'ದೃಷ್ಟಿ ಬೀಳುತ್ತೆ’, ದೃಷ್ಟಿ ಬಿದ್ದರೆ ಹಾಗಾಗುತ್ತೆ ಹೀಗಾಗುತ್ತೆ ಅಂತ ಮನೆಯಲ್ಲಿ ಹಿರಿಯರಿದ್ದರೆ ಹೇಳಿದ್ದನ್ನು ಕೇಳಿರುತ್ತೀರಿ. "ದೃಷ್ಟಿ ತೆಗೆಯಬೇಕು" ಅಂತಲೂ ಅವರು ಹೇಳುತ್ತಿರುತ್ತಾರೆ. ಈ ’ದೃಷ್ಟಿ ಬೀಳುವುದು/ ತಾಕುವುದು" ಅಂದರೆ ಏನು? ಅದು ನಿಜವೇ? ಹಿರಿಯರು ‘ದೃಷ್ಟಿ ತೆಗೆಯುವ’ ಪ್ರಕ್ರಿಯೆ ಮಾಡಿದಾಗ ಅವರು ನಿಜಕ್ಕೂ ಏನನ್ನು ಮಾಡುತ್ತಿರುತ್ತಾರೆ? ಈ ಆಚರಣೆಗಳ ಹಿಂದೆ ನಿಜವಾದ ಕಾರಣಾವೇನಾದರೂ ಇದೆಯೇ, ಅಥವಾ ಕೇವಲ ಮೂಢನಂಬಿಕೆಯೇ? ಒಮ್ಮೆ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರುವಂತಿದ್ದರೆ, ನಾವು ಅವುಗಳಿಗೆ ಈಡಾಗದಂತೆ ನಮ್ಮನ್ನು ನಾವು ನಿರ್ಮಿಸಿಕೊಳ್ಳುವುದು ಹೇಗೆ? ಕೇಳಿ ಸದ್ಗುರುಗಳ ಉತ್ತರವನ್ನು!