Wisdom
FILTERS:
SORT BY:
ನಮ್ಮ ಲಾಭಕ್ಕಾಗಿ ಏನನ್ನೂ ಶೋಷಿಸದಿರುವುದು ಮುಖ್ಯ – ಅದು ಗಿಡಮರಗಳಾಗಲಿ, ಪ್ರಾಣಿಗಳಾಗಲಿ, ಅಥವಾ ಮನುಷ್ಯರಾಗಲಿ.
ಇಂದು ಧನ್ಯಪೌರ್ಣಮಿ. ಪ್ರಕೃತಿಯ ಉದಾರತೆಯು ಗರಿಷ್ಠ ಫಲವನ್ನು ನೀಡುವ ಹುಣ್ಣಿಮೆಯಿದು. ಈ ಪುಣ್ಯದಿನದಂದು ಅನೇಕ ಯೋಗಿಗಳು ಪ್ರಜ್ಞಾಪೂರ್ವಕವಾಗಿ ದೇಹತ್ಯಾಗ ಮಾಡಿದ್ದಾರೆ. ಆ ಎಲ್ಲ ಮಹಾನ್ ಚೇತನಗಳಿಗೆ ನಾವು ತಲೆಬಾಗುತ್ತೇವೆ.
ಮಾನವನ ಮನಸ್ಸನ್ನು ಹೊರತುಪಡಿಸಿ, ಬೇರೆಲ್ಲದರೊಂದಿಗೆ ಒಂದಾಗಿಲ್ಲದ ಯಾವೊಂದು ವಸ್ತುವೂ ಈ ವಿಶ್ವದಲ್ಲಿಲ್ಲ.
ಶಬ್ದಕ್ಕೆ ತನ್ನದೇ ಆದ ಜ್ಯಾಮಿತಿಯಿದೆ. ನೀವು ಸರಿಯಾದ ಶಬ್ದಗಳನ್ನು ಉಚ್ಛರಿಸಿದರೆ, ಅದು ರೂಪಗಳನ್ನು ತಟ್ಟುತ್ತದೆ ಮತ್ತು ಆವರಿಸುತ್ತದೆ. ಇದರಲ್ಲಿ ಅಗಾಧವಾದ ಶಕ್ತಿಯಿದೆ.
ನಮ್ಮ ಮನಸ್ಸನ್ನು ನಮಗೆ ಬೇಕಾದಂತೆ ನಿರ್ಮಿಸಲು ಕಲಿಯಬೇಕು – ಇದುವೇ ಜಗತ್ತನ್ನು ನಮಗೆ ಬೇಕಾದಂತೆ ನಿರ್ಮಿಸಲು ಆಧಾರಭೂತವಾದುದು.
ನಮಗೆ ಜಗತ್ತಿನಲ್ಲಿ ಬೇಕಾಗಿರುವುದು ದಾನವಲ್ಲ; ಬೇಕಿರುವುದು ಒಳಗೂಡಿಸಿಕೊಳ್ಳುವಿಕೆ.
ಗುರು ಎಂದರೆ ನಿಮ್ಮ ಅಂಧಕಾರವನ್ನು ತೊಡೆದುಹಾಕುವವರು. ನಿಮ್ಮ ಅನುಭವದಲ್ಲಿಲ್ಲದ ಆಯಾಮಗಳ ಮೇಲೆ ಅವರು ಬೆಳಕು ಚೆಲ್ಲುತ್ತಾರೆ.
ಸ್ಪಷ್ಟತೆಯು ನೀವು ನಿಮ್ಮ ಗೊಂದಲಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುವುದರ ಪರಿಣಾಮವಾಗಿದೆ.
ಒಂದು ವಿಷಯವು ಮಾಡಲು ಯೋಗ್ಯವಾದುದು ಎಂದು ನಿಮಗೆ ಅನಿಸಿದರೆ, ನೀವದು ಸಾಕಾರಗೊಳ್ಳುವಂತೆ ಮಾಡಬೇಕು.
ನೀವು ಇರುವ ರೀತಿಗೆ ಯಾರೋ ಬೇರೆಯವರು ಜವಾಬ್ದಾರರು ಎಂದು ನೀವು ಅಂದುಕೊಂಡರೆ, ನೀವು ನಿಮಗೆ ಬೇಕಾದಂತೆ ಆಗಲು ಸಾಧ್ಯವಿಲ್ಲ.
ಯೌವನ ಎಂಬುದು ವರ್ಷಗಳ ಲೆಕ್ಕಕ್ಕೆ ಸಂಬಂಧಿಸಿದುದಲ್ಲ, ಬದಲಿಗೆ ಜೀವಂತಿಕೆ ಮತ್ತು ತೊಡಗುವಿಕೆಗೆ ಸಂಬಂಧಿಸಿದುದು.