ಭಂಗಿ, ಗಾಂಜಾ ಮುಂತಾದ ಮಾದಕ ವಸ್ತುಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನ ಬಲಿಯಾಗುತ್ತಿದ್ದಾರೆ. ಅದರಲ್ಲೂ ಯುವಜನತೆ ಇವುಗಳಿಗೆ ಮಾರುಹೋಗುತ್ತಿದೆ. ಇವುಗಳಲ್ಲಿ ಕೆಲವು ವಸ್ತುಗಳನ್ನು ಕಾನೂನಾತ್ಮಕವಾಗಿಸಬೇಕು ಎಂಬ ಕೂಗೂ ಕೇಳಿಬರುತ್ತಿದೆ! ಹಾಗಿದ್ದರೆ ಇವುಗಳ ಸೇವನೆಯಿಂದ ತೊಂದರೆಯಿಲ್ಲವಾ? ಮಾನವನ ವ್ಯವಸ್ಥೆಯ ಮೇಲೆ ಇವು ಬೀರುವ ಪರಿಣಾಮ ಎಂಥದ್ದು? ಒಮ್ಮೆ ಇವು ಕಾನೂನಾತ್ಮಕವಾದರೆ ಸಮಾಜದ ಮೇಲಾಗುವ ಪರಿಣಾಮ ಏನು? ಇವುಗಳಿಂದ ಹೊರಬರಲು ಉಪಾಯವೇನು? ಸಂತಸವನ್ನರಸಿ ಇವುಗಳನ್ನು ಅವಲಂಬಿಸಿರುವ ಯುವಜನಾಂಗದ ಮುಂದಿರುವ ಬದಲೀ ಮಾರ್ಗ ಯಾವುದು ? ಕೇಳಿ ಸದ್ಗುರುಗಳ ಮಾತುಗಳಲ್ಲಿ.