Main Centers
International Centers
India
USA
Wisdom
FILTERS:
SORT BY:
ಧ್ಯಾನ ಎಂದರೆ ಅನಿರ್ಬಂಧತೆಯ ಸ್ಥಿತಿಯನ್ನು ತಲುಪುವುದು. ಧ್ಯಾನದ ಉದ್ದೇಶ ದೇಹ-ಮನಸ್ಸುಗಳನ್ನು ನಿಯಂತ್ರಿಸುವುದಲ್ಲ, ಬದಲಿಗೆ ಮುಕ್ತಗೊಳಿಸುವುದು.
ಶಾಂತಿಯು ಜೀವನದ ಪರಮ ಗುರಿಯಲ್ಲ. ಅದು ಅತ್ಯಂತ ಮೂಲಭೂತ ಅಗತ್ಯ.
ನೀವು ಒಲ್ಲದ ಮನಸ್ಸಿನಿಂದ ಮನಃಪೂರ್ವಕತೆಯೆಡೆಗೆ, ಜಡತೆಯಿಂದ ಲವಲವಿಕೆಯೆಡೆಗೆ ಮಾರ್ಪಟ್ಟರೆ, ನಿಮ್ಮ ಜೀವನವು ಸಂತೋಷಭರಿತವೂ ಅನಾಯಾಸವೂ ಆಗಿರುತ್ತದೆ.
ಧ್ಯಾನಲಿಂಗದ ಸನ್ನಿಧಿಯಲ್ಲಿ ಕೆಲನಿಮಿಷಗಳ ಕಾಲ ಮೌನವಾಗಿ ಕುಳಿತುಕೊಂಡರೆ ಸಾಕು, ಧ್ಯಾನವೆಂದರೇನೆಂದೇ ತಿಳಿಯದವರೂ ಕೂಡ ಆಳವಾದ ಧ್ಯಾನದ ಅನುಭೂತಿಯನ್ನು ಹೊಂದುತ್ತಾರೆ.
ಹಣವು ಕೇವಲ ಬಾಹ್ಯ ಪರಿಸರವನ್ನು ಸವಿಯಾಗಿಸಬಲ್ಲದು. ಅಂತರಂಗದ ಸವಿಯನ್ನು ಅದು ಹುಟ್ಟುಹಾಕಲಾರದು.
ಮಹಾನ್ ವ್ಯಕ್ತಿಯಾಗಬೇಕೆಂದು ಹಂಬಲಿಸುವ ಅಗತ್ಯವಿಲ್ಲ. ನೀವು ‘ನನಗೇನು ಸಿಗುತ್ತದೆ’ ಎಂಬ ಚಿಂತೆಯನ್ನು ಮೀರಿ ಹೋದರೆ, ನೀವು ಹೇಗಿದ್ದರೂ ಮಹಾನ್ ಚೇತನವಾಗುತ್ತೀರಿ.
ನೀವು ನಶ್ವರರು ಎಂಬ ಅರಿವು ನಿಮ್ಮಲ್ಲಿದ್ದರೆ, ನಿಮಗೆ ಮತ್ತು ನಿಮ್ಮ ಸುತ್ತಲಿನ ಎಲ್ಲರಿಗೂ ಯಾವುದು ಅತ್ಯಂತ ಅಗತ್ಯವೋ ಅದನ್ನು ಬಿಟ್ಟು ಬೇರೇನನ್ನೂ ನೀವು ಮಾಡುವುದಿಲ್ಲ.
ದೈವಿಕತೆಯು ಈ ಶರೀರದಲ್ಲಿ ಬೇರುಬಿಟ್ಟಿದೆ. ನೀವು ಬೇರನ್ನು ಸಲಹಿದರೆ, ಹೂವು ಅರಳುವುದನ್ನು ತಪ್ಪಿಸುವುದು ಹೇಗೆ ಸಾಧ್ಯ.
ಮನುಷ್ಯರ ಅತ್ಯಂತ ದೊಡ್ಡ ಸಮಸ್ಯೆಯೇನೆಂದರೆ, ಅವರಿಗೆ ತಮ್ಮ ಯೋಚನೆ ಮತ್ತು ಭಾವನೆಗಳನ್ನು ನಿಭಾಯಿಸುವುದು ಹೇಗೆಂದು ಗೊತ್ತಿಲ್ಲ.
ನಿಮಗೆ ತೊಳಲಾಡುತ್ತಾ ಇರಬೇಕೆಂದರೆ, ಅದಕ್ಕೆ ಅನಂತ ಅವಕಾಶಗಳಿವೆ, ಏಕೆಂದರೆ ನಿಮಗೆ ಇಷ್ಟವಿಲ್ಲದ್ದನ್ನು ಯಾರಾದರೂ ಯಾವಾಗಲೂ ಮಾಡುತ್ತಲೇ ಇರುತ್ತಾರೆ.
ಯೋಗ ಪದದ ಅರ್ಥ ಐಕ್ಯತೆ. ಎಂದರೆ, ನೀವು ನಿಮ್ಮ ಪ್ರತ್ಯೇಕ ವ್ಯಕ್ತಿತ್ವದ ಗಡಿಗಳನ್ನು ಪ್ರಜ್ಞಾಪೂರ್ವಕವಾಗಿ ಅಳಿಸಿಹಾಕಿ, ವಿಶ್ವದೊಂದಿಗೇ ಅನುರಣಿಸುತ್ತೀರಿ.