ಸದ್ಗುರು: ಮಾನವರಾಗಿ ನಾವು ನಾನಾ ರೀತಿಯ ಚಟುವಟಿಕೆಗಳನ್ನು ಮಾಡಬಹುದು. ಆದರೆ, ನಾವು ಯಾವುದೇ ಚಟುವಟಿಕೆಯಲ್ಲಿದ್ದರೂ, ಇಂದಿನ ಪ್ರಪಂಚದಲ್ಲಿ ಎಂತಹ ಛಲಗಾರನಾದ ಉದ್ಯಮಿಯಾಗಲೀ, ಪರಿಣಾಮದ ಬಗ್ಗೆ ಮಾತನ್ನಾಡುತ್ತಾರೆಯೇ ಹೊರತು ಲಾಭದ ಬಗ್ಗೆ ಅಲ್ಲ. ‘ಪರಿಣಾಮ’ ಎಂದರೆ ಒರಟು ಪದವಾಗುತ್ತದೆ. “ನಾವು ಯಾರ ಜೀವನವನ್ನಾದರೂ ಸ್ಪರ್ಷಿಸಬೇಕು”. ಉದ್ಯಮಿಗಳು ಮಾತನಾಡುವ ‘ಪರಿಣಾಮ’ವಾಗಿರಬಹುದು ಅಥವಾ ನೀವು ವೈಕ್ತಿಕವಾಗಿ ಯಾರ ಜೊತೆಯಾದರೂ ಬಾಂಧವ್ಯವನ್ನು ಬೆಳೆಸುವುದಾಗಿರಬಹುದು, ಅಗತ್ಯವಾಗಿ ಎಲ್ಲೋ ಒಂದು ಕಡೆ ನೀವು ಯಾರೊಂದಿಗಾದರೂ ನೀವು ನಿಮ್ಮ ಎಲ್ಲೆಯನ್ನು ದಾಟಲು ಬಯಸುತ್ತೀರ, ಕಡೇ ಪಕ್ಷ ಸ್ವಲ್ಪ ಸಮಯಕ್ಕಾದರೂ. 

ಯೋಗಿ ಎನಿಸಿಕೊಳ್ಳಬೇಕಾದರೆ, ನಿಮ್ಮ ವೈಯಕ್ತಿಕ ಮಿತಿಯನ್ನು ಒಮ್ಮೆಯಾದರೂ ಅಳಿಸಿಹಾಕುವುದು. ನಿಮನ್ನು ಉಳಿದ ಪ್ರಪಂಚದಿಂದ ಬೇರೆ ಮಾಡುವ ಗಡಿಯನ್ನು ಯಾವುದಾದರೂ ರೀತಿಯಲ್ಲಿ ಅಳಿಸುವುದು. ನೀವೇನೂ ಯಾವುದಾದರೂ ಮಹತ್ತರವಾದ ಕಾರ್ಯವನ್ನು ಮಾಡಬೇಕಾಗಿಲ್ಲ.; ಲೈಂಗಿಕಕಾರ್ಯದಲ್ಲಿತೊಡಗುವುದೂ ಬೇಕಾಗಿಲ್ಲ; ಅಥವಾ ಯಾವುದೇ ತೊಡಕಿನಲ್ಲಿ ಸಿಲುಕಿಕೊಳ್ಳುವುದು ಬೇಡ. ನೀವು ಪ್ರಜ್ಞಾಪೂರ್ವಕರಾಗಿಯೇ ನಿಮ್ಮ ಎಲ್ಲೆಯನ್ನು ಅಳಿಸಿದರೆ, ಇಲ್ಲಿ ನೀವು ಕುಳಿತಿದ್ದಲ್ಲೇ, ಚಟುವಟಿಕೆಯಾಗಿರುವುದಕ್ಕಿಂತ ಕೋಟಿ ಪಾಲು ಹೆಚ್ಚು ಅನುಭವಿಸಬಹುದು ಹಾಗು ಅದು ನಿಜವಾಗಿಯೂ ಅದ್ಬುತ. ಯೋಗ ಎಂದರೆ ನಿಮ್ಮ ಸೀಮಿತ ಮಿತಿಗಳನ್ನು ಅಳಿಸಿಹಾಕುವುದು.

ಹತಾಶೆಯ ಪ್ರಯತ್ನಗಳು 

 ನೀವು ಈ ಪ್ರಪಂಚದಲ್ಲಿ ಕಾಣುವ ಮಾನವರ ಎಲ್ಲಾ ಅಸಂಬದ್ಧ ಕಾರ್ಯಗಳ ಮೂಲ ಕಾರಣವೇ ಈ ಸೀಮಿತ ಚೌಕಟ್ಟು. ಈ ಸೀಮಿತ ಎಲ್ಲೆಗಳನ್ನು ಎಷ್ಟು ಭದ್ರವಾಗಿ ಸೃಷ್ಟಿಸಿರುತ್ತಾರೆಂದರೆ, ಇಬ್ಬರು ಮೈಕ್ತಿಗಳು ಪರಸ್ಪರ ಭೇಟಿಯಾದರೆ, ಬರೀ ಘರ್ಷಣೆಯಾಗುತ್ತದೆ, ಅಷ್ಟೇ. ಯೋಗ ಎಂದರೆ, ಶರೀರವನ್ನು ತಿರುಚುವುದು, ತಿರುಗಿಸುವುದಲ್ಲ: ಅದು ತೂಕ ಕಡಿಮೆ ಮಾಡಿಕೊಳ್ಳುವ ಕಾರ್ಯಕ್ರಮವೂ ಅಲ್ಲಾ ಅಥವಾ ಒತ್ತಡ ಕಡಿಮೆ ಮಾಡಿಕೊಳ್ಳುವುದೂ ಅಲ್ಲ. ಯೋಗ ಎಂದರೆ, ನೀವು “ನಾನು v/s ಬ್ರಹ್ಮಾಂಡ” ಎಂಬ ಮೂರ್ಖತನವನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಅರ್ಥ. ನಿಮ್ಮ ಸೃಷ್ಟಿಯ ಮೂಲಕ್ಕೇ ಎದುರಾಗಿ ನಿಲ್ಲುವುದು ಶತ ಮೂರ್ಖತನ. ನಿಮಗಿದು ಅರ್ಥವಾದರೆ, ನೀವು ಯೋಗದ ಹಾದಿಯಲ್ಲಿ ಇದ್ದೀರಿ ಎಂದು ಅರ್ಥ. 

ನೀವು ಇದನ್ನು ಹೇಗೆ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವು ಇದನ್ನು ಪ್ರಭಾವ ಎನ್ನಿರಿ, ಅಥವಾ ಸೇವೆ ಎನ್ನಿರಿ, ಹೇಗೆ ಬೇಕಾದರೂ ಕರೆಯಿರಿ. ಮೂಲಭೂತವಾಗಿ ನೀವು, ನಾನು ಮತ್ತು ಈ ಬ್ರಹ್ಮಾಂಡ, ಇದರ ನಡುವಿನ ವ್ಯರ್ಥ ಪೈಪೋಟಿಯನ್ನು ಅರ್ಥಮಾಡಿಕೊಂಡರೆ, ನೀವು ನಿಮ್ಮ ಮಿತಿಗಳನ್ನು ಸಡಿಲ ಪಡಿಸಿಕೊಳ್ಳುತ್ತೀರಿ - ಇದೇ ಯೋಗ. ಅಂದರೆ ಅದರೆಡೆಗೆ ನೀವು ವೈಫಲ್ಯವಿಲ್ಲದ ಸುರಕ್ಷಿತ ಮಾರ್ಗವನ್ನು ಹಿಡಿದಿದ್ದೀರಿ ಎಂದು ಅರ್ಥ. ಇಬ್ಬರು ಪ್ರೇಮದಲ್ಲಿ ಬಿದ್ದು, ಮದುವೆಯಾಗಿ, ಎಲ್ಲಾ ಎಲ್ಲೆಗಳನ್ನೂ ಮೀರಿ ಸಹಯೋಗದಿಂದ ಇದ್ದಾರೆ ಎಂದು ಕೊಳ್ಳುತ್ತಾರೆ, ಆದರೆ ಸ್ವಲ್ಪ ಸಮಯದ ನಂತರ ಅದು ಸುರಕ್ಷಿತವಾದ ಮಾರ್ಗವಲ್ಲ ಎಂದು ಅರಿವಾಗುತ್ತದೆ. 

 ನೀವು ನಿಮ್ಮಎಲ್ಲೆಗಳನ್ನು ಕೆಲವು ಸಮಯದವರೆಗೆ ದಾಟಿದಾಗ, ದ್ವೇಷವೂ ಮೂಡಬಹುದು. ಹಾಗೆಂದು ಸ್ವಲ್ಪ ಸಮಯದ ನಂತರ ಇಬ್ಬರು ವ್ಯಕ್ತಿಗಳಲ್ಲಿ ದ್ವೇಷವು ಮೂಡಲೇಬೇಕು ಎಂದು ಅರ್ಥವಲ್ಲ. ಹಾಯಾಗಿಯೂ ಇರಬಹುದು. ಕೆಲವು ವಿಶೇಷ ಕ್ಷಣಗಳಲ್ಲಿ ಅವರು ತಮ್ಮ ಎಲ್ಲೆಯನ್ನು ದಾಟಿರಬಹುದು. ಉಳಿದ ಸಮಯದಲ್ಲಿ ಅದು ಪರಸ್ಪರ ಲಾಭ ಪಡೆಯುವ ಯೋಜನೆಯಷ್ಟೇ ಆಗಿರುತ್ತದ. ಯಾವುದೇ ರೂಪದಲ್ಲಿರಲಿ ಯೋಗ ಎಂದರೆ ಇಷ್ಟೇ : ಮೊದಲನೆಯದಾಗಿ ನೀವು ನಿಮ್ಮ ಸೀಮಿತ ಎಲ್ಲೆಗಳನ್ನು ಅಳಿಸುವುದು. ನಿಮಗೆ ಇದರ ಸಂತಸದ ಅರಿವಾದರೆ ನೀವು ನಿಮ್ಮ ಸುತ್ತಲೂ ಇದನ್ನೇ ನೋಡಲು ಬಯಸುತ್ತೀರಿ.

 ಬದುಕಿನ ವ್ಯಂಗ್ಯ 

 ಬದುಕಿನ ಮೂಲ ವ್ಯಂಗ್ಯವೆಂದರೆ- ಬದುಕಿನ ಸಾಧನಗಳೇ ನಮಗೆ ವಿರುಧ್ದವಾಗುತ್ತದೆ. ಈ ಶರೀರವಿಲ್ಲದೆ ಇಲ್ಲಿ ಇರುವುದು ಹೇಗೆ ಎಂದು ಗೊತ್ತಿಲ್ಲ. ಈ ಮನಸ್ಸು ಇಲ್ಲದೆ ಇಲ್ಲಿ ಬದುಕುವುದು ಹೇಗೆ ಎಂದೂ ಗೊತ್ತಿಲ್ಲ. ಶರೀರ ಮತ್ತು ಮನಸ್ಸುಗಳೆರಡೂ ಈ ಬದುಕಿನ ಮುಖ ಸಾಧನಗಳು. ಆದರೆ ಈ ಎರಡೇ ಜನರಿಗೆ ತಿರುಗು ಬಾಣವಾಗಿವೆ. ನೀವು ಇದನ್ನು ಯಾತನೆ, ಸಂಕಷ್ಟ, ಖಾಯಿಲೆ ಅಥವಾ ಯಾವುದೇ ಹೆಸರಿನಿಂದ ಬೇಕಾದರೂ ಕರೆಯಬಹುದು. ಮೂಲ ಕಾರಣವೆಂದರೆ, ಈ ಎರಡೂ ಸಾಧನಗಳೇ ನಿಮಗೆ ವಿರುದ್ಧ್ಯವಾಗಿವೆ.

ಈ ಎರಡನ್ನೂ ನಿಮ್ಮ ವಿರುದ್ಧವಾಗಿರಲು ಬಿಡದೆ, ನಿಮ್ಮ ಜೊತೆಗಿರುವಂತೆ ಮಾಡುವುದೇ ನಮಗಿರುವ ದೊಡ್ಡ ಜವಾಬ್ದಾರಿ. ಒಂದು ವೇಳೆ ಶರೀರ ಮತ್ತು ಮನಸ್ಸುಗಳು ನಮಗೆ ವಿರುದ್ಧವಾದರೆ ಮಾನವ ಶಕ್ತಿಯ ಸಾಮರ್ಥ್ಯದ ಅರಿವೇ ಆಗುವುದಿಲ್ಲ. ನಿಮಗೆ ತಲೆ ನೋವು ಇದೆ ಎಂದುಕೊಳ್ಳಿ, ಅದೇನೂ ಅಂತಹ ದೊಡ್ಡದಲ್ಲ, ಕ್ಯಾನ್ಸರ್ ಕೂಡ ಅಲ್ಲ, ಬರೀ ಒಂದು ಸಣ್ಣ ತಲೆನೋವು ನಿಮ್ಮ ಇಡೀ ಜೀವನವನ್ನೇ ಕಂಗಾಲು ಮಾಡಿಬಿಡುತ್ತದೆ. ಅಥವಾ ನಿಮ್ಮ ಮೂಗು ಕಟ್ಟಿದೆ ಎಂದುಕೊಳ್ಳಿ, ಒಂದು ಸಾಮಾನ್ಯ ನೆಗಡಿ ಮೊದಲು “ಇದೇನು ಮಹಾ ?” ಎಂದುಕೊಳ್ಳುತ್ತೀರಿ. ಅದೇ ಹಲವಾರು ವರ್ಷಗಳು ಮುಂದುವರೆಯುತ್ತದೆ ಎಂದುಕೊಳ್ಳಿ. ಆಗ ನೋಡಿ ನಿಮ್ಮ ಜೀವನವೇ ಕಳೆದು ಹೋದಂತಾಗುತ್ತದೆ. ಇದೆಲ್ಲಾ ಕ್ಯಾನ್ಸರ್ನಿಂದಲೂ ಅಲ್ಲ, ಅಥವಾ ಹೃದಯಾಘಾತದಿಂದಲೂ ಅಲ್ಲ, ಬರೀ ಒಂದು ನೆಗಡಿ ಅಷ್ಟೇ- ಜೀವನವೇ ಕಳೆದುಹೋದಹಾಗೆ ಭಾಸವಾಗುತ್ತದೆ. ಹೀಗೆ ನಿಮ್ಮ ದೇಹ ಹಾಗೂ ಮನಸ್ಸು ನಿಮ್ಮ ವಿರುದ್ಧವಾದರೇ, ನೀವು ಮನುಷ್ಯರಾಗಿ ಇರುವುದರ ಆಳ ಹಾಗೂ ಈ ಜೀವನದ ಆಯಾಮವನ್ನು ಸಂಪೂರ್ಣವಾಗಿ ಅನ್ವೇಷಿಸಲೂ ಸಾಧ್ಯವಿಲ್ಲ. 

ಎಲ್ಲವೂ ನಿಮ್ಮ ಪರವಾಗಿಯೇ ನಡೆಯುವಂತೆ ಮಾಡುವುದು.

ಕೆಲವರಿಗೆ ಈ ಸಮಸ್ಯೆಯಿದೆ - ತಾವು ಇರುವ ರೀತಿಯಿಂದಲೇ ಇಡೀ ಪ್ರಪಂಚವೇ ಅವರ ವಿರುದ್ಧವಾಗಿದೆ ಎಂಬ ಅನಿಸಿಕೆ. ನಿಮಗೆ ಈ ರೀತಿಯ ವಿರೋಧವಿದ್ದರೆ, ಬದುಕುವುದು ಅಸಾಧ್ಯ. ಯೋಗ ಎಂದರೆ, ಎಲ್ಲವನ್ನೂ ಅಂದರೆ, ಶರೀರ, ಮನಸ್ಸು ಮತ್ತು ಅಸ್ತಿತ್ವ - ಎಲ್ಲವೂ ನಮ್ಮ ಜೊತೆಗೆ ಕೆಲಸ ಮಾಡುವುದು; ಇನ್ನೂ ಹೇಳಬೇಕೆಂದರೆ, ನಾವು ಅದರ ಜೊತೆಗೆ ಕೆಲಸ ಮಾಡುತ್ತೇವೆ. ಈಗ, ಏನಾದರೂ ಆದರೆ, ಅದು ಅದ್ಭುತ, ಏನೂ ಆಗದೇ ಹೋದರೆ, ಅದು ಮತ್ತೂ ಸೊಗಸಾದ ವಿಷಯ! ಆದರೆ, ಬಹಳಷ್ಟು ಜನಕ್ಕೆ ಏನಾದರೂ ಆದರೂ ತೊಂದರೆ, ಏನು ಆಗದಿದ್ದರೆ ಇನ್ನೂ ಮಹಾನ್ ತೊಂದರೆ.

 ಯೋಗ ಎಂದರೆ, ನೀವು ಎಲ್ಲದರೊಂದಿಗೂ ಬೆರೆತು ಇರುವುದು. ನಿಮಗಿನ್ನೂ ವೈಯುಕ್ತಿಕವಾದ ಅಸ್ತಿತ್ವ ಇರುತ್ತದೆ, ಆದರೆ, ಎಲ್ಲವನ್ನೂ ಹೀರಿಕೊಳ್ಳುವ ಸಾಮರ್ಥ್ಯವುಳ್ಳ ಚೌಕಟ್ಟಿನೊಂದಿಗೆ. ಇದರಿಂದ ನಾವೇ ಎಲ್ಲವೂ ಆಗಿದ್ದೇವೆ, ಮತ್ತು ನಮಗೆ ಎಲ್ಲವೂ ಸರಿಯಾಗಿರುತ್ತದೆ. ನೀವು ಒಮ್ಮೆ ನಿಮ್ಮ ಸುತ್ತ ಇರುವ ಚೌಕಟ್ಟಿನಿಂದ ಆಚೆ ಬಂದರೆ, ಮತ್ತು ನಿಮ್ಮ ಅಸ್ತಿತ್ವ ಹಾಗು ಅದರ ಮೂಲ, ಎಲ್ಲವೂ ನಿಮ್ಮೊಂದಿಗೆ ಇದ್ದರೆ, ಏನು ಆಗಬೇಕೋ ಅದು ತಾನಾಗಿಯೇ ಆಗುತ್ತದೆ. ಯೋಗ ಎಂದರೆ ಇದೇ - ಎಲ್ಲದರೊಂದಿಗೆ ಬೆಸೆದುಕೊಂಡು ಇರುವುದು. ಬರೀ ನಿಮ್ಮ ಚೌಕಟ್ಟನ್ನು ಸಡಿಲಗೊಳಿಸಿದ್ದರಿಂದ ಇದೆಲ್ಲಾ ಸಾಧ್ಯ. ನೀವು ಹೀಗೆ ಮಾಡುವುದರಿಂದ, ಜೀವನವು ನಿಮ್ಮೊಳಗೆ ಹರಿಯುತ್ತದೆ, ಮತ್ತು ನಿಮ್ಮ ಶರೀರ ಮತ್ತು ಮನಸ್ಸಿನಲ್ಲಿ ನೀವೇ ಖೈದಿಯಾಗುವುದಿಲ್ಲ.

ಬಹಳಷ್ಟು ಜನರು ತಮ್ಮ ಶರೀರ ಮತ್ತು ಮನಸ್ಸುಗಳ ಖೈದಿಗಳಾಗಿರುತ್ತಾರೆ. ನಿಮ್ಮ ಜೀವನದ ಭದ್ರವಾದ ವೇದಿಕೆಯಾಗಬೇಕಾದ ನಿಮ್ಮ ಶರೀರ ಮತ್ತು ಮನಸ್ಸುಳೇ ಜೈಲು ಖಾನೆಯ ಗೋಡೆಗಳಾಗಿಬಿಡುತ್ತವೆ. ಜೀವನದ ಮೌಲ್ಯಗಳೊಂದಿಗೆ ಸಾರ್ಥಕ ಬದುಕಾಗಲು ನೀವು ಇದನ್ನು ಯಾವಾಗಲೂ ಎತ್ತಿ ಹಿಡಿಯಬೇಕು. ನೀವಷ್ಟೇ ಅಲ್ಲ, ಇನ್ನೂ ಬಹಳಷ್ಟು ಜನರು ಇದಕ್ಕೆ ಸಹಕರಿಸಬೇಕು. ಯೋಗಿಗಳು ಒಬ್ಬರೇ ಇರುತ್ತಿದ್ದರು. ಹಾಗೆಂದು ಅವರು ಬೇರೆಯವರಿಗೆ ಬೆಲೆ ಕೊಡುತ್ತಿರಲಿಲ್ಲ ಎಂದಲ್ಲ, ಆದರೆ, ಅವರು ಹಾಗೆ ಏಕಾಂಗಿಯಾಗೇ ಹಾಯಾಗಿರುತ್ತಿದ್ದರು. ಆಗಲೇ ಸಮಾಜವು ತಕ್ಕಂತೆ ಸ್ಪಂದಿಸಿದ್ದರೆ, ಆಸಕ್ತಿ ತೋರಿಸಿದ್ದರೆ, ಬಹುಶಃ ಅವರು ಎಲ್ಲರೊಡನೆ ಇರುತ್ತಿದ್ದರೇನೋ. 

ಬಟ್ಟಬಯಲಾಗಿ ಬದುಕುವ ಪೀಳಿಗೆ

 ಇಂದು ನಾವು ಇತಿಹಾಸದ ಯಾವ ಕಾಲದಲ್ಲಿದ್ದೀವೆಂದರೆ, ನಾವು ಬಟ್ಟಾ ಬಯಲಿನ ಪೀಳಿಗೆಯವರಾಗಿದ್ದೇವೆ. ಉದಾಹರಣೆಗೆ, ನಮ್ಮತಂದೆಯ ತಲೆಮಾರಿನಲ್ಲಿ, ಅವರ ವೈಯಕ್ತಿಕ ಬದುಕಿನಲ್ಲಿ ಏನೇ ನಡೆದರೂ ಅದರ ಬಗ್ಗೆ ಯಾರೊಡನೆಯೂ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ; ತಮ್ಮಲ್ಲೇ ಸ್ವತಃ ನಿಭಾಯಿಸಿಕೊಳ್ಳುತ್ತಿದ್ದರು ಹಾಗೂ ಮುಂದುವರೆಯುತ್ತಿದ್ದರು. ನಂತರ ನನ್ನ ಪೀಳಿಗೆ ಬಂದಿತು. ನಾನು ವಿಶ್ವವಿದ್ಯಾಲಯದಲ್ಲಿದ್ದಾಗ ಸುಮ್ಮನೆ ತೋಟದಲ್ಲಿ ಕುಳಿತುಕೊಳ್ಳುತ್ತಿದ್ದೆ. ಪ್ರತಿದಿನ, ಯಾರೋ ಒಬ್ಬರು ಬಂದು ತಮ್ಮ ಇಡೀ ಜೀವನದ ಕಥೆಯನ್ನು ಪೂರಾ ಹೇಳಿಕೊಳ್ಳುತ್ತಿದ್ದರು. ಅಂತಹ ಆಸಕ್ತಿಯ ಜೀವನವಂತೂ ಅಲ್ಲಾ, ಆದರೂ ಹೇಳಿಕೊಳ್ಳಬೇಕು. ಎಲ್ಲಾ ಕೆಲಸಕ್ಕೆ ಬಾರದ ವಿಷಯಗಳೇ- ಅವರು ಹೇಗೆ ಅವರ ಹೆತ್ತವರು, ಅವರ ಓದು, ಅವರ ಬಡತನ, ಅವರ ಗೆಳತಿ ಅಥವಾ ಗೆಳೆಯ ಇವೆಲ್ಲದರಿಂದ ಸಂಕಟ ಪಡುತ್ತಿದ್ದಾರೆ ಎಂದು - ಹೀಗೆ ಕೊನೆಯೇ ಇಲ್ಲದ ವಿಷಯಗಳು. ಆ ಸಮಯದಲ್ಲಿ, ನಾನು ಸುಮ್ಮನೆ ಇವನ್ನೆಲ್ಲಾ ಕೇಳುತ್ತಿದ್ದೆ - ಪ್ರತಿಯೊಬ್ಬರಿಗೂ ಏನೋ ಒಂದು ತೊಂದರೆ. ಇದು ಹೇಗಾಯಿತೆಂದರೆ ನಾನೊಬ್ಬನೇ ವಿಲಕ್ಷಣ ವ್ಯಕ್ತಿ ಏಕೆಂದರೆ ನನಗೆ ಯಾವುದೇ ತೊಂದರೆ ಇಲ್ಲ ಅನ್ನುವಂತಾಯಿತು.. 

 ನಮ್ಮ ತಂದೆಯ ಪೀಳಿಗೆಯವರು ದಿನಚರಿ ಬರೆದಿಡುತ್ತಿದ್ದರು. ನನ್ನ ಪೀಳಿಗೆಯಲ್ಲೂ ಬಹಳಷ್ಟು ಜನರು ದಿನಚರಿ ಬರೆಯುತ್ತಿದ್ದರು. ಜೀವನದ ನಾನಾ ಅಂಶಗಳ ಬಗ್ಗೆ, ಮತ್ತು ಅವರಿಗೆ ಯಾರೂ ಅದನ್ನು ನೋಡುವುದು ಇಷ್ಟ ಇರಲಿಲ್ಲ. ಯಾರಾದರೂ ಬರೀ ಮುಖ ಪುಟ ತಿರುವಿದರೂ ಬಹಳ ಕಸಿವಿಸಿ ಪಡುತ್ತಿದ್ದರು. “ನನಗೆ ಗೊತ್ತಿಲ್ಲದೇ ನನ್ನ ದಿನಚರಿ ನೋಡಿದರು “ - ಅದೊಂದು ಮಹಾಪರಾಧ ಎಂದು. ಆದರೆ ಇಂದಿನ ಪೀಳಿಗೆಯವರು ತಮ್ಮ ಜೀವನದ ಪ್ರತಿಯೊಂದು ಅಂಶವನ್ನೂ ಫೇಸ್ಬುಕ್ನಲ್ಲಿ ಹಾಕಿಕೊಳ್ಳುತ್ತಾರೆ, ಮತ್ತು ಯಾರೂ ಅದನ್ನು ನೋಡದಿದ್ದರೆ, ಬಹಳ ಸಂಕಟ ಪಡುತ್ತಾರೆ. ಏನೆಲ್ಲಾ ಹಾಕುತ್ತಾರೆ ಅಂದರೆ, “ ನಾನು ತಿಂಡಿ ತಿನ್ನುತ್ತಿದ್ದೇನೆ” - ಭಾವಚಿತ್ರ! “ನಾನು ಐಸ್ ಕ್ರೀಮ್ ನೆಕ್ಕುತ್ತಿದ್ದೇನೆ - ಭಾವಚಿತ್ರ! ಯಾವುದೇ ವಿಷಯವಿರಲಿ, ಏನೇ ಇರಲಿ........

ಒಂದು ರೀತಿ ಹೇಳಬೇಕೆಂದರೆ, ಇದನ್ನು ಬಟ್ಟಾ ಬಯಲು ಪೀಳಿಗೆ ಎಂದೇ ಹೇಳಬೇಕು. ಹೇಗೆ ಒಂದು ಪೀಳಿಗೆಯೇ ಬಟ್ಟಾ ಬಯಲಾಗಿದ್ದರೆ, ಮಾರ್ಪಾಡಿಗೆ ಇದು ಒಳ್ಳೆಯ ಸಮಯ. ಆದರೆ ಬಹಳಷ್ಟು ವಿಷಯಗಳನ್ನು ನಾನು ಈಗಲೇ ಸ್ಪಷ್ಟ ಪಡಿಸಲು ಸಾಧ್ಯವಿಲ್ಲ. ನಿಜವಾಗಿಯೂ ಈ ಗ್ರಹದಲ್ಲಿರುವ ಎಲ್ಲಾ ಮನುಷ್ಯರನ್ನೂ ನಾವು ಮಾರ್ಪಡಿಸಬೇಕೆಂದರೆ, ಅಬ್ಬಬ್ಬಾ ಎಂದರೆ ಇನ್ನು ಹದಿನೈದರಿಂದ ಗರಿಷ್ಟ ಎಂದರೆ ಮೂವತ್ತು ವರ್ಷಗಳು ನಮಗೆ ಅವರು ಸಿಗಬಹುದು ಅಷ್ಟೇ. ಅನಂತರ ನಾವು ಅವರನ್ನು ಮುಟ್ಟುವುದೂ ಕಷ್ಟ. ಏನೆಂದರೆ, ಇಷ್ಟ ಪಡುವ ಜನರೂ ಇರುತ್ತಾರೆ, ಇಷ್ಟ ಪಡದವರೂ ಇರುತ್ತಾರೆ. ಆದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಈ ಹದಿನೈದರಿಂದ ಮೂವತ್ತು ವರ್ಷಗಳನ್ನು ಸ್ವಇಚ್ಛೆಯಿಂದ ಇಷ್ಟ ಪಡುತ್ತಾರೆ. ಆದರೆ ಅದರ ನಂತರ ನಾನಾ ಕಾರಣಗಳಿಂದ ಇದು ಬಹಳ ಕಠಿಣ. 

ಒಂದು ಸಂಭಾವ್ಯತೆ ಸೀಮಿತ ಅವಧಿಗೆ ಮಾತ್ರ

ಅಂದರೆ, ನಾವು ಇಲ್ಲಿ ಸರಿಯಾದ ಸಮಯದಲ್ಲಿ ಇದ್ದೇವೆ. ನಾವು ಸರಿಯಾದ ಕೆಲಸಗಳನ್ನು ಮಾಡಿದರೆ ಬಹಳಸಷ್ಟು ಜನರನ್ನು ತಲುಪಬಹುದು. ಆದರೆ ಸಮಯ ಕಳೆದರೆ, ಈ ಪೀಳಿಗೆಯವರನ್ನು ಬಿಟ್ಟರೆ, ಮತ್ತು ಅವರು ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಂದ ದೂರವಾದರೆ, ಅವರನ್ನು ತಲುಪಲು ಬಹಳ ಕಷ್ಟವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಯೋಗದ ಬಗ್ಗೆ ಇನ್ನು ಇಪ್ಪತ್ತೈದರಿಂದ ಮೂವತ್ತು ವರ್ಷಗಳು ಬಲವಾಗಿ ಪ್ರಪಂಚಾದ್ಯಂತ ಅರಿವು ಮೂಡಿಸದಿದ್ದರೆ ತೊಂಬತ್ತು ಪ್ರತಿಶತ ಜನರು ಯಾವುದಾದರು ರಾಸಾಯನಿಕದ ಮೇಲೆ ಬದುಕುತ್ತಾರೆ. ಒಮ್ಮೆ ಅವರು ರಾಸಾಯನಿಕದ ಪ್ರಭಾವಕ್ಕೊಳಗಾದರೆ, ನಾವು ಅವರನ್ನು ಮಾತನಾಡಿಸಲು ಸಾಧ್ಯವಿಲ್ಲ. ಇಡೀ ಪ್ರಪಂಚವೇ ಅತ್ತ ದಾಪುಗಾಲು ಹಾಕುತ್ತಿದೆ. 

 ಇದು ಸರಿಯಾದ ಸಮಯ, ಮತ್ತು ಈ ಗ್ರಹದಲ್ಲಿ ಈಗ ಇದು ನಮ್ಮ ಸಮಯ. ಧೃಡ ಸಂಕಲ್ಪದಿಂದ ಬದ್ಧರಾಗಿ ನಿಂತರೆ, ನಾವು ಮಾನವ ಇತಿಹಾಸದಲ್ಲೇ ಸಮಯವನ್ನಾಗಿ ಮಾಡಬಹುದು, ಏಕೆಂದರೆ ನಾವು ಹಿಂದೆಂದಿಗಿಂತಲೂ ಶಕ್ತಿವಂತರಾಗಿದ್ದೇವೆ. ನಮ್ಮ ಅಸ್ತಿತ್ವವು ಈಗ ಹಿಂದೆಂದಿಗಿಂತಲೂ ಸುರಕ್ಷಿತವಾಗಿದೆ- ದುರದೃಷ್ಟವಶಾತ್ ಬೇರೆ ಜೀವಿಗಳಿಗಲ್ಲದಿದ್ದರೂ ಮನುಷ್ಯರಿಗಂತೂ ಹೌದು. ಹಿಂದೆಂದೂ ಇರದಷ್ಟು ಆರೈಕೆ ಹಾಗು ಸವಲತ್ತುಗಳು ಇಂದು ಮನುಷ್ಯನಿಗೆ ಇದೆ. ನಾವು ಈಗ ತಕ್ಷಣ ಸರಿಯಾದ ಕೆಲಸಗಳನ್ನು ಮಾಡದಿದ್ದರೆ, ನಂತರ ಬಹಳ ತಡವಾಗಿ ಬಿಡಬಹುದು. ಏಕೆಂದರೆ, ಸಂದರ್ಭಗಳು ನಂತರ ಆತಂಕಕಾರಿಯಾಗಿ ಬದಲಾಗಿ ಹೋಗಬಹುದು. ಲೆಕ್ಕಾಚಾರದ ಪ್ರಕಾರ, ಕೃತಕ ಬುದ್ಧಿಮತ್ತೆಯ ಹೆಚ್ಚಳದಿಂದ, ಇನ್ನು ಎಪ್ಪತ್ತು ವರ್ಷಗಳಲ್ಲಿ ಹತ್ತಿರ ನಲವತ್ತರಿಂದ ಐವತ್ತು ಪ್ರತಿಶತ ಜನರು ಆತ್ಮಹತ್ಯೆಗೆ ಶರಣಾಗಿ ಬಿಡುತ್ತಾರೆ. ಮಾಡಲು ಏನೂ ಕೆಲಸ ಇರದಿದ್ದಾಗ, ಬದುಕು ಅರ್ಥವಿಲ್ಲ ಎನಿಸೆಬಿಡುತ್ತದೆ. 

ಯೋಗ : ಪರಿವರ್ತಕವಾದ ವೇಗವರ್ಧಕ

 ಹಾಗಾಗಿ, ನಾವು ಯೋಗವನ್ನು ಕಲಿಸುವುದು ಒಂದು ಪ್ರಪಂಚದಲ್ಲಿ ಮಾಡು ನಾನಾ ಕೆಲಸಗಳಲ್ಲಿ ಇದೂ ಒಂದು ಅಲ್ಲ, ಅದೊಂದು ಮಹತ್ವದ ಕಾರ್ಯ. ಎಲ್ಲರಿಗೂ ಈ ಕ್ಷಣಕ್ಕೆ ಇದು ಅರ್ಥವಾಗದೇ ಹೋಗಬಹುದು. ಆದರೆ ನಾವೆಲ್ಲಾ ಈ ಒಳ್ಳೆಯ ಕೆಲಸವನ್ನು, ಗಮನಾರ್ಹವಾದ ತೀವ್ರತೆಯಿಂದ ಮಾಡುತ್ತಾ ಹೋದರೆ, ಇನ್ನು ಐದರಿಂದ ಏಳು ವರ್ಷಗಳ ಸಮಯದಲ್ಲಿ ವಿಶ್ವಾದ್ಯಂತ ಯೋಗ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆ ಎಂದು ತಿಳಿಯುತ್ತದೆ. ಈಗಾಗಲೇ ಐದು ವರ್ಷಗಳ ಹಿಂದಕ್ಕೆ ಹೋಲಿಸಿದರೆ, ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ವಿಷಯ ಎಂದರೆ, ಯಾವುದೇ ವಿಷಯಕ್ಕೆ ಬೇಡಿಕೆ ಹೆಚ್ಚಾದರೆ, ತಕ್ಷಣ ನಾನಾ ರೀತಿಯ ನಕಲಿ ವಿಷಯಗಳು ಎತ್ತುತ್ತವೆ, ಏಕೆಂದರೆ ಈಗ ಅದಕ್ಕೆ ಮಾರುಕಟ್ಟೆ ಇದೆ. ಒಳ್ಳೆಯ ಪದಾರ್ಥ ಸಿಗುತ್ತಿಲ್ಲವೆಂದರೆ, ಜನರು ನಾನಾ ರೀತಿಯ ವಸ್ತುಗಳನ್ನು ತಾವೇ ಸೃಷ್ಟಿಸಿ ಬಿಡುತ್ತಾರೆ. 

 ಶಾಸ್ತ್ರೀಯ ಯೋಗ ಪದ್ಧತಿಯು ಬಹಳ ವಿಶಿಷ್ಟವಾಗಿದೆ. ಇದು ಈಗಿನ ಜುಂಬಾ ಮತ್ತು ಇತರ ಪದ್ಧತಿಗಳಷ್ಟು ಮನರಂಜನೆ ನೀಡದೆ ಹೋಗಬಹುದು. ಆದರೆ ಜನರು ತಮ್ಮನ್ನು ಯೋಗ ಪದ್ಧತಿಗೆ ಅಳವಡಿಸಿಕೊಂಡರೆ. ಆಗಲೇ ಅವರಿಗೆ ಅದು ಊಹೆಗೂ ಮೀರಿದ ಪ್ರಯೋಜನಗಳನ್ನು ಕೊಡುತ್ತದೆ ಎಂಬ ಅರಿವಾಗವುದು. ಇದೊಂದು ಅಸಾಧಾರಣ ಪ್ರಕ್ರಿಯೆ- ನೀವೇನಾಗಿದ್ದೀರೋ, ನಿಮ್ಮ ಸಂಯೋಜನೆಯನ್ನೇ ಬದಲಿಸಬಲ್ಲದು. ನಾನು ಹನ್ನೆರಡನೇ ವಯಸ್ಸಿನಲ್ಲಿ ಯೋಗದ ಸರಳ ಅಂಶಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದಾಗ, ಭೌತಿಕವಾಗಿ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾದವು. ಇದೆಲ್ಲಾ ನಮ್ಮ ಅಭ್ಯಾಸದ ತೀವ್ರತೆಯ ಮೇಲೆ ಅವಲಂಬಿಸಿರುತ್ತದೆ. 

ನಾವು ನೀಡುವ ಯೋಗ: ಯಾರು ಮತ್ತು ಹೇಗೆ

 ಯೋಗ ವಿಜ್ಞಾನ ಯಾವಾಗಲೂ ಇದೆ, ಆದರೆ ಇದನ್ನು ಯಾರು ಹೇಗೆ ನೀಡುತ್ತಾರೆ, ಅದು ವ್ಯತ್ಯಾಸವನ್ನು ತರುತ್ತದೆ. ಯೋಗವನ್ನು ತರಬೇತಿಯಂತೆ ನೀಡುವುದಲ್ಲದೆ, ಬೇರೆ ರೀತಿಗಳೂ ಇವೆ. ಒಂದು ಅರ್ಥದಲ್ಲಿ ಹೇಳಬೇಕೆಂದರೆ, ನೀವೇನಾದರೂ ಧ್ಯಾನಲಿಂಗವನ್ನು ಭೇಟಿಮಾಡಿದ್ದರೆ, ಗಮನಿಸಿರಬಹುದು - ಅಲ್ಲಿ ಒಬ್ಬ ಯೋಗಿಯು ಕುಳಿತಿರುತ್ತಾನೆ; ಅವನಿಗೆ ಯೋಗದ ಬಗ್ಗೆ ಏನೆಲ್ಲಾ ಅರಿವಿರಬೇಕೋ ಎಲ್ಲಾ ಇರುತ್ತದೆ. ಅವನು ಮಾತನಾಡದಿರಬಹುದು ಹಾಗೆಂದು ಪ್ರಭಾವಶಾಲಿಯಲ್ಲ ಎಂದು ಕೊಳ್ಳಬಾರದು. 

ನನಗೆ ಏನು ಮಾಡಬೇಕೋ ಅದಕ್ಕೆ ಬೇಕಾದಷ್ಟು ಶಕ್ತಿ ನನ್ನಲ್ಲಿದೆ, ಆದರೆ ಒಂದೊಂದು ಸಲ ನನ್ನ ಶರೀರ ನನಗೆ ಕೈ ಕೊಡುತ್ತದೆ. ನೀವು ನಿಮ್ಮ ಶಕ್ತಿಯನ್ನು ಮೀರಿ, ಏನಾದರೂ ಮಾಡಲು ಮನಸ್ಸು ಮಾಡಿದಾಗ, ಅದೂ ನಿಮ್ಮಂತಹ ಜನಾಂಗದವರು ಪ್ರಯತ್ನಿಸಿದಾಗ, ಈ ರೀತಿಯ ಸಾಧ್ಯತೆಯಿರುತ್ತದೆ. ನಿಮ್ಮಲ್ಲಿ ಯಾರಾದರೂ ಈ ದಿಕ್ಕಿನತ್ತ ಹೋಗುವ ಇಚ್ಛೆಯಿದ್ದರೆ, ದಯವಿಟ್ಟು ನಿಮ್ಮ ಅನಿಸಲಿಕೆಯನ್ನು ವ್ಯಕ್ತಪಡಿಸಿ, ನಾವು ಅದರ ಬಗ್ಗೆ ಏನು ಮಾಡಬಹುದು ಎಂದು ಪರಿಶೀಲಿಸುತ್ತೇವೆ. 

ಸಂಪಾದಕರ ಸೂಚನೆ : ಸದ್ಗುರುಗಳೊಂದಿಗೆ ಸಂಪರ್ಕ ಸಾಧಿಸಿ!!! ‘ಸದ್ಗುರು ಅಪ್(Sadhguru App) “ ಡೌನ್ ಲೋಡ್ ಮಾಡಿ ಮತ್ತು ಉಚಿತ ಧ್ಯಾನ, ಸದ್ಗುರು ಅವರ ಲೇಖನಗಳು, ದೃಶ್ಯಾವಳಿಗಳು, ದೈನಿಕ ಉಲ್ಲೇಖಗಳು, ಕಾರ್ಯಕ್ರಮ ವಿವರಣೆ ಮತ್ತೂ ಹಲವು ವಿಷಯಗಳನ್ನು ಉಚಿತವಾಗಿ ಪಡೆಯಿರಿ. ಆಂಡ್ರಾಯಿಡ್ ಮತ್ತು iOS ನಲ್ಲೂ ಲಭ್ಯ.