About
Sadhguru Quotes
FILTERS:
SORT BY:
Clear All
ನಿಮ್ಮೆಲ್ಲ ಶಕ್ತಿ ಒಂದೇ ದಿಕ್ಕಿನಲ್ಲಿ ಕೇಂದ್ರೀಕೃತವಾದರೆ, ಜ್ಞಾನೋದಯವು ದೂರದಲ್ಲಿಲ್ಲ. ಎಷ್ಟೇ ಆದರೂ, ನೀವು ಅರಸುತ್ತಿರುವುದು ಅದಾಗಲೇ ನಿಮ್ಮೊಳಗೇ ಇದೆ.
ನಿಮಗೆ ಆರೋಗ್ಯವಂತರಾಗಿ ಚೆನ್ನಾಗಿ ಇರಬೇಕೆಂದರೆ, ಅದರ ಮೊದಲ ಹೆಜ್ಜೆ ನಿಮ್ಮ ಜೀವವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದಕ್ಕೆ ಗಮನ ನೀಡುವುದು.
ಧ್ಯಾನಲಿಂಗ ಜೀವಂತ ಗುರುವಿದ್ದಂತೆ. ಗುರುವಿನ ಮುಖ್ಯ ಪಾತ್ರ ನಿಮಗೆ ಬೋಧನೆ ಮತ್ತು ಮಾರ್ಗದರ್ಶನ ನೀಡುವುದಲ್ಲ, ಬದಲಿಗೆ ನಿಮ್ಮ ಜೀವಶಕ್ತಿಯನ್ನು ಕಿಚ್ಚೆಬ್ಬಿಸುವುದಾಗಿದೆ.
ಇದು ಯೋಗದ ಅತ್ಯಂತ ಮುಖ್ಯವಾದ ಅಂಶ: ಎಲ್ಲ ಜೀವಗಳ ಸ್ವರೂಪವೇ ಆಗಿರುವ ಒಳಗೂಡಿಸಿಕೊಳ್ಳುವಿಕೆ ಮತ್ತು ಅಗಾಧತೆಗಳ ನಿಚ್ಚಳ ಅನುಭವವನ್ನು ಹೊಂದುವುದು. ಮಣ್ಣು ಉಳಿಸೋಣ.
ನೀವು ನಿಮ್ಮ ಮತ್ತು ನಿಮ್ಮ ದೇಹದ ನಡುವೆ, ನಿಮ್ಮ ಮತ್ತು ನಿಮ್ಮ ಮನಸ್ಸಿನ ನಡುವೆ ಒಂದು ಅಂತರವನ್ನು ಸೃಷ್ಟಿಸಿದಿರೆಂದರೆ, ಅದೇ ದುಃಖದ ಅಂತ್ಯ.
ಯಾರನ್ನೋ ಶಿಕ್ಷಿಸಲು ಪ್ರಯತ್ನಿಸುವ ಮೂಲಕ, ನೀವು ನಿಮ್ಮನ್ನೇ ಶಿಕ್ಷಿಸಿಕೊಳ್ಳುತ್ತೀರಷ್ಟೆ.
ನಿಮ್ಮ ಸಾಮರ್ಥ್ಯಗಳೇನೇ ಇರಲಿ, ನೀವು ಅವನ್ನು ಅವುಗಳ ಚರಮಸೀಮೆಯವರೆಗೆ ಕೊಂಡೊಯ್ಯಬೇಕು, ಮತ್ತು ಅದನ್ನೂ ಮೀರಿ ಇನ್ನೂ ಸ್ವಲ್ಪ ಮುಂದೆ ಹೋಗಬೇಕು.
ಮೂಲತಃ ನೀವು ಜೀವಚೈತನ್ಯ. ನಿಮ್ಮೊಳಗಿನ ಜೀವವು ಅದ್ಭುತವಾಗಿ ನಡೆಯುತ್ತಿದ್ದರೆ, ಅದೇ ಪರಮ ಯಶಸ್ಸು.
ಪುನರಾವರ್ತನೆಗಳಲ್ಲೇ ಸುತ್ತು ಹೊಡೆಯುತ್ತಿರುವ ಬದುಕಿನಲ್ಲಿ ಸುರಕ್ಷತೆಯಿದೆ, ಆದರೆ ಅದರಲ್ಲಿ ಯಾವುದೇ ರೀತಿಯ ಸಾಧ್ಯತೆಗಳಿಲ್ಲ, ಬೆಳವಣಿಗೆಯಿಲ್ಲ.
ನೀವು ನಿಮ್ಮ ವ್ಯಕ್ತಿತ್ವದ ಚಿಪ್ಪನ್ನು ಒಡೆದುಹಾಕಿದರೆ, ನೀವು ಕೇವಲ ಒಂದು ‘ಇರು’ವಿಕೆಯಾಗುವಿರಿ – ಜೀವಚೈತನ್ಯ ಹೇಗಿದೆಯೋ ಹಾಗೆ, ದೇವರು ಹೇಗಿದ್ದಾನೋ ಹಾಗೆ, ಕೇವಲ ಒಂದು ಉಪಸ್ಥಿತಿ.
ಭ್ರಮನಿರಸನ ಎಂಬುದು ಕೆಟ್ಟ ಸಂಗತಿಯೇನಲ್ಲ. ಏಕೆಂದರೆ ನಿಮ್ಮ ಭ್ರಮೆಗಳು ನುಚ್ಚುನೂರಾದರೆ, ನೀವು ವಾಸ್ತವತೆಗೆ ಹತ್ತಿರವಾಗುತ್ತಿದ್ದೀರಿ ಎಂದು ಅರ್ಥ.
ಯಾವಾಗ ತರ್ಕವನ್ನು ಬಳಸಬೇಕು ಮತ್ತು ಯಾವಾಗ ಬಳಸಬಾರದು ಎಂಬುದು ನಿಮಗೆ ತಿಳಿದಿರಬೇಕು. ನೀವು ತಾರ್ಕಿಕವಾಗಿ ವಿಶ್ಲೇಷಿಸುತ್ತಾ ಹೋದರೆ, ಜೀವನದ ಸುಂದರವಾದ ವಿಷಯಗಳೆಲ್ಲ ಮೂರ್ಖತನದಂತೆ ತೋರುವುವು.