Wisdom
FILTERS:
SORT BY:
ಎಲ್ಲ ಚಲನವಲನಗಳು ಇರುವುದು ಅಸ್ತಿತ್ವದ ಮೇಲ್ಮೈಯಲ್ಲಿ. ಅದರ ಅಂತರಾಳದಲ್ಲಿರುವ ಸತ್ಯವು ಯಾವಾಗಲೂ ಅಚಲವಾಗಿದೆ.
ಧ್ಯಾನದ ವಿಷಯಕ್ಕೆ ಬಂದಾಗ, ಪ್ರಶ್ನೆ ಸಾಮರ್ಥ್ಯದ್ದಲ್ಲ, ಬದಲಿಗೆ ಹೃತ್ಪೂರ್ವಕತೆಯದ್ದು.
ನೀವು ಹೆಚ್ಚು ಭದ್ರತೆಯನ್ನು ಹಂಬಲಿಸಿದಷ್ಟೂ ಹೆಚ್ಚು ಅಭದ್ರತೆಯ ಭಾವನೆಯನ್ನು ಹೊಂದುವಿರಿ. ನಿಜವಾದ ಭದ್ರತೆಯಿರುವುದು ನೀವು ನಿಮ್ಮೊಳಗೆ ಅನಿರ್ಬಂಧಿತವಾದ ನಿರಾಳತೆಯ ಸ್ಥಿತಿಯಲ್ಲಿದ್ದಾಗ ಮಾತ್ರ.
ಜ್ಞಾನ, ಅರಿವು ಮತ್ತು ವಿವೇಕಗಳ ನಡುವೆ ವ್ಯತ್ಯಾಸವಿದೆ. ಜ್ಞಾನವನ್ನು ಶೇಖರಿಸಬಹುದು, ಅರಿವು ಎಂಬುದು ಒಂದು ಸಾಕ್ಷಾತ್ಕಾರ, ಮತ್ತು ವಿವೇಕವು ನೀವು ಸಂಪಾದಿಸುವಂತದ್ದು.
ನಿಮಗೆ ನಿಮ್ಮ ಸ್ವರೂಪದ ಅರಿವಿಲ್ಲದಿದ್ದಾಗ ಮಾತ್ರ ನಿಮ್ಮ ಕುರಿತಾದ ಇತರರ ಅಭಿಪ್ರಾಯಗಳು ನಿಮಗೆ ಮುಖ್ಯವಾಗುತ್ತದೆ.
ಧನ್ಯತೆಯನ್ನು ಹೊಂದಲು ಎಲ್ಲ ವಿಧಾನಗಳನ್ನೂ ಪ್ರಯತ್ನಿಸಿ, ಯಾವುದೂ ಕೆಲಸ ಮಾಡುವುದಿಲ್ಲ ಎಂದು ನಿಮಗೆ ಮನವರಿಕೆಯಾಗಿದ್ದರೆ, ಅದರರ್ಥ ನೀವು ‘ಮತ್ತೀಗ, ಯೋಗ’ ಎಂಬ ಹಂತವನ್ನು ತಲುಪಿದ್ದೀರಿ.
ಯೋಚನೆಗಳು ಮತ್ತು ಭಾವನೆಗಳು ಪ್ರತ್ಯೇಕ ವಿಷಯಗಳಲ್ಲ. ನೀವು ಹೇಗೆ ಯೋಚಿಸುತ್ತೀರೋ ಹಾಗೇ ಭಾವಿಸುತ್ತೀರಿ.
ಜೀವನವು ಒಂದು ವರವೂ ಅಲ್ಲ, ಶಾಪವೂ ಅಲ್ಲ. ಅದೊಂದು ವಿದ್ಯಮಾನ ಅಷ್ಟೆ. ನೀವು ಅದನ್ನು ಚೆನ್ನಾಗಿ ನಿಭಾಯಿಸಿದರೆ, ಅದು ಸುಂದರವೂ ಅದ್ಭುತವೂ ಆಗುತ್ತದೆ. ಕೆಟ್ಟದಾಗಿ ನಿಭಾಯಿಸಿದರೆ ಅದು ವಿರೂಪಗೊಂಡು ಒಂದು ಯಾತನೆಯಾಗುತ್ತದೆ.
ಸಂಪ್ರದಾಯ ಎಂದರೆ ಹಿಂದಿನ ಪೀಳಿಗೆಗಳನ್ನು ಸುಮ್ಮನೆ ಅನುಕರಿಸುವುದಲ್ಲ. ಅದು ಅವರ ಅನುಭವಗಳಿಂದ ಕಲಿಯುವ ಬಗ್ಗೆಯಾಗಿದೆ.
Every Human Being has a certain Genius within them; but they often destroy it by trying to be like someone else.