’ಆದಿಯೋಗಿ ಶಿವ’ ನ ಹಾಡುಗಳು
’ಆದಿಯೋಗಿ ಶಿವ’ ನ ಹಾಡುಗಳನ್ನು ಡೌನ್‍ಲೋಡ್ ಮಾಡಿಕೊಳ್ಳಿ
“ಶಿವನನ್ನು ನಂಬಬೇಡಿ” ಎಂಬ ಅರ್ಥವಿರುವ ಈ ಹಾಡು, ’ಆದಿಯೋಗಿ ಶಿವ’ನ ಮೇಲೆ ಸದ್ಗುರುಗಳು ಬರೆದ ಕವಿತೆಯೊಂದರಿಂದ ಪ್ರೇರಿತವಾಗಿದೆ.
ಸುಮಾರು ಒಂದು ಶತಮಾನದ ಹಿಂದೆ ಈ ಭೂಮಿಯ ಮೇಲೆ ನಡೆದಾಡಿದ ಮಹಾನ್ ಯೋಗಿ – ಸದ್ಗುರು ಶ್ರೀ ಬ್ರಹ್ಮ ಅವರ ಭಕ್ತಿಯ ಹೊನಲು ಇದಾಗಿದ್ದು, ಆದಿಗುರುವಿನ ಬಗ್ಗೆ ಅವರ ಸಂಪೂರ್ಣ ಶರಣಾಗತಿಯನ್ನು ಈ ಹಾಡು ಸೆರೆಹಿಡಿಯುತ್ತದೆ.
ಮಹಾಶಿವರಾತ್ರಿಯ ಉತ್ಸಾಹಕ್ಕೆ ನಿಮ್ಮನ್ನು ಅಣಿಗೊಳಿಸುವ ಹಾಡು ಇಲ್ಲಿದೆ. ಆಲಿಸಿ ಮತ್ತು ಆನಂದದಿಂದ ಕುಣಿದು ತೇಲಾಡಿ.
ಮೂರು ಶಕ್ತಿಗಳು. ಮೂರು ಗುಣಗಳು. ಮೂರು ದೇವತೆಗಳು. ಮೂವರ ಈ ಒಂದು ಕೂಟ – ಮೇಲ್ನೋಟಕ್ಕೆ ಪ್ರತ್ಯೇಕವಾಗಿ ಕಂಡರೂ ಸಹ, ಸ್ವಲ್ಪ ಆಳಕ್ಕೆ ಹೋದರೆ, ಸೀಮಾ-ರಹಿತವಾದ ಒಂದು ಸಂಗಮವನ್ನು ನೀವು ಕಾಣುತ್ತೀರಿ. ತ್ರಿಕೂಟ ಮತ್ತು ಏಕತೆಯ ನಡುವಿನ ಅಂತರವನ್ನು ನಿವಾರಿಸಿದಾಗ, ನೀವು ಮಹಾದೇವನನ್ನು ಕಾಣುತ್ತೀರಿ.
ಗುರು ಪಾದುಕ ಸ್ತೋತ್ರವು “ಗುರುಗಳ ಪಾದರಕ್ಷೆ”ಗಳನ್ನು ವೈಭವೀಕರಿಸುವ ಅತ್ಯಂತ ಶಕ್ತಿಯುತವಾದ ಪಠಣವಾಗಿದ್ದು, “ಜೀವನದ ಅಂತ್ಯವಿಲ್ಲದ ಸಾಗರವನ್ನು ದಾಟಲು ಸಹಾಯ ಮಾಡುವ ದೋಣಿ” ಎಂದು ಸಾಂಕೇತಿಕವಾಗಿ ಇದನ್ನು ನಿರೂಪಿಸಲಾಗಿದೆ. ಈ ಪಠಣವು ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ನಿಮಗೆ ಸಹಾಯ ಮಾಡುತ್ತದೆ.
ಮೊಟ್ಟಮೊದಲ ಯೋಗಿಯಾದ ಆದಿಯೋಗಿ-ಶಿವನ ಸಂಗೀತವಾದ್ಯ ಡಮರು. ಅವನು ಆದಿ ಗುರು ಅಥವಾ ಮೊದಲ ಗುರು. ಗುರು ಪೂರ್ಣಿಮೆಯ ದಿನದಂದು ಅವನು ತನ್ನ ಏಳು ಶಿಷ್ಯಂದಿರಿಗೆ ಯೋಗದ ವಿಜ್ಞಾನವನ್ನು ನೀಡಲು ನಿರ್ಧರಿಸಿದನು ಎಂದು ಯೋಗ ಸಿದ್ಧಾಂತ ಹೇಳುತ್ತದೆ, ಮತ್ತು ಅವರನ್ನು ನಾವು ಸಪ್ತ ಋಷಿಗಳಾಗಿ ಆದರಿಸುತ್ತೇವೆ.
ಆದಿಶಂಕರರ ಈ ರಚನೆಯನ್ನು ಸೌಂಡ್ಸ್ ಆಫ್ ಈಶದವರು ತಮ್ಮ ಮಂತ್ರ ಸರಣಿಯ ಭಾಗವಾಗಿ ಈಶದ ಸ್ವಂತ ಸಂಗೀತಕ್ಕೆ ಹೊಂದಿಸಿದ್ದಾರೆ. ಸದ್ಗುರುಗಳೊಂದಿಗಿನ ಗುರು ಪೂರ್ಣಿಮ ಸತ್ಸಂಗದ ಸಮಯದಲ್ಲಿ ಇದನ್ನು ಮೊದಲು ಪ್ರದರ್ಶಿಸಲಾಗಿತ್ತು.
ಈ ಪಠಣವು ಶಿವನ ಸೌಮ್ಯ ಸ್ವರೂಪಗಳೊಂದಿಗೆ ಸಂಬಂಧವನ್ನು ಹೊಂದಿದೆ. ಅವನ ಉಗ್ರ ಮತ್ತು ಹುಚ್ಚು ರೂಪಗಳಿಗೆ ವ್ಯತಿರಿಕ್ತವಾಗಿ, ಶಂಭೋ ಎನ್ನುವುದು ಶಿವನ ಮೃದುವಾದ, ಸುಂದರವಾದ ರೂಪವಾಗಿದೆ. ನಿಮ್ಮ ಮಿತಿಗಳನ್ನು ಮೀರಿ ಬೆಳೆದು ನಿಮ್ಮನ್ನು ನೀವು ತೆರೆದುಕೊಳ್ಳಲು ಇದೊಂದು ಕೀಲಿಕೈಯಾಗಬಹುದು.
ದಕ್ಷಿಣಾಯನ ಅಥವಾ ಬೇಸಿಗೆಯ ಅಯನ ಸಂಕ್ರಾಂತಿಯ ಸಂದರ್ಭದಲ್ಲಿ ಆದಿಯೋಗಿ ತನ್ನ ಏಳು ಶಿಷ್ಯಂದಿರಿಗೆ ಯೋಗವನ್ನು ಪ್ರಸಾರಣ ಮಾಡುವ ಸಲುವಾಗಿ ಆದಿಗುರುವಾಗಲು ನಿಶ್ಚಯಿಸಿದ ಕಾರಣ ಇದೊಂದು ಮಹತ್ವದ ಸಮಯವಾಗಿದೆ, ಮತ್ತು ಸೌಂಡ್ಸ್ ಆಫ್ ಈಶದವರು ಇದನ್ನು ಪ್ರತಿಬಿಂಬಿಸಲು ಈ ಹಾಡನ್ನು ಸಂಯೋಜಿಸಿದ್ದಾರೆ.