ದೈವೀಕ ಯಂತ್ರಗಳು ಭಾರತದ ಪರಂಪರೆಯಲ್ಲಿ ಹಾಸುಹೊಕ್ಕಾಗಿವೆ. ದೈವೀಕತೆಯನ್ನು ಸೃಷ್ಟಿಸುವ ಗಹನ ವಿಜ್ಞಾನವೇ ನಮ್ಮಲ್ಲಿದೆ. ಇದನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡು ಸನಾತನ ಭಾರತ ಮಾನವನ ಶ್ರೇಯೋಭಿವೃದ್ಧಿಯಲ್ಲಿ ಎತ್ತರದ ಮೈಲುಗಲ್ಲುಗಳನ್ನೇ ಸಾಧಿಸಿದೆ. ಅಲ್ಲದೇ ಖಗೋಳ ಶಾಸ್ತ್ರ, ಗಣಿತ, ವೈದ್ಯಕೀಯ ಮುಂತಾದ ವಿಜ್ಞಾನಗಳಲ್ಲೂ ಭಾರತದಲ್ಲಿ ಕಂಡುಬಂದ ಅತ್ಯುತ್ಕೃಷ್ಟ ಪ್ರತಿಭೆಗಳ ಹಿಂದೆ ದೈವೀಕ ಯಂತ್ರಗಳ ಪಾತ್ರ ಬಲುದೊಡ್ಡದು. ಲಿಂಗ ಭೈರವಿ ದೇವಿಯ ಯಂತ್ರ ಹೊಂದಿರುವ ಪೃಚ್ಛಕರೊಬ್ಬರು ತಮ್ಮ ಬದುಕಿನಲ್ಲಿ ನಡೆದ ವಿಸ್ಮಯಗಳನ್ನು ಕುರಿತು ಸದ್ಗುರುಗಳನ್ನು ಕೇಳಿದಾಗ, ಸದ್ಗುರು ಹೇಳಿದ್ದೇನು?