‘ಪ್ರೀತಿ’ ಎಂಬುದು ಕಾಲೇಜು ಹುಡುಗರ ಜೀವನದಲ್ಲಿ ದಿನವೂ ಪ್ರಸ್ತಾಪಿಸಲ್ಪಡುವ ವಿಷಯ. ಅವರ ಖುಷಿಗೆ, ದುಃಖಕ್ಕೆ ಕಾರಣವಾಗುವ ಪ್ರಮುಖ ವಿಷಯಗಳಲ್ಲಿ ‘ಪ್ರೀತಿ’ ಒಂದು. ಕಾಲೇಜು ಹುಡುಗ-ಹುಡುಗಿಯರು ಈ ಕಾರಣಕ್ಕೆ ಭಾವನೆಗಳ ದೊಡ್ಡ ತುಮುಲಗಳಿಗೂ ಈಡಾಗುತ್ತಾರೆ. ಈ ವಯಸ್ಸಿನಲ್ಲಿ ಪ್ರೀತಿ ಮಾಡುವುದು ಸರಿಯೇ? ತಪ್ಪೇ? ಪ್ರೀತಿಯನ್ನು ಪ್ರೀತಿಸಿದವರಿಗೆ ತಿಳಿಸುವುದು ಹೇಗೆ? ಎಂಬ ಪ್ರಶ್ನೆಗಳು ಅವರಲ್ಲಿರುತ್ತವೆ. ಈ ವಿಡಿಯೋದಲ್ಲಿ ಇದೇ ಪ್ರಶ್ನೆಯನ್ನು ಹುಡುಗನೊಬ್ಬ ಸದ್ಗುರುಗಳನ್ನು ಕೇಳುತ್ತಾನೆ. ಉತ್ತರವನ್ನು ಕೇಳಿ!