ಆಯುರ್ವೇದ ಮತ್ತು ’ಸಿದ್ಧ’ - ಭಾರತದಲ್ಲಿ ಅತ್ಯಂತ ಪುರಾತನವಾದ ವೈದ್ಯಕೀಯ ಪದ್ಧತಿಗಳು. ದೇಶದಲ್ಲೆಲ್ಲೆಡೆ ನಮಗೆ ಆಯುರ್ವೇದ ವೈದ್ಯರು ಕಾಣಸಿಗುತ್ತಾರೆ. ಆಯುರ್ವೇದ ಔಷಧಿಗಳು ಒಳ್ಳೆಯದು, ಇಂಗ್ಲೀಷ್ ಔಷಧಗಳು ಕಾಲಕ್ರಮೇಣ ಆರೊಗ್ಯದ ಮೇಲೆ ಅಡ್ಡಪರಿಣಾಮ ಉಂಟುಮಾಡುತ್ತವೆ ಎಂಬುದು ಕೆಲವರ ವಾದ. ’ಆಯುರ್ವೇದ’ಕ್ಕಿಂತ ಇಂಗ್ಲೀಷ್ ಔಷಧಗಳು ಹೆಚ್ಚು ವೈಜ್ಞಾನಿಕ, ಅದೇ ಒಳ್ಳೆಯದು ಎಂಬುದು ಇನ್ನು ಕೆಲವರ ವಾದ. ಇನ್ನು ’ಸಿದ್ಧ’- ಇದು ಮತ್ತೊಂದು ಬಗೆಯ ಭಾರತೀಯ ವೈದ್ಯ ಪದ್ಧತಿ. ಈ ಪದ್ಧತಿಗಳು ಕೆಲಸ ಮಾಡುತ್ತವೆಯೇ? ಹೌದಾದರೆ ಇವುಗಳ ಸ್ವರೂಪವೇನು? ಈ ವಿಜ್ಞಾನಗಳ ಆಳ-ಅಗಲ ಎಷ್ಟು? ಯಾರು ಈ ಔಷಧಗಳನ್ನು ಕೊಡಬಹುದು? ನಮ್ಮ ಒಳಿತಿಗೆ ಇವುಗಳನ್ನು ನಾವು ಹೇಗೆ ಬಳಸಿಕೊಳ್ಳಬಹುದು?
Subscribe