ಪ್ರಸ್ತುತಿಗಳು

ಮಹಾಶಿವರಾತ್ರಿಯು ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸಲು ಮತ್ತು ಕಲಾರಸಿಕರಿಗೆ ಈ ಶಾಸ್ತ್ರೀಯ ಕಲೆಗಳನ್ನು ಆಸ್ವಾದಿಸಲು ಒಂದು ವೇದಿಕೆಯನ್ನೊದಗಿಸುತ್ತದೆ. ಇದು ದೇಶದ ಸಂಗೀತ ಮತ್ತು ನೃತ್ಯ ಪರಂಪರೆಯ ವೈಶಿಷ್ಟ್ಯತೆ, ಶುದ್ಧತೆ ಮತ್ತು ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಒಂದು ಪ್ರಯತ್ನವಾಗಿದೆ. ಕಲಾತ್ಮಕ ಪ್ರಸ್ತುತಿಗಳು, ಅದರ ಸೂಕ್ಷ್ಮತೆ ಮತ್ತು ಹುರುಪಿನಲ್ಲಿ, ಪ್ರಾಚೀನ ಭಾರತದ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಗಹನತೆ ಮತ್ತು ತೀವ್ರತೆಯನ್ನು ಹೊರಹೊಮ್ಮಿಸಿ, ಈ ಕಲಾಸಿರಿಯ ಸೌಂದರ್ಯವನ್ನು ಕಂಡುಕೊಳ್ಳಲು ಮತ್ತು ಅನುಭವಿಸಲು ಪ್ರಪಂಚದಾದ್ಯಂತದ ಜನರಿಗೆ ಅವಕಾಶವನ್ನೊದಗಿಸುತ್ತದೆ.

Amit-Trivedi

ಅಮಿತ್ ತ್ರಿವೇದಿ

ಅಮಿತ್ ತ್ರಿವೇದಿಯವರು ಭಾರತೀಯ ಚಲನಚಿತ್ರರಂಗದ ಸಂಗೀತ ಸಂಯೋಜಕರು, ಸಂಗೀತ ನಿರ್ದೇಶಕರು, ಗಾಯಕರು ಮತ್ತು ಗೀತಕಾರರು. ರಂಗಭೂಮಿ, ಸಂಗೀತ ಆಲ್ಬಮ್‌ಗಳು ಮತ್ತು ಜಾಹಿರಾತುಗಳಿಗೆ ಸಂಗೀತ ಸಂಯೋಜನೆಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು 2008 ರಲ್ಲಿ ಸಂಯೋಜಕರಾಗಿ ಚಲನಚಿತ್ರೋದ್ಯಮಕ್ಕೆ ಕಾಲಿಟ್ಟರು. ಅವರ ಗೀತಸಾಹಿತ್ಯವು ಯಾವುದರಿಂದಲೂ ಪ್ರಭಾವಿತವಾಗದೇ ದಿಟ್ಟವಾಗಿದ್ದರೂ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಜೀವನದ ವೈವಿಧ್ಯತೆಯನ್ನು ಸ್ಪಷ್ಟವಾಗಿ ನಿರೂಪಿಸುವಷ್ಟು ಸೂಕ್ಷ್ಮವಾಗಿರುತ್ತವೆ. ಅಮಿತ್ ತ್ರಿವೇದಿಯವರ ಸಂಗೀತ ಸಂಯೋಜನೆಯು ಪ್ರಾದೇಶಿಕ ಪ್ರಕಾರಗಳು, ಜಾಝ್, ಪಾಪ್, ಶಾಸ್ತ್ರೀಯ ಸಂಗೀತ ಮತ್ತು ಅನೇಕ ಇತರ ಶೈಲಿಗಳ ಸಾರಸಂಗ್ರಹವಾಗಿದೆ. 2010 ರ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಆರ್.ಡಿ. ಬರ್ಮನ್ ಪ್ರಶಸ್ತಿ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತ ಸಂಯೋಜನೆ ಪ್ರಶಸ್ತಿ, 2014 ರಿಂದ 2017 ರವರೆಗೆ ಸತತ ನಾಲ್ಕು ಬಾರಿ ಮಿರ್ಚಿ ಸಂಗೀತ ಪ್ರಶಸ್ತಿ ಮತ್ತು 2018 ರಲ್ಲಿ ಝೀ ಸಿನೆ ಪ್ರಶಸ್ತಿಯನ್ನು ಪಡೆದುಕೊಂಡಿರುವ ಅಮಿತ್ ತ್ರಿವೇದಿಯವರು ಹಲವಾರು ಪ್ರಕಾರಗಳನ್ನೊಳಗೊಂಡಿರುವ ಸಂಗೀತವನ್ನು ರಚಿಸುವುದನ್ನು ಮುಂದುವರೆಸಿದ್ದಾರೆ.

Hariharan

ಹರಿಹರನ್

ಭಾರತದ ಅಗ್ರಗಣ್ಯ ಗಝಲ್ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಹರಿಹರನ್-ರವರ ಸಂಗೀತ ಕ್ಷೇತ್ರದ ಸಾಧನೆಯು ಅತ್ಯದ್ಭುತವಾದದ್ದು. ಇವರ ಶೈಲಿಯು ಭಾರತೀಯ ಶಾಸ್ತ್ರೀಯ ಸಂಪ್ರದಾಯದಲ್ಲಿ ಬೇರೂರಿದ್ದರೂ, ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯನ್ನು ಸರಾಗವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಅಂತಸ್ಸತ್ವವನ್ನು ಎ.ಆರ್. ರೆಹಮಾನ್-ರವರು ಅನೇಕ ಚಲನಚಿತ್ರಗಳಲ್ಲಿ ಬಳಸಿಕೊಂಡಿದ್ದಾರೆ. ಲೆಸ್ಲೀ ಲೂಯಿಸ್ ಅವರೊಂದಿಗಿನ ಇವರ ಬ್ಯಾಂಡ್-ಆದ ಕಲೋನಿಯಲ್ ಕಸಿನ್ಸ್ ತಮ್ಮ ಚೊಚ್ಚಲ ಆಲ್ಬಂಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 1998 ಮತ್ತು 2009 ರಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಎರಡು ಬಾರಿ, ಮತ್ತು 2004 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ಅನೇಕ ಇತರ ಪ್ರಶಸ್ತಿಗಳನ್ನು ತಮ್ಮದಾಗಿರಿಸಿಕೊಂಡಿದ್ದಾರೆ. ಇವರ ಸಂಗೀತಕ್ಕೆ ಸಂಗೀತ ಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನವಿದೆ.

Karthik

ಕಾರ್ತಿಕ್

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಪಡೆದ ಕಾರ್ತಿಕ್, ಎ.ಆರ್. ರೆಹಮಾನ್, ಇಳಯರಾಜ, ಮತ್ತು ಮಣಿಶರ್ಮ ಸೇರಿದಂತೆ ಅನೇಕ ಜನಪ್ರಿಯ ಸಂಗೀತ ನಿರ್ದೇಶಕರಿಗಾಗಿ ಹಾಡಿದ್ದಾರೆ. ಇವರು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಹಾಡುಗಳಿಗೆ ತಮ್ಮ ಕಂಠದಾನ ಮಾಡಿರುವ ಸೃಜನಶೀಲ ಬಹುಭಾಷಾ ಗಾಯಕ. ತಮ್ಮಲ್ಲೊಂದು ಹೊಸತನವನ್ನು ಕಂಡುಕೊಳ್ಳುವುದಕ್ಕೆ ಹಾತೊರೆವ ಇವರು, ಪ್ರಪಂಚದ ಹಲವಾರು ಬಗೆಯ ಸಂಗೀತ ಪ್ರಕಾರಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಅರ್ಕ ಎಂಬ ಬ್ಯಾಂಡಿನ ಪ್ರಮುಖ ಗಾಯಕರಾದ ಇವರ ಪ್ರಸ್ತುತಿಗಳು ಅನೇಕ ಶೈಲಿಗಳ ಸಮ್ಮಿಲನವಾಗಿರುತ್ತದೆ. ಒಂಡ್ರಾಗಾ ಒರಿಜಿನಲ್ಸ್-ನೊಂದಿಗೆ ಇಂಡಿಪೆಂಡೆಂಟ್ ಸಂಗೀತದಲ್ಲಿ ದಾಪುಗಾಲಿಡುತ್ತ ಇವರು ತಮ್ಮ ಸಂಗೀತ ಪಯಣವನ್ನು ಮುಂದುವರೆಸುತ್ತಿದ್ದಾರೆ.

detail-seperator-icon

ಕಳೆದ ವರ್ಷದ ಪ್ರಸ್ತುತಿಗಳು

Sonu Nigam at Mahashivratri 2018 Celebrations at Isha Yoga Center

ಸೋನು ನಿಗಮ್ (ವಿಶೇಷ ಪ್ರಸ್ತುತಿ)

ಸೋನು ನಿಗಮ್-ರವರು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯನದ ಮೂಲಕ ಜನಪ್ರಿಯತೆಯನ್ನು ಪಡೆದ ಪ್ರಮುಖ ಭಾರತೀಯ ಗಾಯಕ. ಅಸಾಧಾರಣ ಮಧುರವಾದ ಧ್ವನಿ ಹೊಂದಿರುವ ಮತ್ತು ಬಹುಮುಖ ಪ್ರತಿಭೆಯ ಸೋನು ನಿಗಮ್ ಇತ್ತೀಚಿನ ದಿನಗಳಲ್ಲಿನ ಅತ್ಯುತ್ತಮ ಗಾಯಕರಲ್ಲಿ ಒಬ್ಬರೆಂದು ಹೇಳಬಹುದು. ಸಂಗೀತ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಸಾಧನೆಗಾಗಿ ಸ್ವರಾಲಯ ಯೇಸುದಾಸ್ ಪ್ರಶಸ್ತಿ ಮತ್ತು ಕಲ್ ಹೋ ನ ಹೋ ಚಿತ್ರದಲ್ಲಿನ ಅವರ ಹಾಡಿಗೆ ಅತ್ಯುತ್ತಮ ಚಲನಚಿತ್ರ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಅವರಿಗೆ ಸಂದ ಕೆಲವು ಪ್ರಶಸ್ತಿಗಳು.

Daler Mehndi at Mahashivratri 2018 Celebrations at Isha Yoga Center

ದಲೇರ್ ಮೆಹಂದಿ

ದಲೇರ್ ಸಿಂಗ್ ಮೆಹೆಂದಿ ಪ್ರಸಿದ್ಧ ಕಲೆಗಾರ, ಮನರಂಜನೆಕಾರ ಮತ್ತು ಚಲನಚಿತ್ರ ಉದ್ಯಮದಲ್ಲಿ ಖ್ಯಾತಿ ಪಡೆದ ಸಂಗೀತಗಾರ. ಸಂಗೀತಗಾರರ ಕುಟುಂಬದಲ್ಲಿ ಬೆಳೆದ ಇವರು, ಭಾರತೀಯ ಶಾಸ್ತ್ರೀಯ ಸಂಗೀತದ ವಿವಿಧ ಪ್ರಕಾರಗಳಾದ ರಾಗಗಳು ಮತ್ತು ಶಬದ್ ವಿಧಾನವನ್ನು ಎಳೆಯ ವಯಸ್ಸಿನಲ್ಲೇ ಅಭ್ಯಸಿಸಲು ಪ್ರಾರಂಭಿಸಿದರು. ವಿಶ್ವ-ಪ್ರಸಿದ್ಧಿ ಪಡೆದ Internet ವಿದ್ಯಮಾನವಾದ ಟುನಕ್ ಟುನಕ್ ಟುನ್ ಮತ್ತು ಬೋಲೊ ತ ರಾ ರಾ ಸೇರಿದಂತೆ ಅವರು ಹಲವಾರು ಯಶಸ್ವೀ ಹಾಡುಗಳನ್ನು ಹಾಡಿದ್ದಾರೆ.

Sean Roldan and Friends at Mahashivratri 2018 Celebrations at Isha Yoga Center

ಶಾನ್ ರೋಲ್ಡಾನ್ ಅಂಡ್ ಫ್ರೆಂಡ್ಸ್

ಶಾನ್ ರೊಲ್ಡಾನ್ ಎಂದು ಲೋಕಪ್ರಿಯರಾಗಿರುವ ರಾಘವೇಂದ್ರರವರು, ತಮಿಳು ಚಲನಚಿತ್ರೋದ್ಯದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿದ್ದಾರೆ. ಅವರ ಚೊಚ್ಚಲ ಸಂಯೋಜನೆಯು ಅವರಿಗೆ ಎಲ್ಲಾ ಕಡೆಗಳಿಂದ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ತಂದುಕೊಟ್ಟಿತು. ಅವರು ಕರ್ನಾಟಕ ಸಂಗೀತ, ಸ್ವತಂತ್ರ ಧ್ವನಿಸುರಳಿಗಳು ಮತ್ತು ಸಿನಿಮಾ ಧ್ವನಿಸುರಳಿಗಳಲ್ಲಿ ಮಾತ್ರವಲ್ಲದೇ ಸ್ವತಂತ್ರವಾಗಿ ತಮಿಳು ಸಂಗೀತ ಕ್ಷೇತ್ರದಲ್ಲಿ ತಮ್ಮ ಬ್ಯಾಂಡ್, ಶಾನ್ ರೊಲ್ಡನ್ ಮತ್ತು ಫ್ರೆಂಡ್ಸ್ ಜೊತೆಗೆ ಕೆಲಸ ಮಾಡಿದ್ದಾರೆ.

detail-seperator-icon