ಯಕ್ಷ – ಸಂಗೀತ ಮತ್ತು ನೃತ್ಯದ ಹರ್ಷೋಲ್ಲಾಸಭರಿತ ಉತ್ಸವ
ಮಾರ್ಚಿ 1-3, 2019 (ಮಹಾಶಿವರಾತ್ರಿಯ ಮುನ್ನ) ಈಶ ಯೋಗ ಕೇಂದ್ರದಲ್ಲಿ
ಸಾವಿರಾರು ವರ್ಷಗಳ ಕಾಲ ವಿಕಸನಗೊಂಡಿರುವ ಭಾರತದ ವಿವಿಧ ಲಲಿತಕಲಾ ಪ್ರಕಾರಗಳು, ಕೇವಲ ಈ ನೆಲದ ವೈವಿಧ್ಯಮಯ ಸಂಸ್ಕೃತಿಯ ಪ್ರತಿಫಲನವಾಗಿರದೇ, ಆಧ್ಯಾತ್ಮಿಕ ಸ್ಫೂರ್ತಿಯ ಆಗರವೂ ಆಗಿದೆ. ಹಲವಾರು ತಲೆಮಾರುಗಳ ಕಾಲ ಇವುಗಳು ತಮ್ಮ ಕಲಾಸಿರಿಯಿಂದ ಈ ದೇಶವನ್ನು ಶ್ರೀಮಂತವಾಗಿಸಿದ್ದವು, ಆದರೀಗ ಇವುಗಳು ಬಹುಬೇಗ ನಮ್ಮ ಜೀವನದ ಒಂದು ಕಳೆದುಹೋದ ಆಯಾಮವಾಗುತ್ತಿವೆ. ನಮ್ಮ ದೇಶದ ಪ್ರದರ್ಶನ ಕಲೆಗಳ ವೈಶಿಷ್ಟತೆ, ಶುದ್ಧತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ, ಈಶ ಫೌಂಡೇಶನ್ ಹೆಸರಾಂತ ಕಲಾವಿದರ ಪ್ರದರ್ಶನದೊಂದಿಗೆ ವಾರ್ಷಿಕವಾಗಿ, “ಯಕ್ಷ” ಎಂಬ ಮೂರು ದಿನದ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವಕ್ಕೆ ಭಾರತದ ಪುರಾಣಗಳಲ್ಲಿ ಉಲ್ಲೇಖವಾಗಿರುವ ದೇವಲೋಕದ ವಾಸಿಯಾದ “ಯಕ್ಷ”ನ ಹೆಸರಿಡಲಾಗಿದೆ. ‘ಯಕ್ಷ’ವು ಮಹಾನ್ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುವ ಮತ್ತು ಕಲಾರಸಿಕರಿಗೆ ಈ ಪ್ರಾಚೀನ ಕಲೆಗಳನ್ನು ಆಸ್ವಾದಿಸುವ ವೇದಿಕೆಯನ್ನೊದಗಿಸುತ್ತದೆ.
ಭಾರತದ ಭವ್ಯ ಪ್ರಾಚೀನ ಸಂಸ್ಕೃತಿಯ ಪರಂಪರೆಯಲ್ಲಿ ತಲ್ಲೀನವಾಗಲು ಮತ್ತು ಆಳವಾದ ಅನುಭವವನ್ನು ಹೊಂದಲು ನಿಮ್ಮನ್ನು ನಾವು ಆಮಂತ್ರಿಸುತ್ತಿದ್ದೇವೆ.

ಪ್ರಸ್ತುತಿಗಳು
ಯಕ್ಷ, ಈಶ ಫೌಂಡೇಶನ್ನಿಂದ ವಾರ್ಷಿಕವಾಗಿ ಆಯೋಜಿಸಲ್ಪಡುವ ಸಂಗೀತ ಮತ್ತು ನೃತ್ಯದ ಅದ್ಭುತ ಮತ್ತು ವರ್ಣರಂಜಿತ ರಸದೌತಣದ ಕಾರ್ಯಕ್ರಮ. ಫೆಬ್ರವರಿ / ಮಾರ್ಚಿಯಲ್ಲಿ ಆಚರಿಸಲ್ಪಡುವ ಯಕ್ಷ ಕಾರ್ಯಕ್ರಮದಲ್ಲಿ, ಭಾರತದ ಕೆಲ ಮಹಾನ್ ಕಲಾವಿದರು ಪಾಲ್ಗೊಳ್ಳುತ್ತಾರೆ ಮತ್ತು ಈ ಕಾರ್ಯಕ್ರಮವು ಸಾವಿರಾರು ಉತ್ಸಾಹಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ಯಕ್ಷ 2019-ರಲ್ಲಿ ಪಾಲ್ಗೊಳ್ಳುವ ಕಲಾವಿದರ ಹೆಸರಗಳನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ.

ಬನ್ನಿ, ಯಕ್ಷ 2019-ರಲ್ಲಿ ಭಾಗಿಯಾಗಿ
ಈಶ ಯೋಗ ಕೇಂದ್ರ, ಕೊಯಮತ್ತೂರು
ಪ್ರವೇಶ ಉಚಿತ. ಎಲ್ಲರಿಗೂ ಆದರದ ಸ್ವಾಗತ
ಸಂಜೆ 6:50 ರಿಂದ ರಾತ್ರಿ 8:30 ವರಗೆ (ಕಾರ್ಯಕ್ರಮ ಆರಂಭವಾಗುವ 10 ನಿಮಿಷಕ್ಕೆ ಮುನ್ನ ಆಸೀನರಾಗಿರಿ)
ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:
ಫೋನ್: 83000 83111 ಅಥವಾ ಇಮೇಲ್: info@mahashivarathri.org