Wisdom
FILTERS:
SORT BY:
ಪ್ರೀತಿಸುವ, ಇತರರಿಗಾಗಿ ಮಿಡಿಯುವ, ಮತ್ತು ಜೀವನವನ್ನು ಅನುಭವಿಸುವ ನಿಮ್ಮ ಸಾಮರ್ಥ್ಯಕ್ಕೆ ಮಿತಿಯಿಲ್ಲ. ಮಿತಿಯಿರುವುದು ದೇಹ-ಮನಸ್ಸುಗಳ ಕಾರ್ಯಗಳಲ್ಲಷ್ಟೆ.
ಮನುಷ್ಯರಾಗಿರುವುದರ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ನಾವು ತೆಗೆದುಕೊಳ್ಳಬೇಕಾದ ಅತ್ಯಗತ್ಯವಾದ ಹೆಜ್ಜೆಯೆಂದರೆ, ಕೊಡುಕೊಳ್ಳುವಿಕೆಯ ಸ್ತರವನ್ನು ಮೀರಿಹೋಗಿ ಅತೀತವಾದುದರೆಡೆಗೆ ಸಾಗುವುದು.
ನಿಮಗೆ ಪರಿವರ್ತನೆ ಬೇಕಿದ್ದರೆ, ಅದರ ಹೆಚ್ಚಿನ ಭಾಗ ಆಗಬೇಕಾದುದು ದೇಹದಲ್ಲಿ. ಏಕೆಂದರೆ ದೇಹವು ಮನಸ್ಸಿಗಿಂತ ಅದೆಷ್ಟೋ ಪಟ್ಟು ಹೆಚ್ಚು ನೆನಪುಗಳನ್ನು ಹೊತ್ತಿದೆ.
ನಿಮಗೆ ನಿಮ್ಮ ಸ್ವರೂಪದ ಅರಿವಿಲ್ಲದಿದ್ದಾಗ ಮಾತ್ರ ನಿಮ್ಮ ಕುರಿತಾದ ಇತರರ ಅಭಿಪ್ರಾಯಗಳು ನಿಮಗೆ ಮುಖ್ಯವಾಗುತ್ತದೆ.
ಅಧ್ಯಾತ್ಮ ಎಂಬುದು ಸಾಮಾಜಿಕ ವಿಷಯವಲ್ಲ; ಅದು ನೀವು ನಿಮ್ಮೊಳಗೆ ಮಾಡುವಂತಹದ್ದು.
‘ಯೂಸ್ ಅಂಡ್ ತ್ರೋ’ ಮನೋಭಾವವನ್ನು ತೊಡೆದುಹಾಕುವುದು ಕೇವಲ ಮಾಲಿನ್ಯವನ್ನು ಕಡಿಮೆ ಮಾಡುವ ಬಗ್ಗೆಯಲ್ಲ – ಅದು ಸಕಲ ಸೃಷ್ಟಿಯೆಡೆಗೆ ಆದರವನ್ನು ಹೊಂದುವ ಬಗ್ಗೆಯಾಗಿದೆ. ಎಲ್ಲವೂ ಬರುವುದು ಈ ಜೀವಂತ ಭೂಮಿಯಿಂದ. ಅದನ್ನು ಜವಾಬ್ದಾರಿಯಿಂದ ಬಳಸೋಣ.
ದೈವೀಕತೆ ಎಂಬುದು ಸ್ವರ್ಗದಿಂದ ಇಳಿದು ಬಂದ ವಿಷಯವಲ್ಲ. ಅದು ನೀವು ಉನ್ನತ ಸಾಧ್ಯತೆಯಾಗಿ ವಿಕಾಸಹೊಂದುವತ್ತ ಏರಬಹುದಾದ ಒಂದು ಏಣಿ.
ಜೀವನವು ಒಂದು ವರವೂ ಅಲ್ಲ, ಶಾಪವೂ ಅಲ್ಲ. ಅದೊಂದು ವಿದ್ಯಮಾನ ಅಷ್ಟೆ. ನೀವು ಅದನ್ನು ಚೆನ್ನಾಗಿ ನಿಭಾಯಿಸಿದರೆ, ಅದು ಸುಂದರವೂ ಅದ್ಭುತವೂ ಆಗುತ್ತದೆ. ಕೆಟ್ಟದಾಗಿ ನಿಭಾಯಿಸಿದರೆ ಅದು ವಿರೂಪಗೊಂಡು ಒಂದು ಯಾತನೆಯಾಗುತ್ತದೆ.
ಪ್ರೀತಿಯು ಮುಂದೆಯೂ ಹಾಗೆಯೇ ಇರುತ್ತದೆ ಎಂಬ ಖಚಿತತೆಯೇನೂ ಇಲ್ಲ. ಅದನ್ನು ಜೀವಂತವಾಗಿಡಲು ಅರಿವು ಅಗತ್ಯ.
ಪ್ರತಿಕ್ರಿಯೆಯು ನಿಮ್ಮ ಹಿಂದಿನ ನೆನಪುಗಳು ಮತ್ತು ತೀರ್ಮಾನಗಳಿಂದ ಹೊಮ್ಮುವಂತದ್ದು. ಸ್ಪಂದನೆ ಎಂಬುದು ಈ ಕ್ಷಣದಲ್ಲಿ ನಡೆಯುವ ಪ್ರಜ್ಞಾಪೂರ್ವಕ ಪ್ರಕ್ರಿಯೆ.
ಎಲ್ಲ ಚಲನವಲನಗಳು ಇರುವುದು ಅಸ್ತಿತ್ವದ ಮೇಲ್ಮೈಯಲ್ಲಿ. ಅದರ ಅಂತರಾಳದಲ್ಲಿರುವ ಸತ್ಯವು ಯಾವಾಗಲೂ ಅಚಲವಾಗಿದೆ.
ಧ್ಯಾನದ ವಿಷಯಕ್ಕೆ ಬಂದಾಗ, ಪ್ರಶ್ನೆ ಸಾಮರ್ಥ್ಯದ್ದಲ್ಲ, ಬದಲಿಗೆ ಹೃತ್ಪೂರ್ವಕತೆಯದ್ದು.