ಶಿವನ ರೂಪಗಳು ಮಾನವರ ಮನಸ್ಸಿಗೆ ಊಹಿಸಲು ಸಾಧ್ಯವಾದ ಮತ್ತು ಸಾಧ್ಯವಾಗದ ಪ್ರತಿಯೊಂದು ಸಂಭಾವ್ಯ ಗುಣಗಳನ್ನೊಳಗೊಂಡಿರುವ ಹಲವು ರೂಪಗಳನ್ನು ಶಿವ ಹೊಂದಿದ್ದಾನೆ. ಅವುಗಳಲ್ಲಿ ಕೆಲವು ವಿಚಿತ್ರ ಮತ್ತು ಉಗ್ರ ರೂಪಗಳು. ಕೆಲವು ನಿಗೂಢವಾದವು. ಇನ್ನು ಕೆಲವು ಪ್ರೀತಿಯುತ ಮತ್ತು ಆಕರ್ಷಕವಾದವು. ಮುಗ್ಧ ಭೋಲೇನಾಥನಿಂದ ಭಯಂಕರ ಕಾಲಭೈರವನವರೆಗೂ, ಸುಂದರವಾದ ಸೋಮಸುಂದರನಿಂದ ಘೋರವಾದ ಅಘೋರ ರೂಪದವರೆಗೂ – ಶಿವ ಎಲ್ಲಾ ಸಾಧ್ಯತೆಗಳನ್ನೂ ಬರಮಾಡಿಕೊಳ್ಳುತ್ತಾನೆ, ಅದರೂ ಆ ರೂಪಗಳಿಂದ ನಿರ್ಲಿಪ್ತನಾಗಿರುತ್ತಾನೆ. ಇವುಗಳಲ್ಲಿ, ಐದು ಮೂಲಭೂತ ರೂಪಗಳಿವೆ. ಈ ಲೇಖನದಲ್ಲಿ, ಅವುಗಳು ಯಾವುವು ಮತ್ತು ...