Cancer Tadegattalu Sarala Upayagalu

ಲಿಪ್ಯಂತರ:

ಪ್ರಶ್ನೆ: ಕ್ಯಾನ್ಸರ್ ಅಂದ್ರೆ ಏನು? ಅದು ಬಾರದಂತೆ ತಡಿಯೋದಿಕ್ಕೆ ದಾರಿಗಳಿವ್ಯಾ? 


ಸದ್ಗುರು: ಶರೀರ ಬರೀ ಜೀವಕೋಶಗಳಿಂದ ಆಗಿದೆ. ಸಾವಿರಾರು ಕೋಟಿಗಳಷ್ಟಿವೆ ಅಂತಾರೆ. ಈ ಎಲ್ಲಾ ಜೀವಕೋಶಗಳು ಮೂಲವಾಗಿ ವಿನ್ಯಾಸಗೊಳಿಸಲ್ಪಟ್ಟಿರೋದು ಆರೋಗ್ಯಕ್ಕಾಗಿ - ಅಂದ್ರೆ ಬದುಕುಳಿಯೋದಿಕ್ಕೆ. ತಾನು ಬದುಕುಳಿಯೋದಿಕ್ಕೆ, ಮತ್ತು ಆ ಜೀವ ಬದುಕುಳಿಯೋದಿಕ್ಕೆ. ಅವುಗಳಲ್ಲಿ ಕೆಲವು ಅಡ್ಡದಾರಿ ಹಿಡಿಯುತ್ವೆ. ಅವು ಬೇರೆಯವ್ರ ಸಂಪಾದನೆಯಲ್ಲಿ ಬದುಕುತ್ವೆ. ಅದು ಅಪರಾಧ, ಅಲ್ವಾ? ಒಬ್ಬ ಜೇಬುಗಳ್ಳ ಇದ್ದಾನೆ ಅಂತಿಟ್ಕೊಳಿ. ಅವನ್ ಕೆಲ್ಸ ಏನು? ನೀವು ಒಂದ್ ತಿಂಗ್ಳಲ್ಲಿ ಸಂಪಾದಿಸಿದ್ದನ್ನ, ಅವನಿಗೆ ಒಂದ್ ದಿನದಲ್ಲಿ ಹೊಡೀಬೇಕು. ಆದ್ರೆ ಅವ್ನೂ ಸಮಾಜದ ಒಂದ್ ಅಂಗ, ಸಿಕ್ ಹಾಕ್ಕೊಳೋ ವರೆಗೆ, ಅಲ್ವಾ (ನಗು). ಈಗ ದೇಶದ ಎಲ್ಲಾ ಜೇಬುಗಳ್ರು ಒಂದುಗೂಡಿ ದೆಲ್ಲಿಗೆ ಬಂದ್ರು ಅಂತಿಟ್ಕೊಳಿ. ಈಗ ಎಲ್ರ ಜೇಬಿಗೂ ಕತ್ರಿ ಬೀಳುತ್ತೆ ಯಾಕಂದ್ರೆ ಈಗದು ವ್ಯವಸ್ಥಿತವಾಗ್ಬಿಟ್ಟಿದೆ. ಈಗ ನೀವು ಕ್ಯಾನ್ಸರ್ ಅಂತ ಕರಿಯೋದು ಇದೇನೇ. ಎಲ್ರ ದೇಹದಲ್ಲೂ ಕ್ಯಾನ್ಸರ್ ಜೀವಕೋಶಗಳಿರುತ್ವೆ. ಅವು ವ್ಯವಸ್ಥಿತವಾಗಿ, ಒಂದೇ ಜಾಗದಲ್ಲಿ ಕೇಂದ್ರೀಕೃತವಾಗ್ಬಿಟ್ರೆ, ಆಗದು ಗಂಭೀರ ಸಮಸ್ಯೆಯಾಗ್ಬಿಡುತ್ತೆ. ಎಲ್ಲಿವರೆಗೆ ಅಂದ್ರೆ ಆ ವ್ಯಕ್ತಿಯ ಜೀವವನ್ನೇ ತೆಗೆಯೋವಷ್ಟು. ಪರಿಹಾರ ಏನು? ಹಲವಾರು ಅಂಶಗಳಿವೆ. ಮೊದಲ್ನೇದಾಗಿ, ಅಪರಾಧಗಳು ಜಾಸ್ತಿಯಾಗೋದು ವ್ಯವಸ್ಥೆಯಲ್ಲಿ ಅರಾಜಕತೆ ಉಂಟಾದಾಗ. ಅಲ್ವಾ? ಸಮಾಜದಲ್ಲಿ ಅಪರಾಧಿಗಳು ಜಾಸ್ತಿಯಾಗೋದು ನ್ಯಾಯಾಂಗ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದಾಗ. ನಮ್ ಶರೀರದಲ್ಲೂ ಒಂದು ರಕ್ಷಣಾ ವ್ಯವಸ್ಥೆಯಿದೆ. ಅದನ್ನು ಚೆನ್ನಾಗಿ ನೋಡ್ಕೋತಾ ಇದೀವಾ? ಅಥ್ವಾ ಅದ್ರ ಮೇಲೆ ಎಲ್ಲ ತರದ ಉತ್ತೇಜಕ, ಮಾದಕ ಪದಾರ್ಥಗಳನ್ನು ಸುರಿಮಳೆಗಯ್ತಾ ಇದೀವ? ಮತ್ತದ್ರ ಮೇಲೆ ನಮ್ಮ ರಕ್ಷಣಾವ್ಯವಸ್ಥೆ ಕೆಲ್ಸ ಮಾಡ್ಬೇಕು ಅಂತ ನಿರೀಕ್ಷಿಸ್ತೇವೆ. ಅದು ಆ ತರ ಕೆಲ್ಸ ಮಾಡಲ್ಲ. ನಾವು ತಿಳ್ಕೋಬೇಕು. ನಾವು ಸೇವಿಸೋ ಪ್ರತಿಯೊಂದು ಉತ್ತೇಜಕ ಮತ್ತು ಮಾದಕ ಪದಾರ್ಥ, ಯಾವ್ದೋ ಒಂದ್ ರೀತಿಯಲ್ಲಿ ನಮ್ಮ ರಕ್ಷಣಾವ್ಯವಸ್ಥೆಯನ್ನ ಶಕ್ತಿಗುಂದಿಸುತ್ತೆ. ಜನ್ರ್ ಅಂದ್ಕೊಂಡಿದಾರೆ, ರಕ್ಷಣಾವ್ಯವಸ್ಥೆ ಇರೋದು ಬರೀ ಹೊರಗಿನ ಸೋಂಕುಗಳಿಗೆ ಅಂತ. ಇಲ್ಲ. ದೇಹದೊಳಗಿನ ಅಪರಾಧಿಗಳನ್ನು ನಿಯಂತ್ರಿಸೋದಿಕ್ಕೂ ರಕ್ಷಣಾವ್ಯವಸ್ಥೆ ಕೆಲ್ಸ ಮಾಡುತ್ತೆ.

ಒಂದ್ ಸರಳವಾದ ವಿಷ್ಯ ಅಂದ್ರೆ, ಯೋಗಶಾಸ್ತ್ರದಲ್ಲಿ ಇದೊಂದು ಸರಳವಾದ ತರ್ಕ. ಶರೀರದಲ್ಲಿರೋ ಈ ಕ್ಯಾನ್ಸರ್ ಜೀವಕೋಶಗಳು, ಅವುಗಳು ಸಾಧಾರಣವಾಗಿ 27 ರಿಂದ 28 ಪಟ್ಟು ಹೆಚ್ಚು ಆಹಾರ ಸೇವಿಸುತ್ವೆ, ಸಾಮಾನ್ಯವಾದ ಜೀವಕೋಶಗಳಿಗಿಂತ. ಹಾಗಾಗಿ, ನೀವು ನಿಮ್ಮ ಊಟಗಳ ನಡುವೆ ಕಾಲಾವಕಾಶ ಇಟ್ರೆ... ಯೋಗದ ಪ್ರಕಾರ ಎರಡು ಊಟಗಳ ನಡುವಿನ ಸೂಕ್ತವಾದ ಕಾಲಾವಕಾಶ ಎಂಟರಿಂದ ಹನ್ನೆರಡು ಗಂಟೆಗಳು. ಊಟಗಳ ನಡುವೆ ಎಂಟು ಗಂಟೆ ಕಾಲಾವಕಾಶ ಇಟ್ರೆ, ನೀವು ನೋಡ್ತೀರಿ ಕ್ಯಾನ್ಸರ್ ಜೀವಕೋಶಗಳೆಲ್ಲ ತಾವಾಗೇ ಸತ್ತು ಹೋಗುತ್ವೆ. ಯಾಕಂದ್ರೆ ಅವುಗಳು ಆಹಾರ ಇಲ್ದೆ ಬದುಕುಳಿಯಲ್ಲ. ಬೇರೆಯವು ಉಳಿಯುತ್ವೆ. ಹಾಗಾಗಿ ನಾವ್ಯಾವಗ್ಲೂ ಇದನ್ನ ಗೊತ್ತುಪಡಿಸಿದ್ವಿ, ಬೆಳಿಗ್ಗೆ ಒಂದು ಊಟ, ಸಂಜೆ ಒಂದು ಊಟ, ಮಧ್ಯ ಮಧ್ಯ ತಿನ್ನೋದಿಲ್ಲ. ಮತ್ತು ಆವಾಗಾವಾಗ, ಪ್ರತಿ ತಿಂಗ್ಳು, ಎರಡ್ ಸಲ ಅಥವಾ ಒಂದ್ ಸಲ, ಜನ್ರು ಒಂದು ದಿನ ಪೂರ್ತಿ ಊಟ ಇಲ್ದೇ ಇರೋದನ್ನ ಅಭ್ಯಾಸ ಮಾಡ್ತಿದ್ರು. ಇವು ಸರಳವಾದ ವಿಧಾನಗಳು, ಅದನ್ನ ನಿಯಂತ್ರಿಸೋದಿಕ್ಕೆ. ಅದಲ್ದೇ ಇನ್ನೂ ಹಲವಾರು ವಿಷ್ಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಮನಸ್ಸು ಮತ್ತು ಶರೀರ ಒಂದ್ ರೀತಿಯ ಆರಾಮದಲ್ಲಿದ್ರೆ, ಇವು ಬದುಕುಳಿಯಲ್ಲ. ನಿಮ್ಮ ಮನಸ್ಸು ಮತ್ತು ಶರೀರ ಒಂದ್ ರೀತಿಯ ತಿಕ್ಕಾಟದಲ್ಲಿದ್ರೆ, ಅವು ಬದುಕುಳಿಯುತ್ವೆ. ಅಷ್ಟೆ ಅಲ್ಲ, ಅವು ಏಳಿಗೆ ಹೊಂದುತ್ವೆ. ಸಮಾಜದಲ್ಲಿ ಅರಾಜಕತೆಯಿದ್ರೆ, ವ್ಯವಸ್ಥಿತವಾದ ಅಪರಾಧಗಳು ಹೆಚ್ಚಾಗುತ್ವೆ. ಸಮಾಜ ವ್ಯವಸ್ಥಿತವಾಗಿದ್ರೆ, ಅಲ್ಪ ಸ್ವಲ್ಪ ಅಪರಾಧಗಳು ನಡಿಯುತ್ವೆ. ಇದು ನಮ್ಮ ಶರೀರವ್ಯವಸ್ಥೆಯ ವಿಷ್ಯದಲ್ಲೂ ನಿಜ.