Main Centers
International Centers
India
USA
Wisdom
FILTERS:
SORT BY:
ನಿಮ್ಮ ದೇಹ-ಮನಸ್ಸುಗಳ ಈ ಸಂಕೀರ್ಣ ವ್ಯವಸ್ಥೆಯನ್ನು ಇಂಜಿನಿಯರಿಂಗ್ ಮಾಡಿ ಅದು ನಿಮ್ಮ ಪರವಾಗಿ ಕೆಲಸ ಮಾಡುವಂತೆ ಮಾಡಬೇಕು, ನಿಮ್ಮ ವಿರುದ್ಧವಾಗಲ್ಲ. ಅದುವೇ ಇನ್ನರ್ ಇಂಜಿನಿಯರಿಂಗ್.
ಯೋಗ ಎಂದರೆ ಐಕ್ಯತೆ. ನೀವದನ್ನು ಶಿಸ್ತಿನ ಮೂಲಕ ಕಂಡುಕೊಳ್ಳುತ್ತೀರೋ ಅಥವಾ ಭಕ್ತಿಯ ಮೂಲಕವೋ ಎಂಬುದು ನಿಮಗೆ ಬಿಟ್ಟಿದ್ದು.
ಧ್ಯಾನಲಿಂಗವು ದೈವೀಕತೆಯ ಅತ್ಯುನ್ನತ ಸಾಕಾರರೂಪ. ಅದೊಂದು ಜೀವಂತ ಗುರು. ಬೇರೆ ಯಾರೂ ಅಥವಾ ಯಾವುದೂ ಸ್ಪರ್ಶಿಸಲಾರದ ಆಯಾಮಗಳಲ್ಲಿ ಅದು ನಿಮ್ಮನ್ನು ಸ್ಪರ್ಶಿಸುತ್ತದೆ.
ನಿಮ್ಮ ದೇಹ, ಮನಸ್ಸು, ಮತ್ತು ಪ್ರಾಣಶಕ್ತಿಗಳನ್ನು ಸೂಕ್ತವಾಗಿ ಸಿದ್ಧಗೊಳಿಸಿದರೆ, ಕ್ರಮಬದ್ಧವಾಗಿ ಮಾಡುವ ಉಪವಾಸವು ಅಗಾಧ ಪ್ರಯೋಜನಗಳನ್ನು ತರಬಲ್ಲದು.
ಅಂತರಂಗದ ವಿಷಯಕ್ಕೆ ಬಂದಾಗ, ನಿಮ್ಮ ಪ್ರಜ್ಞೆಯು ಯಾವುದರ ಮೇಲಾದರೂ ಕೇಂದ್ರಿತವಾದರೆ, ಅಸ್ತಿತ್ವದಲ್ಲಿರುವ ಯಾವ ಶಕ್ತಿಯೂ ನೀವು ಅದನ್ನು ತಲುಪುವುದನ್ನು ತಡೆಯಲಾರದು.
ಪ್ರತಿದಿನ ಅಲ್ಲದಿದ್ದರೂ ತಿಂಗಳಿಗೆ ಒಮ್ಮೆಯಾದರೂ ಪರಿಶೀಲಿಸಿಕೊಳ್ಳಿ – ನಿಮ್ಮಲ್ಲಿ ರೂಪಾಂತರಣೆ ಆಗುತ್ತಿದೆಯೇ, ನೀವು ಉತ್ತಮ ಮನುಷ್ಯರಾಗುತ್ತಿದ್ದೀರಾ ಎಂದು.
ಧ್ಯಾನ ಎಂದರೆ, ಹೊರಗಿನ ಪರಿಸ್ಥಿತಿ ಏನೇ ಆಗಿರಲಿ, ನೀವು ನಿಮಗೆ ಬೇಕಿರುವ ಯಾವುದೇ ಅನುಭವವನ್ನು ಉಂಟುಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು. ಇಲ್ಲಿ ಕುಳಿತೇ ನೀವು ನಿಮ್ಮ ಜೀವವ್ಯವಸ್ಥೆಯನ್ನು ಆನಂದಭರಿತವಾಗಿಸಬಹುದು.
ನೀವು ಬದುಕನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುತ್ತಿದ್ದೀರೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಎಂಬುದು ನಿಮ್ಮ ಜೀವನದ ಸ್ವರೂಪ, ಅನುಭವ, ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತದೆ.
ಚಟುವಟಿಕೆ ಮತ್ತು ಅಭಿವ್ಯಕ್ತಿಯಲ್ಲಿ ಪ್ರತಿ ಮನುಷ್ಯನೂ ಭಿನ್ನವಾಗಿರಬಹುದು. ಆದರೆ ಮೂಲ ಜೀವಚೈತನ್ಯದ ನಿಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದೇ.
ಸದಾ ಯುವಕರಾಗಿರುವುದು ಎಂದರೆ ನೀವೆಂದಿಗೂ ‘ಜೀವನವೆಂದರೆ ಇಷ್ಟೆ’ ಎಂದು ನಿಮಗೆ ನೀವೇ ತೆರೆ ಎಳೆದುಕೊಳ್ಳುವುದಿಲ್ಲ – ನೀವೊಂದು ಮುಕ್ತ ಜೀವವಾಗಿರುತ್ತೀರಿ. ಸದಾ ಬೆಳೆಯಲು, ಕಲಿಯಲು, ಮತ್ತು ಜೀವನಕ್ಕೆ ಮುಕ್ತರಾಗಿರಲು ಸಿದ್ಧರಿರುತ್ತೀರಿ.
ಪರಸ್ಪರ ಕಾಳಜಿ ಮತ್ತು ಪೋಷಣೆಯ ಪರಿಸರವನ್ನು ನಿರ್ಮಿಸಿದರೆ ಮಾತ್ರ ಜನರು ಜೊತೆಯಲ್ಲಿ ಚೆನ್ನಾಗಿ ಬಾಳಬಲ್ಲರು, ಪರಸ್ಪರರ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದರಿಂದ ಅಲ್ಲ.
ಹೃದಯದಲ್ಲಿ ಒಳಗೂಡಿಸಿಕೊಳ್ಳುವ ಭಾವ ಇಲ್ಲದಿದ್ದರೆ, ಜೀವನದಲ್ಲಿ ಸಹಜವಾದ ಏಕತೆ ಇರುವುದಿಲ್ಲ. ಈ ಏಕತೆಯ ಕೊರತೆಯಿಂದಾಗಿ ಮನುಷ್ಯರು ಕೊನೆಯಿಲ್ಲದಂತೆ ನರಳುತ್ತಾರೆ.