Main Centers
International Centers
India
USA
Wisdom
FILTERS:
SORT BY:
ಯಶಸ್ಸು ಬರುವುದು ಗ್ರಹ-ನಕ್ಷತ್ರಗಳು ಕೂಡಿ ಬರುವುದರಿಂದ ಅಲ್ಲ, ಬದಲಿಗೆ ನಿಮ್ಮ ಸಂಕಲ್ಪವನ್ನು ಪೂರೈಸಲು ನಿಮಗಿರುವ ಬಾಧ್ಯತೆ ಮತ್ತು ಅದರತ್ತ ಸೂಕ್ತವಾಗಿ ಕಾರ್ಯಗೈಯುವುದರಿಂದ. ಎಲ್ಲಕ್ಕಿಂತ ಮಿಗಿಲಾಗಿ, ನಿಮ್ಮ ಅಂತರಂಗವು ಕೂಡಿ ಬರುವಂತೆ ಮಾಡಬೇಕು.
ಜ್ಞಾನೋದಯ ಹೊಂದಿದವರನ್ನು ‘ದ್ವಿಜ’ ಎನ್ನುತ್ತಾರೆ. ಅದರರ್ಥ, ಎರಡು ಸಲ ಹುಟ್ಟಿದವರು. ನೀವು ಎಲ್ಲ ಮೃಗೀಯ ಗುಣಗಳನ್ನು ತೊಡೆದುಹಾಕಿ ಒಂದು ಚೇತನವಾಗಿ ಅರಳುವಂತಾಗಲಿ.
ಬೆಳಿಗ್ಗೆ ಎದ್ದಾಗ ನೀವು ಮಾಡಬೇಕಾದ ಮೊದಲ ವಿಷಯವೆಂದರೆ ಮುಗುಳ್ನಗುವುದು. ನೀವು ಜೀವಂತವಾಗಿದ್ದೀರಿ! ಅದು ಅತ್ಯಂತ ದೊಡ್ಡ ಆಶೀರ್ವಾದವಲ್ಲವೇ. ಮುಗುಳ್ನಗಲು ಇನ್ನೇನು ಬೇಕು.
ಕರ್ಮ ನಿಮ್ಮ ಬಂಧನವಾಗಿದ್ದರೂ, ಅದನ್ನು ನೀವು ಸರಿಯಾಗಿ ನಿಭಾಯಿಸಿದರೆ, ಕರ್ಮವು ನಿಮ್ಮ ಮುಕ್ತಿಯ ಮೆಟ್ಟಿಲೂ ಆಗಬಹುದು.
ನಿಮ್ಮ ದೇಹ-ಮನಸ್ಸುಗಳು ನಿಮ್ಮ ಸೂಚನೆಗಳನ್ನು ಪಾಲಿಸಿದರೆ, ಆರೋಗ್ಯ, ಶಾಂತಿ, ಮತ್ತು ಸಂತೋಷದಿಂದ ಇರುವುದು ಕೇವಲ ಒಂದು ಸಾಧ್ಯತೆಯಲ್ಲ – ಅದೊಂದು ಸಹಜ ಫಲಿತಾಂಶ.
ಆನಂದ ಎಂಬುದು ಒಬ್ಬ ವ್ಯಕ್ತಿಯ ಗುಣವಷ್ಟೆ ಅಲ್ಲ. ಅದು ಪ್ರಕೃತಿಯ ಸ್ವರೂಪವೇ ಆಗಿದೆ. ಈ ಸಂಸ್ಕೃತಿಯಲ್ಲಿ ನಾವು ‘ಬ್ರಹ್ಮಾನಂದ’ ಎನ್ನುತ್ತೇವೆ. ಅದರರ್ಥ ಸಮಸ್ತ ಸೃಷ್ಟಿಯೇ ಆನಂದಮಯವಾಗಿದೆ.
ಈ ಗಣೇಶ ಚತುರ್ಥಿಯಂದು, ವಿಘ್ನನಿವಾರಕನು ನಿಮ್ಮ ಬೆಳವಣಿಗೆ ಮತ್ತು ಪರಮಮುಕ್ತಿಯೆಡೆಗಿನ ದಾರಿಯನ್ನು ತಿಳಿಗೊಳಿಸಲಿ.
ನೀವು ಯಾರೇ ಅಥವಾ ಏನೇ ಆಗಿರಿ, ಪ್ರತಿ ಮನುಷ್ಯನಲ್ಲೂ, ಅವರು ಈಗ ಏನಾಗಿರುವರೋ ಅದಕ್ಕಿಂತ ಹೆಚ್ಚಿನದ್ದೇನೋ ಆಗಲು ಸದಾ ಬಯಸುತ್ತಲೇ ಇರುವ ಏನೋ ಒಂದು ತುಡಿತವಿದೆ.
ನಿಮ್ಮ ಅಂತರಂಗವನ್ನು ಎಂಜಿನಿಯರಿಂಗ್ ಮಾಡಿ ಚೊಕ್ಕಟಗೊಳಿಸಿ, ಮತ್ತು ನಿಮ್ಮ ಚೇತನವು ಸಂಪೂರ್ಣವಾಗಿ ಅರಳುವಂತೆ ಮಾಡಿ.
ನಿರಾಳತೆಯ ಭಾವವು ನಿಮ್ಮಲ್ಲಿ ಶಾಂತಿಯ ಶಕ್ತಿಯನ್ನು ತರುತ್ತದೆ.
ನಿಮ್ಮ ಸುತ್ತಲಿರುವ ಜನರಿಗೆ ನೀವು ಆದಷ್ಟು ಹೆಚ್ಚು ಉಪಯುಕ್ತರಾಗುವುದು ಹೇಗೆಂದು ನೋಡಿ – ಆಗ ನಿಮ್ಮ ಕಾರ್ಯಗಳು ಸಹಜವಾಗಿಯೇ ಸಮುಚಿತವಾಗಿರುವುವು.
ನಿಮ್ಮ ಸಂಬಂಧಗಳು ಇನ್ನೊಬ್ಬರಿಂದ ಸಂತೋಷವನ್ನು ಹಿಂಡುವ ಬಗ್ಗೆಯಾಗಿರಬಾರದು, ಬದಲಿಗೆ ನಿಮ್ಮ ಸಂತೋಷವನ್ನು ಹಂಚುವ ಬಗ್ಗೆಯಾಗಿರಬೇಕು. ಹೀಗಾಯಿತೆಂದರೆ, ಯಾರೊಂದಿಗೇ ಆದರೂ ನೀವು ಅದ್ಭುತ ಸಂಬಂಧಗಳನ್ನು ಹೊಂದುತ್ತೀರಿ.