Main Centers
International Centers
India
USA
FILTERS:
SORT BY:
ಏನನ್ನು ಆಯ್ಕೆ ಮಾಡಬೇಕೆಂದು ನಿಮಗೆ ಗೊತ್ತಿಲ್ಲದಿದ್ದಾಗ, ಎಲ್ಲದರಲ್ಲೂ ಸಂಪೂರ್ಣವಾಗಿ ತೊಡಗಿಕೊಳ್ಳಿ. ಆಗ ಜೀವನವೇ ಆಯ್ಕೆ ಮಾಡುತ್ತದೆ, ಮತ್ತದು ಎಂದೂ ತಪ್ಪಾಗಿರುವುದಿಲ್ಲ.
ಏನಾದರೂ ಅದ್ಭುತವಾದುದ್ದನ್ನು ರಚಿಸಲು ಭಾರಿ ಬುದ್ಧಿಶಕ್ತಿ ಅಥವಾ ಅರ್ಹತೆಗಳು ಇರಬೇಕೆಂದೇನಿಲ್ಲ. ನೀವು ಏನು ಮಾಡಲು ಬಯಸುತ್ತೀರೋ ಅದರ ಬಗ್ಗೆ ಸಂಪೂರ್ಣ ಭಕ್ತಿ ಇದ್ದರೆ ಸಾಕು.
ಒತ್ತಡದಲ್ಲಿದ್ದಾಗ ನೀವು ಗ್ರಹಿಸಲಾರಿರಿ. ಉದಾಸೀನತೆಯಲ್ಲಿದ್ದಾಗಲೂ ಗ್ರಹಿಸಲಾರಿರಿ. ನಿಮ್ಮಲ್ಲಿ ತೀವ್ರತೆ ಮತ್ತು ನಿರಾಳತೆ ಎರಡೂ ಒಟ್ಟಿಗೇ ಇದ್ದಾಗಲಷ್ಟೆ ಎಲ್ಲವನ್ನೂ ನೀವು ಅದು ಇದ್ದಂತೆಯೇ ಗ್ರಹಿಸಬಲ್ಲಿರಿ.
ನಮ್ಮ ಪೂರ್ವಜರಿಲ್ಲದೆ ನಾವಿರುತ್ತಿರಲಿಲ್ಲ. ಹಿಂದಿನ ಪೀಳಿಗೆಗಳು ನೀಡಿದ ಕೊಡುಗೆಗಳನ್ನು ಆದರಿಸುವುದು ವಿವೇಕ.
ಕೇವಲ ಪುಸ್ತಕಜ್ಞಾನವನ್ನಲ್ಲದೆ, ದೇಹದ ಮಿತಿಗಳನ್ನು ಮೀರಲು ಹಂಬಲಿಸುವವರು ಸಹಜವಾಗಿಯೇ ದೈವೀ ಸ್ತ್ರೀತತ್ತ್ವದ ಸಾತ್ತ್ವಿಕ ಅಂಶಕ್ಕಾಗಿ ಹಾತೊರೆಯುತ್ತಾರೆ. ಸರಸ್ವತಿಯು ಅದರ ಸಾಕಾರರೂಪವೇ ಆಗಿದ್ದಾಳೆ.
ವ್ಯಕ್ತಿಗತ ಗಡಿಗಳು ಬೇಕಿರುವುದು ನಿಮ್ಮ ದೇಹಕ್ಕೆ ಮಾತ್ರ. ನಿಮ್ಮ ಕುರಿತಾದ ಬೇರೆಲ್ಲಾ ವಿಷಯಗಳೂ ‘ವಿಶ್ವಗತ’ವಾಗಿರಬಹುದು.
ಭಕ್ತಿ ಎಂದರೆ ನೀವು ಎಂಬುದು ಇಲ್ಲದೇ ಇರುವ ಸ್ಥಿತಿ. ಆಗ ಜೀವನವು ಒಂದು ರೀತಿಯ ಮಾಧುರ್ಯ ಮತ್ತು ಸೊಬಗಿನೊಂದಿಗೆ ನಿಮ್ಮ ಮೂಲಕ ಹರಿಯುತ್ತದೆ ಅಷ್ಟೆ.
ನಿಮ್ಮ ಸ್ವಂತ ಬೇಕುಬೇಡಗಳಿಗಿಂತ ನಿಮ್ಮ ಸುತ್ತಲಿರುವ ಜನರು ನಿಮಗೆ ಹೆಚ್ಚು ಮುಖ್ಯರಾದರೆ, ನಿಮ್ಮ ಬದುಕು ಸರಳವೂ ಸುಂದರವೂ ಆಗುವುದು.
ಜಗತ್ತಿನಲ್ಲಿ ನಡೆಯುತ್ತಿರುವುದು ನಿಮಗೆ ಬೇಕಾದಂತೆ ಇಲ್ಲದಿದ್ದರೆ, ಕೊನೆಪಕ್ಷ ನಿಮ್ಮೊಳಗೆ ನಡೆಯುತ್ತಿರುವುದು ನಿಮಗೆ ಬೇಕಾದಂತಿರಬೇಕು.
ಸಮಾಜವು ಮಾನವ ಪ್ರಜ್ಞೆಯನ್ನು ರೂಪುಗೊಳಿಸಬಾರದು. ಮಾನವ ಪ್ರಜ್ಞೆಯು ಸಮಾಜವನ್ನು ರೂಪುಗೊಳಿಸಬೇಕು.
ಮನಸ್ಸು ಬಹಳ ಶಕ್ತಿಯುತವಾದ ಸಾಧನ. ನೀವು ಹುಟ್ಟುಹಾಕುವ ಪ್ರತಿಯೊಂದು ಯೋಚನೆ, ಪ್ರತಿಯೊಂದು ಭಾವನೆ ನಿಮ್ಮ ಶರೀರದ ರಾಸಾಯನಿಕ ವ್ಯವಸ್ಥೆಯನ್ನೇ ಬದಲಿಸುತ್ತದೆ.
ಮಾನವ ಮನಸ್ಸಿನ ಸೊಗಸೇನೆಂದರೆ ಅದು ಕಲ್ಪನೆ ಮಾಡಬಲ್ಲದು. ಮಾನವ ಮನಸ್ಸಿನ ಹೊಲಸೇನೆಂದರೆ ಅದು ತನ್ನದೇ ಕಲ್ಪನೆಯಲ್ಲಿ ಕಳೆದುಹೋಗಬಲ್ಲದು.