ನಮ್ಮ ಸಮಯ, ನಮ್ಮಲ್ಲಿ ಅಂತರ್ಗತವಾಗಿರುವ ಮಾಹಿತಿ ಮತ್ತು ನಮ್ಮ ಶಕ್ತಿ, ಇವುಗಳನ್ನು ನಿಭಾಯಿಸುವಲ್ಲಿನ ನಮ್ಮ ಕ್ಷಮತೆ ನಮ್ಮ ಬದುಕಿನ ಕ್ಷಮತೆಯ ಮೇಲೂ ಪರಿಣಾಮ ಬೀರಬಲ್ಲದು. ಯೋಗಾಭ್ಯಾಸಗಳು ನಮ್ಮ ಶಕ್ತಿಯನ್ನು ನಿಭಾಯಿಸಲು ಸಹಾಯ ಮಾಡುವುದರಿಂದ, ಸಹಜವಾಗಿ ಸಮಯವನ್ನು ಕ್ಷಮತೆಯಿಂದ ನಿಭಾಯಿಸಲೂ ಸಹಾಯಮಾಡುತ್ತವೆ. ನಮ್ಮಲ್ಲಿನ ಕಾರ್ಮಿಕ ಮಾಹಿತಿಯನ್ನು ಒಡೆದು, ಅದನ್ನು ಮೀರಿ ಕೆಲಸ ಮಾಡುವಲ್ಲಿಯೂ ಶಕ್ತಿಯ ಸಹಾಯ ಬೇಕು. ಆದರೆ ಯೋಗಾಭ್ಯಾಸಗಳು ’ಕಾಲ’ವನ್ನು ಮೀರಿ ಹೋಗಲು ಸಹಾಯ ಮಾಡುತ್ತವೆಯೇ? ’ಕಾಲ’ವನ್ನು ಮೀರಿಹೋಗಲು ಸಹಾಯ ಮಾಡಬಲ್ಲ ಯೋಗ ಸಾಧನಗಳು ಇವೆಯೇ? ಹಾಗೊಮ್ಮೆ ಇದ್ದರೆ, ಅವುಗಳನ್ನು ಅನ್ವೇಷಿಸುವ ಸಾಧಕನ ಸ್ವಭಾವ ಹೇಗಿರಬೇಕು? ಕೇಳಿ ಸದ್ಗುರುಗಳ ಮಾತುಗಳಲ್ಲಿ.