ ಬೆನ್ನಿಗೆ ಒಬ್ಬರು ನಿಂತಿದ್ದರೆ, ಆಗ ನಿಜವಾದ ಸ್ನೇಹ ಹುಟ್ಟುತ್ತದೆ.
ಸುತ್ತಲಿನ ಪರಿಸರ ಮಧುರವಾಗಬೇಕೆಂದರೆ, ನಿಮಗೆ ಇತರರ ಸಹಯೋಗ ಅಗತ್ಯ. ಆದರೆ ನಿಮ್ಮ ದೇಹ, ಮನಸ್ಸು, ಮತ್ತು ಜೀವಶಕ್ತಿಯನ್ನು ಮಧುರವಾಗಿಸುವುದು ನೂರಕ್ಕೆ ನೂರು ನಿಮ್ಮದೇ ಜವಾಬ್ದಾರಿ.
ಹೋಳಿಯು ಬರುವುದು ಎಲ್ಲವೂ ಅರಳಿ ವಸಂತವು ಉತ್ತುಂಗದಲ್ಲಿರುವಾಗ. ಇದು ಬಣ್ಣ, ಪ್ರೀತಿ, ಮತ್ತು ಲವಲವಿಕೆಯ ನೃತ್ಯದಲ್ಲಿ ನಿಮ್ಮ ‘ಜೀವಂತಿಕೆ’ಯನ್ನು ಸಂಭ್ರಮಾಚರಿಸುವ ಸಮಯ.
ಜೀವನದಲ್ಲಿ ನಿಮ್ಮ ತನ್ಮಯತೆ ಎಷ್ಟು ಗಾಢವಾಗಬೇಕೆಂದರೆ ನಿಮ್ಮ ಬಗೆಗಿನ ಪರಿವೆಯೇ ಇಲ್ಲವಾಗಬೇಕು. ಅದುವೇ ಭಕ್ತಿ.
ಇದುವೇ ನಿಮ್ಮ ಮನಸ್ಸಿನ ಸ್ವಭಾವ: ಏನೋ ಒಂದು ಯೋಚನೆಯು ಬರಬಾರದೆಂದು ನೀವಂದುಕೊಂಡರೆ, ನಿಮ್ಮ ತಲೆ ಬರೀ ಅದೇ ಯೋಚನೆಯಿಂದ ತುಂಬಿ ಹೋಗುತ್ತದೆ.
ನೀವು ನಿಮ್ಮ ದೇಹ ಮತ್ತು ಬುದ್ಧಿಗಳಲ್ಲೇ ಬದುಕುತ್ತಿದ್ದಾಗ, ಜೀವನವು ಒಂದು ದೊಂಬರಾಟವಾಗುತ್ತದೆ. ದೈವೀಪ್ರಜ್ಞೆಯು ನಿಮ್ಮ ಬದುಕನ್ನು ಮುನ್ನಡೆಸಿದಾಗ, ಅದೊಂದು ನೃತ್ಯವಾಗುತ್ತದೆ.
ಕಾಲಭೈರವನು ಕೇವಲ ಮೃತ್ಯುವಿನ ದೇವತೆಯಲ್ಲ, ಅವನು ಕಾಲದ ದೇವತೆ. ನಿಮ್ಮ ಜೀವನದ ಗುಣಮಟ್ಟವು ಮೂಲತಃ ನೀವು ನಿಮ್ಮ ಸಮಯವನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದನ್ನು ಅವಲಂಬಿಸಿದೆ.
ನಿನ್ನೆ ನೀವು ಏನೇ ಮಾಡಿದ್ದರೂ ಸರಿ, ನಿಮಗೆ ಬೇಕಿದ್ದರೆ ಈ ಕ್ಷಣ ನೀವು ಓರ್ವ ಅದ್ಭುತ ವ್ಯಕ್ತಿಯಾಗಬಲ್ಲಿರಿ. ಅಸ್ತಿತ್ವವು ನಿಮಗೆ ಈ ಸ್ವಾತಂತ್ರ್ಯವನ್ನು ನೀಡಿದೆ.
ಮಹಿಳೆಯರನ್ನು ಆದರಿಸದ, ಬೆಂಬಲಿಸದ ಸಮಾಜವು ಪ್ರಗತಿ ಮತ್ತು ಏಳಿಗೆಯನ್ನು ಹೊಂದಲು ಸಾಧ್ಯವಿಲ್ಲ. ಜಗತ್ತಿನಾದ್ಯಂತವೂ ಸ್ತ್ರೀತತ್ತ್ವವು ಅರಳಿ ಬೆಳಗಲಿ.
ನೀವು ಮಗುವಾಗಿದ್ದಾಗ, ನಿಮಗೆ ದುಃಖವುಂಟು ಮಾಡಲು ಬೇರೆಯವರು ಬಹಳ ಕಷ್ಟ ಪಡಬೇಕಾಗಿತ್ತು. ಇಂದು, ನಿಮಗೆ ಸಂತೋಷವುಂಟು ಮಾಡಲು ಬೇರೆಯವರು ಬಹಳ ಕಷ್ಟ ಪಡಬೇಕಾಗಿ ಬಂದಿದೆ. ಮಾನವ ಅನುಭವದ ಮೂಲವು ನಿಮ್ಮೊಳಗೇ ಇದೆ ಎಂದು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ.
ಹೂವಿಗೆ ಕಂಪು ಹೇಗೆಯೋ, ಮನುಷ್ಯರಿಗೆ ಪ್ರೀತಿಯೂ ಹಾಗೇ.