Main Centers
International Centers
India
USA
FILTERS:
SORT BY:
ನೀವು ಮಾಡುವ ಕೆಲಸ ಮುಖ್ಯವಾದುದು ಎಂದು ನೀವಂದುಕೊಂಡಿದ್ದರೆ, ನಿಮ್ಮನ್ನು ಹೆಚ್ಚು ಸಶಕ್ತರಾಗಿಸಲು ನಿಮ್ಮ ಮೇಲೆಯೇ ಕೆಲಸ ಮಾಡುವುದು ಇನ್ನೂ ಹೆಚ್ಚು ಮುಖ್ಯವಾದುದು.
ನಿಮಗೆ ಒಬ್ಬಂಟಿತನ ಕಾಡುತ್ತಿರುವುದು ನೀವು ಒಬ್ಬರೇ ಇದ್ದೀರಿ ಎಂಬ ಕಾರಣದಿಂದಲ್ಲ. ನಿಮಗೆ ಒಬ್ಬಂಟಿತನ ಕಾಡುತ್ತಿರುವುದು ಸುತ್ತಲಿರುವ ಎಲ್ಲವನ್ನೂ ನೀವು ತಿರಸ್ಕರಿಸುತ್ತಿರುವುದರಿಂದ.
ವಾಣಿಜ್ಯವನ್ನು ಹುಟ್ಟುಹಾಕಿದ್ದು ಮನುಷ್ಯರ ಒಳಿತಿಗಾಗಿ. ಮನುಷ್ಯರನ್ನು ಹುಟ್ಟುಹಾಕಿದ್ದು ವಾಣಿಜ್ಯದ ಒಳಿತಿಗಾಗಿ ಅಲ್ಲ.
ಆತ್ಮವಿಶ್ವಾಸ ಮತ್ತು ಮೂರ್ಖತನ ಬಹಳ ಅಪಾಯಕಾರಿ ಜೋಡಿ, ಆದರೆ ಅವು ಬಹುತೇಕ ಒಟ್ಟಾಗಿಯೇ ಇರುತ್ತವೆ.
ನನಗೆ ಏನೆಲ್ಲ ತಿಳಿದಿದೆಯೋ, ನನ್ನ ಗುರುಗಳಿಗೆ ಏನೆಲ್ಲ ತಿಳಿದಿತ್ತೋ, ಮತ್ತು ಸಮಸ್ತ ಆಧ್ಯಾತ್ಮಿಕ ಪರಂಪರೆಗೆ ಏನೆಲ್ಲ ತಿಳಿದಿತ್ತೋ, ಅದೆಲ್ಲವೂ ಧ್ಯಾನಲಿಂಗದಲ್ಲಿ ಶಕ್ತಿರೂಪದಲ್ಲಿ ನಿಕ್ಷೇಪವಾಗಿದೆ. ನಾನು ಕೇವಲ ಒಂದು ಪರಿಣಾಮವಷ್ಟೆ.
ಯೋಗವು ಸೂಪರ್ ಮಾನವರಾಗುವ ಬಗ್ಗೆಯಲ್ಲ, ಬದಲಿಗೆ ಮಾನವರಾಗಿರುವುದೇ ಸೂಪರ್ ಎಂದು ಮನಗಾಣುವ ಬಗ್ಗೆಯಾಗಿದೆ.
ನೀವು ನಿಮ್ಮ ಜೀವನವನ್ನು ಪರಮ ಸಾಧ್ಯತೆಗಾಗಿ ಪ್ರಯತ್ನಿಸುತ್ತಾ ಜೀವಿಸಿದರೆ, ಆ ಪ್ರಯತ್ನದಲ್ಲೇ ಮುಕ್ತಿಯಿದೆ.
ಶಾಂತಿ-ಸಂತೋಷಗಳು ಜೀವನದ ಕೊನೆಯಲ್ಲಿ ಹೊಂದುವಂತಹ ಸಂಗತಿಗಳಲ್ಲ. ಅವು ಜೀವನದ ತಳಹದಿಯೇ ಆಗಿವೆ.
ನೀವು ಏನನ್ನು ಪಡೆಯುತ್ತೀರೋ ಅದರಿಂದ ನೀವು ಜೀವಿತ ನಡೆಸಬಹುದಷ್ಟೆ. ಆದರೆ ನಿಮ್ಮ ಜೀವನ ಧನ್ಯವಾಗುವುದು ನೀವು ಏನನ್ನು ನೀಡುತ್ತೀರಿ ಎಂಬುದರಿಂದ.
ನೀವು ಸಂತೋಷವನ್ನು ಹುಟ್ಟುಹಾಕಬೇಕಾಗಿಲ್ಲ. ತೊಳಲಾಟವನ್ನು ಉಂಟುಮಾಡಿಕೊಳ್ಳದಿದ್ದರೆ, ನೀವು ಸಂತೋಷವಾಗೇ ಇರುತ್ತೀರಿ.
ಮದುವೆಯನ್ನು ಒಂದು ಕಟ್ಟಳೆಯಾಗಿ ನೋಡಿದರೆ, ಜನರು ಸಹಜವಾಗಿಯೇ ಅದರಿಂದ ತಪ್ಪಿಸಿಕೊಳ್ಳಲು ನೋಡುತ್ತಾರೆ.
Even God cannot decide your inner wellbeing. If you refuse to cause misery to yourself, then no one can inflict it upon you.