Chandra grahanada samayadalli oota yaake maadabaaradu

ಲಿಪ್ಯಂತರ:

 

ಇಂದು ಚಂದ್ರ fast forward ನಲ್ಲಿದಾನೆ. ಎಲ್ಲಾ 28 ದಿನಗಳು, ಚಂದ್ರನ 28 ಹಂತಗಳೂ, ಇವತ್ತೇ ಆಗುತ್ತೆ. ಒಂದ್ ತಿಂಗ್ಳಲ್ಲಿ ಆಗೋದೆಲ್ಲ, ಸೂಕ್ಷ್ಮ ರೀತಿನಲ್ಲಿ, ಇಲ್ಲೇ ಈವಾಗ್ಲೇ ಆಗ್ತಿದೆ. ಈ ತರ fast forward ಆಗ್ತಿದ್ದಾಗ, ಹಲವು ವಿಷ್ಯಗಳು ಬದಲಾಗ್ತಿರುತ್ವೆ. ನೀವು ಗಮನಿಸಬಹುದಾದ ಒಂದ್ ವಿಷ್ಯ ಏನಂದ್ರೆ, ಆಹಾರ. ನಾನು ಆಹಾರ ಅಂದಾಗ, ನನ್ ಅರ್ಥ ನಿಮ್ ಶರೀರವೇ. ಆಹಾರ ನಿರ್ಮಾಣಕ್ರಿಯೆಯಲ್ಲಿರೋ ನಿಮ್ಮ ದೇಹವೇ. ಅಲ್ವಾ? ಆಹಾರ, ವಿಶೇಷವಾಗಿ ಬೇಯಿಸಿದ ಆಹಾರ, ಈ ದಿನದಂದು ತನ್ನ ಕೆಡುವಿಕೆಯ ಹಂತಗಳನ್ನು ಸೂಕ್ಷ್ಮ ಹಂತದಲ್ಲಿ ಬಹಳ ವೇಗವಾಗಿ ಹಾದು ಹೋಗುತ್ತೆ, ಬೇರೆ ಸಾಮಾನ್ಯ ದಿನಗಳಿಗೆ ಹೋಲಿಸಿದ್ರೆ.


ಒಂದ್ ಸಣ್ಣ ಪ್ರಯೋಗ ಮಾಡಿ ನೋಡೋಣ ಅಂದ್ಕೊಂಡ್ವಿ ಇವತ್ತು. ಇದು ನಿಮಗೆ ತೋರಿಸೋಕೆ, ಊಟ ಎಷ್ಟು ಬೇಗ ಹಾಳಾಗುತ್ತೆ ಅಂತ, ನಮ್ಮ ಕಣ್ಣೆದುರಲ್ಲೇ. ಇದು ಬರೀ ಆಹಾರಕ್ಕೆ ಆಗ್ತಾ ಇಲ್ಲ. ಇದು ನಿಮ್ಮ ಶರೀರಕ್ಕೂ ಆಗ್ತಾ ಇದೆ. ಇದು ಇಡೀ ಭೂಮಿಗೆ ಆಗ್ತಾ ಇದೆ, ಒಂದು ನಿರ್ದಿಷ್ಟ ರೀತಿಯಲ್ಲಿ. ನಿಮ್ಮ ದೇಹದಲ್ಲಿ ಆಹಾರ ಇದ್ರೆ, ಅದು ನಿಮ್ಗೆ ಇನ್ನೂ ಜಾಸ್ತಿ ಆಗುತ್ತೆ. ಏನಂದ್ರೆ, ಎರಡು ಗಂಟೆ ಸಮಯದಲ್ಲಿ, ನಿಮ್ಮ ಪ್ರಾಣಶಕ್ತಿಗಳಿಗೆ 28 ದಿನಗಳಷ್ಟು ವಯಸ್ಸು ಕಳೆದುಹೋಗುತ್ತೆ. ನಾವು ಇದನ್ನ ಗಮನಿಸ್ತಾ ಇರೋಣ, ಸಮಯ ಕಳೀತಿದ್ದಂಗೆ. ನೋಡಿ, ಈಗ ಇನ್ನೂ ಚೆನ್ನಾಗಿದೆ. ಒಂದೂವರೆ ಗಂಟೆ ಕಳೆದ ಮೇಲೆ ನೋಡಿ. ನಾವಿಲ್ಲಿ ಕೂತಿದ್ದಂಗೇನೆ ಈ ಆಹಾರದ ಗುಣ ಬದಲಾಗುತ್ತೆ. ಸರೀನ. ಈಗದನ್ನ ಅದರ್ ಪಾಡಿಗೆ ಬಿಡೋಣ. ಅದು ಪಕ್ವವಾಗ್ಲಿ (ನಗು).


ಈಗ ನೋಡಿ ಅದು ಎಷ್ಟು ಸುಮ್ಮನಾಗಿದೆ. ಹೆಚ್ಚೇನೂ ಉತ್ಸಾಹ ಇಲ್ಲ. ಮೊದಲ್ನೇ ಸರ್ತಿ ಇದನ್ನ ಹಿಡ್ದಾಗ, ಅದು ಸ್ಪಷ್ಟವಾಗಿ ಹೀಗೆ ಹೋಗ್ತಿತ್ತು. ಈಗ ಅದು ಸುಮ್ಮನೆ ಇದೆ. ಅದಿನ್ನೂ ಪೂರ್ತಿಯಾಗಿ ತಮಸ್ ಆಗಿಲ್ಲ. ಅದರ ಕಡೆಗೆ ಹೋಗ್ತಾ ಇದೆ. ಹೆಚ್ಚು ಕಮ್ಮಿ ತಮಸ್ನಲ್ಲಿದೆ ಈಗ.


ತಮಸ್ - ತ್ರಿಗುಣಗಳಲ್ಲಿ ಒಂದು. ಅದರರ್ಥ ’ಜಡತ್ವ’


ಇನ್ನು 15-20 ನಿಮಿಷಗಳಲ್ಲಿ, ನೀವು ಪರೀಕ್ಷಿಸಿದ್ರೆ, ಅದು ಅಪ್ರದಕ್ಷಿಣವಾಗಿ ಹೋಗುತ್ತೆ. ಹಾಗಾಗಿ, ಇದು ಈಗ ನಿಮ್ಮ ಹೊಟ್ಟೆಯಲ್ಲಿದ್ದಿದ್ರೆ, ಏಳು ಗಂಟೆಗೆ ನೀವು ಊಟ ಮಾಡಿ ಇಲ್ಲಿ ಕೂತಿರ್ತಿದ್ರೆ, ಇದು ನಿಮ್ಮೊಳಗೆ (stress) ಆಗ್ತಾ ಇರ್ತಿತ್ತು. ನಾನಂಕೊಂಡೆ, ಇದು ನಿಮ್ಮೊಳಗೆ ಆಗೋದಕ್ಕಿಂತ ಹೊರಗೆ ಆದ್ರೆ ಒಳ್ಳೇದು ಅಂತ. ಏಕಂದ್ರೆ, ಊಟ ಹೊಟ್ಟೇನಲ್ಲೇ ಕೊಳಿಯುತ್ತೆ. ನಾವು ಭೌತಿಕೆ ವಿಜ್ಞಾನದ ಪ್ರಕಾರ ನೋಡಿದ್ರೆ, ಭೌತಿಕ ವಿಜ್ಞಾನದ ಪರಿಮಿತಿಗೆ ಒಳಪಟ್ಟು ನಿಮ್ಮನ್ನ ಪರೀಕ್ಷಿಸಿದ್ರೆ, ಒಂದ್ ಹಂತದಲ್ಲಿ ನೀವು ಬರೀ heart, liver, kidney ಇತ್ಯಾದಿ. ನಮಗಿಂದು ಗೊತ್ತಿದೆ, ಅವನ್ನೆಲ್ಲಾ replace ಮಾಡ್ಬಹುದು. ನಿಮ್ಮನ್ನ replace ಮಾಡಕ್ಕಾಗುತ್ತಾ? (ನಗು) ಸಾಂಬಾರಿಗೆ ಏನಾಗ್ತಾ ಇದೆ ನೋಡೋಣ. ನೋಡ್ತಾ ಇದೀರ?

ಅಪ್ರದಕ್ಷಿಣವಾಗಿ ಹೋಗ್ತಾ ಇದೆ. ಈ ಮೂರು ಗಂಟೆಗಳಲ್ಲಿ, 28 ದಿನಗಳಲ್ಲಿ ಆಗೋದು ಇಲ್ಲೇ ಆಗ್ತಾ ಇದೆ. ಇದು ನಿಮ್ಮ ಶರೀರಕ್ಕೂ ಆಗ್ತಾ ಇದೆ, ನೀವಿಲ್ಲಿ ಕೂತಿದ್ದಂಗೇನೆ. ನಿಮಗದನ್ನ ಗಮನಿಸೋದಿಕ್ಕೆ ಆಗ್ಬೇಕು. ಆದ್ರೆ ನಿಮಗೆ ಆಗ್ತಾ ಇಲ್ಲ. ಸಾಂಬಾರ್ ಹೇಳ್ತಾ ಇದೆ, ನಿಮ್ಮ ಮೆದುಳಿಗೆ ಹೇಳ್ಲಿಕ್ಕೆ ಆಗ್ದೇ ಇರೋದನ್ನ! ನಾವಿದನ್ನ 40 ನಿಮಿಷಗಳಷ್ಟೆ ಗಮನಿಸಿದ್ವಿ. ಒಂದ್ ಗಂಟೆನಲ್ಲಿ, ಪೋಷಣೆಯನ್ನು ನೀಡೋ ಆಹಾರ, ವಿಷವಾಗ್ತಾ ಇದೆ. ನಾನಿದನ್ನ ತಿಂದ್ರೆ ಏನಾಗುತ್ತೆ? ಸತ್ ಹೋಗ್ತೀನ? ದುರದೃಷ್ಟವಶಾತ್ ಇಲ್ಲ. (ನಗು) ಯಾಕೆ ದುರದೃಷ್ಟವಶಾತ್ ಅಂತಂದೆ ಅಂದ್ರೆ, ನೀವು ಇದನ್ನ ತಿಂದು ಕೂಡ್ಲೆ ಸತ್ ಹೋಗಿದ್ದಿದ್ರೆ, ಕಾನೂನು ಮಾಡಿರೋರು. ಗ್ರಹಣದ ದಿನ ಯಾರೂ ಬೇಯಿಸಿದ ಆಹಾರ ತಿನ್ಬಾರದು ಅಂತ. ಆದ್ರೆ ಅದು ಸೂಕ್ಷ್ಮ ಹಂತದಲ್ಲಿ ಆಗ್ತಿರೋದ್ರಿಂದ...