Main Centers
International Centers
India
USA
FILTERS:
SORT BY:
ಮನಸ್ಸು ಬಹಳ ಶಕ್ತಿಯುತವಾದ ಸಾಧನ. ನೀವು ಹುಟ್ಟುಹಾಕುವ ಪ್ರತಿಯೊಂದು ಯೋಚನೆ, ಪ್ರತಿಯೊಂದು ಭಾವನೆ ನಿಮ್ಮ ಶರೀರದ ರಾಸಾಯನಿಕ ವ್ಯವಸ್ಥೆಯನ್ನೇ ಬದಲಿಸುತ್ತದೆ.
ಮಾನವ ಮನಸ್ಸಿನ ಸೊಗಸೇನೆಂದರೆ ಅದು ಕಲ್ಪನೆ ಮಾಡಬಲ್ಲದು. ಮಾನವ ಮನಸ್ಸಿನ ಹೊಲಸೇನೆಂದರೆ ಅದು ತನ್ನದೇ ಕಲ್ಪನೆಯಲ್ಲಿ ಕಳೆದುಹೋಗಬಲ್ಲದು.
ನೀವು ಹೇಗಿದ್ದೀರಿ ಎಂಬುದಕ್ಕೆ ಯಾರೋ ಬೇರೆಯವರು ಜವಾಬ್ದಾರರು ಎಂದು ನೀವು ಯೋಚಿಸುತ್ತಿರುವವರೆಗೆ ನೀವು ನಿಮಗೆ ಬೇಕಾದಂತೆ ಆಗಲಾರಿರಿ.
ಪ್ರೀತಿ ಎಂಬುದು ಲೇವಾದೇವಿಯಲ್ಲ. ಅದು ನಿಮ್ಮದೇ ಭಾವನೆಗಳಲ್ಲಿನ ಒಂದು ಸಡಗರ ಹಾಗೂ ಮಾಧುರ್ಯ.
ನಮ್ಮ ಪೂರ್ವಜರಿಲ್ಲದೆ ನಾವಿರುತ್ತಿರಲಿಲ್ಲ. ಹಿಂದಿನ ಪೀಳಿಗೆಗಳು ನೀಡಿದ ಕೊಡುಗೆಗಳನ್ನು ಆದರಿಸುವುದು ವಿವೇಕ.
ಅತ್ಯಂತ ಹೆಚ್ಚು ಮುಕ್ತಗೊಳಿಸುವ ಭಾವನೆಯೆಂದರೆ ಕರುಣೆ.
ಗ್ರಹಣಶೀಲತೆಯೇ ಯೋಗದ ತಿರುಳು. ನಿಮ್ಮ ಗ್ರಹಿಕೆ ಆಳವಾದಷ್ಟೂ ನಿಮ್ಮ ಅನುಭವ ಗಾಢವಾಗುತ್ತದೆ, ಮತ್ತು ನಿಮ್ಮ ಅರಿವು ಶ್ರೀಮಂತವಾಗುತ್ತದೆ.
ಪರಮಾಣುವಿನಿಂದ ಹಿಡಿದು ಬ್ರಹ್ಮಾಂಡದವರೆಗೆ ಪ್ರತಿಯೊಂದೂ ನಿಮ್ಮ ಗ್ರಹಿಕೆಯನ್ನು ಮೀರಿದ್ದು ಎಂದು ನಿಮಗೆ ಮನವರಿಕೆಯಾದರೆ, ನೀವು ಸಹಜವಾಗಿಯೇ ತಲೆಬಾಗಿ ವಿನಮ್ರರಾಗಿ ನಡೆಯುತ್ತೀರಿ.
ನಿಮ್ಮ ಸ್ವಂತ ಬೇಕುಬೇಡಗಳಿಗಿಂತ ನಿಮ್ಮ ಸುತ್ತಲಿರುವ ಜನರು ನಿಮಗೆ ಹೆಚ್ಚು ಮುಖ್ಯರಾದರೆ, ನಿಮ್ಮ ಬದುಕು ಸರಳವೂ ಸುಂದರವೂ ಆಗುವುದು.
ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆರೋಗ್ಯ ಎನ್ನುವುದು ಸಮಗ್ರವಾಗಿ ಉಂಟಾಗುವಂತದ್ದು.
ಮಹಾತ್ಮ ಎಂದರೆ ಮಹಾನ್ ಚೇತನ. ಒಬ್ಬರು ಮಹಾನ್ ಚೇತನವಾಗುವುದು ಅವರು ಎಲ್ಲ ಗುರುತುಗಳನ್ನು ಮೀರಿದ ಜೀವವಾಗಿ ಬಾಳಿದಾಗ ಮಾತ್ರ.
ನೀವು ನಿಮ್ಮಿಂದಲೇ ತುಂಬಿ ಹೋಗಿದ್ದಾಗ ಗ್ರಹಣಶೀಲರಾಗಿರಲು ಸಾಧ್ಯವಿಲ್ಲ. ‘ನೀವು’ ಕುಗ್ಗಿದಷ್ಟೂ ನೀವು ಹೆಚ್ಚು ಗ್ರಹಿಸುತ್ತೀರಿ. ‘ನೀವು’ ಹಿಗ್ಗಿದಷ್ಟೂ, ನೀವು ಕಡಿಮೆ ಗ್ರಹಿಸುತ್ತೀರಿ.