Main Centers
International Centers
India
USA
FILTERS:
SORT BY:
ನಿಮ್ಮ ಆಹಾರವು ಕೇವಲ ನಿಮ್ಮ ದೈಹಿಕ ಆರೋಗ್ಯವನ್ನು ಮಾತ್ರವಲ್ಲ, ಬದಲಿಗೆ ನೀವು ಯೋಚಿಸುವ, ಭಾವಿಸುವ, ಮತ್ತು ಜೀವನವನ್ನು ಅನುಭವಿಸುವ ರೀತಿಯನ್ನೇ ನಿರ್ಧರಿಸುತ್ತದೆ.
quotes about life - problems and possibilities
ನಿಮ್ಮ ಬದುಕಿನ ಅತ್ಯಂತ ಮಧುರವಾದ ಕ್ಷಣಗಳು ನೀವು ಸಂತೋಷವನ್ನು ವ್ಯಕ್ತಪಡಿಸುವ ಕ್ಷಣಗಳು, ಸಂತೋಷವನ್ನು ಅರಸುವ ಕ್ಷಣಗಳಲ್ಲ.
ಯೋಗವನ್ನು ಚಿಕಿತ್ಸೆಯಾಗಿ ಬಳಸುವುದು ವಿಮಾನವನ್ನು ಬಸ್ಸಾಗಿ ಬಳಸಿದಂತೆ.
ಒಮ್ಮೆ ನಿಮ್ಮ ಮತ್ತು ದೇಹದ ನಡುವೆ, ನಿಮ್ಮ ಮತ್ತು ಮನಸ್ಸಿನ ನಡುವೆ ಒಂದು ಅಂತರ ಉಂಟಾಯಿತೆಂದರೆ, ಆಗ ಭೌತಿಕವನ್ನು ಮೀರಿದುದನ್ನು ಅನುಭವಿಸುವ ಸಾಧ್ಯತೆಯು ತೆರೆದುಕೊಳ್ಳುವುದು.
ಇಂದು ಹುಣ್ಣಿಮೆ
ಜಗತ್ತು ನಿಮ್ಮತ್ತ ಏನನ್ನು ಬೀಸುತ್ತದೆ ಎಂಬುದು ಯಾವಾಗಲೂ ನಿಮ್ಮ ಕೈಯಲ್ಲಿಲ್ಲ. ಆದರೆ ನೀವದರಿಂದ ಏನನ್ನು ಮಾಡಿಕೊಳ್ಳುತ್ತೀರಿ ಎಂಬುದು ನೂರಕ್ಕೆ ನೂರು ನಿಮ್ಮದೇ ಕೈಯಲ್ಲಿದೆ.
ನಿಮ್ಮ ಮನಸ್ಸಿನಲ್ಲಿ ಏನೇ ತೊಳಲಾಟ ಉಂಟಾದರೂ ನಿಮ್ಮ ಬುದ್ಧಿಶಕ್ತಿ ನಿಮಗೇ ವಿರುದ್ಧವಾಗಿಬಿಟ್ಟಿದೆ ಎಂದರ್ಥ.
ಸೃಷ್ಟಿಯು ಇರುವುದು ಸೃಷ್ಟಿಕರ್ತನ ಮಡಿಲಲ್ಲಿ. ಮತ್ತು ಸೃಷ್ಟಿಕರ್ತನು ಸೃಷ್ಟಿಯ ಅಂತಃಸತ್ತ್ವ.
quotes about family - relationships
ಕಲಿಯುವಿಕೆ ಎಂಬುದು ಮಾಹಿತಿ ಸಂಗ್ರಹಣೆಯಲ್ಲ. ಕಲಿಯುವಿಕೆ ಎಂಬುದು ಗ್ರಹಣಶೀಲತೆ.
ನೀವು ನಶ್ವರರು ಎಂದು ನೀವು ಮನಗಂಡರಷ್ಟೇ ನೀವು ಪ್ರಜ್ಞಾಪೂರ್ವಕರಾಗುತ್ತೀರಿ. ಇಲ್ಲವಾದರೆ ನೀವು ಬಾಳನ್ನು ಪ್ರಜ್ಞಾಹೀನವಾಗಿ ಬಾಳುತ್ತೀರಿ.