Main Centers
International Centers
India
USA
Wisdom
FILTERS:
SORT BY:
ನೀವು ಎಲ್ಲರನ್ನೂ ಮತ್ತು ಎಲ್ಲವನ್ನೂ ಪ್ರೀತಿಯಿಂದ ನೋಡಬಲ್ಲಿರಾದರೆ, ನಿಮ್ಮನ್ನು ಪರಮಸತ್ಯದೆಡೆಗೆ ಕೊಂಡೊಯ್ಯುವುದು ಸುಲಭ.
ಮಣ್ಣು ಒಂದು ಸಾಮಾಗ್ರಿಯೂ ಅಲ್ಲ, ಮಿತಿಯಿಲ್ಲದ ಸಂಪನ್ಮೂಲವೂ ಅಲ್ಲ. ನಾವದನ್ನು ನಾಶಪಡಿಸಿದರೆ, ಭೂಮಿಯಲ್ಲಿ ಜೀವಜಗತ್ತು ಕೊನೆಗೊಳ್ಳುವುದು. ಮಣ್ಣನ್ನು ಉಳಿಸೋಣ.
ನಿಮ್ಮ ದೇಹ-ಮನಸ್ಸುಗಳ ಈ ಸಂಕೀರ್ಣ ವ್ಯವಸ್ಥೆಯನ್ನು ಇಂಜಿನಿಯರಿಂಗ್ ಮಾಡಿ ಅದು ನಿಮ್ಮ ಪರವಾಗಿ ಕೆಲಸ ಮಾಡುವಂತೆ ಮಾಡಬೇಕು, ನಿಮ್ಮ ವಿರುದ್ಧವಾಗಲ್ಲ. ಅದುವೇ ಇನ್ನರ್ ಇಂಜಿನಿಯರಿಂಗ್.
ಯೋಗ ಎಂದರೆ ಐಕ್ಯತೆ. ನೀವದನ್ನು ಶಿಸ್ತಿನ ಮೂಲಕ ಕಂಡುಕೊಳ್ಳುತ್ತೀರೋ ಅಥವಾ ಭಕ್ತಿಯ ಮೂಲಕವೋ ಎಂಬುದು ನಿಮಗೆ ಬಿಟ್ಟಿದ್ದು.
ಕಿರಿಕಿರಿ, ಸಿಟ್ಟು, ದ್ವೇಷ, ಮತ್ತು ರೋಷ – ಇವು ಒಂದು ಇನ್ನೊಂದರ ಮುಂದುವರಿದ ರೂಪಗಳಷ್ಟೆ. ನಿಮ್ಮಲ್ಲಿ ಅತಿ ಸಣ್ಣ ಮಟ್ಟಿನ ಕಿರಿಕಿರಿ ಉಂಟಾದರೂ ಸರಿಯೇ, ನೀವು ಗಮನ ಹರಿಸಬೇಕಾಗಿರುವುದು ಅದರ ಮೇಲೆ.
ನನ್ನಲ್ಲಿ ಸಂತೋಷ, ಅಸಂತೋಷ, ಸಿಟ್ಟು, ಅಥವಾ ತೊಳಲಾಟವನ್ನು ಉಂಟುಮಾಡುವ ಅಧಿಕಾರವನ್ನು ನಾನು ಯಾರಿಗೂ ನೀಡಿಲ್ಲ. ಈ ಒಂದು ವಿಷಯವನ್ನು ನೀವು ಮಾಡಬೇಕು: ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದು ನಿಮ್ಮಿಂದಲೇ ನಿರ್ಧರಿತವಾಗಬೇಕು.
ಅಂತರಂಗದ ವಿಷಯಕ್ಕೆ ಬಂದಾಗ, ನಿಮ್ಮ ಪ್ರಜ್ಞೆಯು ಯಾವುದರ ಮೇಲಾದರೂ ಕೇಂದ್ರಿತವಾದರೆ, ಅಸ್ತಿತ್ವದಲ್ಲಿರುವ ಯಾವ ಶಕ್ತಿಯೂ ನೀವು ಅದನ್ನು ತಲುಪುವುದನ್ನು ತಡೆಯಲಾರದು.
ಪ್ರತಿದಿನ ಅಲ್ಲದಿದ್ದರೂ ತಿಂಗಳಿಗೆ ಒಮ್ಮೆಯಾದರೂ ಪರಿಶೀಲಿಸಿಕೊಳ್ಳಿ – ನಿಮ್ಮಲ್ಲಿ ರೂಪಾಂತರಣೆ ಆಗುತ್ತಿದೆಯೇ, ನೀವು ಉತ್ತಮ ಮನುಷ್ಯರಾಗುತ್ತಿದ್ದೀರಾ ಎಂದು.
ನೀವು ನಿಮ್ಮ ಮನಸ್ಸು, ದೇಹ, ಮತ್ತು ಭಾವನೆಗಳನ್ನು ಮುಕ್ತಗೊಳಿಸಿದರೆ, ನಿಮ್ಮ ಬದುಕು ಚೆನ್ನಾಗಿರುವುದು. ನೀವು ನಿಮ್ಮ ಜೀವಶಕ್ತಿಯನ್ನೇ ಮುಕ್ತಗೊಳಿಸಿದರೆ, ಬದುಕು ಒಂದು ಚಮತ್ಕಾರದಂತಾಗುವುದು.
ಕೇವಲ ನಿಮ್ಮ ವಿಫಲತೆಗಳಿಂದ ಕಲಿತರೆ ಸಾಲದು; ವಿಫಲರಾಗದೇ ಇರುವುದನ್ನು ಕಲಿಯಿರಿ. ನೀವು ಏನನ್ನೇ ಹಂಬಲಿಸುತ್ತಿದ್ದರೂ, ಅದನ್ನು ಸಾಕಾರಗೊಳಿಸುವುದು ಹೇಗೆಂದು ಅರಿತುಕೊಳ್ಳಿ. ಜೀವನವು ನಿಮ್ಮದೇ ಕರ್ಮ – ಅದನ್ನು ಮಾಡಿಕೊಳ್ಳುವುದು ನೀವೇ.
ಚಟುವಟಿಕೆ ಮತ್ತು ಅಭಿವ್ಯಕ್ತಿಯಲ್ಲಿ ಪ್ರತಿ ಮನುಷ್ಯನೂ ಭಿನ್ನವಾಗಿರಬಹುದು. ಆದರೆ ಮೂಲ ಜೀವಚೈತನ್ಯದ ನಿಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದೇ.
ಸದಾ ಯುವಕರಾಗಿರುವುದು ಎಂದರೆ ನೀವೆಂದಿಗೂ ‘ಜೀವನವೆಂದರೆ ಇಷ್ಟೆ’ ಎಂದು ನಿಮಗೆ ನೀವೇ ತೆರೆ ಎಳೆದುಕೊಳ್ಳುವುದಿಲ್ಲ – ನೀವೊಂದು ಮುಕ್ತ ಜೀವವಾಗಿರುತ್ತೀರಿ. ಸದಾ ಬೆಳೆಯಲು, ಕಲಿಯಲು, ಮತ್ತು ಜೀವನಕ್ಕೆ ಮುಕ್ತರಾಗಿರಲು ಸಿದ್ಧರಿರುತ್ತೀರಿ.