About
Wisdom
FILTERS:
SORT BY:
ಸಮಯದ ಅನುಭವವು ನಮ್ಮನ್ನು ಅವಲಂಬಿಸಿದೆ. ಏಕಾಗ್ರರೂ, ಸಂತೋಷಭರಿತರೂ ಆಗಿರುವವರಿಗೆ ಈ ಬದುಕು ಬಹಳ ಚುಟುಕಾದುದು.
ಯೋಗದಿಂದ ಬರೀ ನಿಮ್ಮ ದೇಹವಷ್ಟೆ ನಮ್ಯವಾಗುವುದಲ್ಲ – ನಿಮ್ಮ ಮನಸ್ಸು ಮತ್ತು ಭಾವನೆಗಳು, ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಪ್ರಜ್ಞೆಯಲ್ಲೂ ನಮ್ಯತೆ ಬರಬೇಕು.
ವರ್ತಮಾನವನ್ನು ನೀವು ಹೇಗೆ ಅನುಭವಿಸುತ್ತೀರಿ ಎಂಬುದನ್ನು ನಿಮ್ಮ ಗತಕಾಲವು ನಿರ್ಧರಿಸಲು ನೀವು ಅನುಮತಿಸಿದಿರಿ ಎಂದಾದರೆ, ನಿಮ್ಮ ಭವಿಷ್ಯವನ್ನು ನೀವು ಹಾಳುಗೆಡವಿದಿರಿ.
ನೀವು ನಿಮ್ಮೊಳಗೆ ವಿಕಾಸವನ್ನು ಹೊಂದಿದರೆ, ಅಭಿಮಾನವೂ ಇರುವುದಿಲ್ಲ, ಪೂರ್ವಗ್ರಹವೂ ಇರುವುದಿಲ್ಲ. ಆಗ ನೀವು ಶುದ್ಧ, ನಿಚ್ಚಳ ವಿವೇಕದಿಂದ ಕಾರ್ಯಗೈಯುವಿರಿ.
ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಶೌರ್ಯ, ಮತ್ತು ಬದ್ಧತೆಗಳಿಂದಾಗಿ ಇಂದು ನಾವು ರಾಷ್ಟ್ರದ 75 ವರ್ಷಗಳ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತಿದ್ದೇವೆ. ಸ್ವಾತಂತ್ರ್ಯವು ದಯಪಾಲಿಸಲಾಗುವಂತದ್ದಲ್ಲ – ಅದು ನಾವು ಗಳಿಸುವ ಅಥವಾ ಕಳೆದುಕೊಳ್ಳುವಂತದ್ದು. ಸ್ವತಂತ್ರ ಪ್ರಪಂಚವಾಗುವತ್ತ ದಿಟ್ಟ ಹೆಜ್ಜೆಯಿಡೋಣ.
ಜೀವನವು ಪರಿವರ್ತನಶೀಲವಾದುದು. ಅದು ನಿರಂತರವಾಗಿ ವಿಕಾಸ ಹೊಂದುತ್ತಿದೆ. ನೀವು ಹೆಚ್ಚು ಲವಲವಿಕೆಯಿಂದಿದ್ದಷ್ಟೂ ನಿಮ್ಮ ಜೀವನದಲ್ಲಿ ಸದಾ ಹೆಚ್ಚು ವಿಷಯಗಳು ಘಟಿಸುತ್ತವೆ.
ದೇಹ ಮತ್ತು ಮನಸ್ಸು ಅಸ್ತಿತ್ವದ ಮೇಲ್ಪದರಗಳಷ್ಟೆ. ನಿಮಗೆ ಅವುಗಳ ಅನಿತ್ಯತೆಯ ಅರಿವಾದರೆ, ನೀವು ಅಸ್ತಿತ್ವದ ಮೂಲದೆಡೆಗೆ ಮುಖ ಮಾಡುವಿರಿ.
ನಿಮ್ಮ ಯೋಚನೆ-ಭಾವನೆಗಳು ಅದೇನೇ ಇರಲಿ, ಅದು ಸ್ಥಳೀಯ ಕಾಡುಹರಟೆಯಷ್ಟೆ, ನಿಮ್ಮೊಳಗಷ್ಟೆ ನಡೆಯುತ್ತಿರುವ ಹರಟೆ. ಅದು ಚೆನ್ನಾಗಿದ್ದರೆ ಅದನ್ನು ಆನಂದಿಸಿ, ಆದರೆ ಅದನ್ನು ನಂಬಬೇಡಿ.
ಸಿಟ್ಟಿಗೆ ನಿಮ್ಮನ್ನು ಗುರಿಯಾಗಿಸಿದರೆ ಅದು ನಿಮಗೆ ಇಷ್ಟವಾಗುವುದಿಲ್ಲ. ಹಾಗಿದ್ದ ಮೇಲೆ ಬೇರೆಯವರನ್ನು ಸಿಟ್ಟಿಗೆ ಗುರಿಯಾಗಿಸುವುದು ಒಂದು ಪರಿಹಾರ ಎಂದು ಏಕಾದರೂ ಅಂದುಕೊಳ್ಳುತ್ತೀರಿ.
ನೀವು ಸತ್ಯದೊಂದಿಗೆ ಸಮಾಗಮದಲ್ಲಿದ್ದರೆ, ನಿಮ್ಮ ಸಂಬಂಧಗಳು ಕೇವಲ ಸಂಬಂಧಗಳಾಗಿ ಇರುತ್ತವೆಯೇ ಹೊರತು ವ್ಯಾಮೋಹವಾಗುವುದಿಲ್ಲ. ನೀವು ತನ್ಮಯತೆಯನ್ನು ಹೊಂದುವಿರಿ, ಆದರೆ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಪ್ರತಿಯೊಂದು ಹಾತೊರೆತವೂ ನಿಜವಾಗಿ ಅನಂತದ ಹಾತೊರೆತವೇ. ಆದರೆ ಅದು ಕಂತುಗಳಲ್ಲಿ ಅಭಿವ್ಯಕ್ತಿ ಪಡೆಯುತ್ತಿದೆ ಅಷ್ಟೆ.
ಇಂದ್ರಿಯಸುಖವು ಒಂದು ಮಟ್ಟದ ಸವಿಯಾದರೆ, ಸಂತೋಷವು ಇನ್ನೊಂದು ಮಟ್ಟದ್ದು. ಇಂದ್ರಿಯಸುಖವು ಸುಂದರವಾದುದೇ, ಆದರೆ ಅದು ನಿಮ್ಮನ್ನು ಅದರ ಗುಲಾಮನಾಗಿಸುತ್ತದೆ. ಸಂತೋಷವು ಅದ್ಭುತವಾದುದು; ಎಲ್ಲಕ್ಕಿಂತ ಮಿಗಿಲಾಗಿ ಅದು ನಿಮ್ಮನ್ನು ಮುಕ್ತಗೊಳಿಸುತ್ತದೆ.