ಹಿಂದಿನ ವರ್ಷಗಳ ಪ್ರಸಾರಗಳನ್ನು ವೀಕ್ಷಿಸಿ
21 February, 6pm - 6am IST
ಈ ನೇರ ಪ್ರಸಾರವನ್ನು ನಿಮ್ಮ ಭಾಷೆಯಲ್ಲಿ ವೀಕ್ಷಿಸಿ
ಕಾರ್ಯಕ್ರಮದ ಸಂಪೂರ್ಣ ವೇಳಾಪಟ್ಟಿ ನೋಡಿ
- 6:00 pm
-
6:00 pm Pancha Bhuta Aradhana
- ಸಂಜೆ 6:35
-
ಸಂಜೆ 6:35 Bhairavi Maha Yatra
- 7:00 pm
-
7:00 pm Adiyogi Divya Darshanam
- 7:00 pm (onwards)
-
7:00 pm (onwards) Maha Annadhanam
- 11:00 pm to 1:25 am
-
11:00 pm to 1:25 am Sadhguru Discourses and Midnight Meditation
- 3:25 to 4:20 am
-
3:25 to 4:20 am Sadhguru Meditation at Brahma Muhurtam
-
Performances Nightlong
ಮಹಾ ಅನ್ನದಾನಕ್ಕೆ ಕಾಣಿಕೆ ನೀಡಿ
ಇಡೀ ರಾತ್ರಿ ನಡೆಯುವ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ಬರುವ ಲಕ್ಷಾಂತರ ಭಕ್ತರಿಗೆ ಈಶ ಯೋಗ ಕೇಂದ್ರದಲ್ಲಿ ಅನ್ನದಾನವನ್ನು ಮಾಡಲಾಗುತ್ತದೆ. ಈ ಮಂಗಳಕರ ಸುಸಂದರ್ಭದಲ್ಲಿ ನೆರೆವೇರಿಸಲಾಗುವ ಅನ್ನದಾನಕ್ಕೆ ಕಾಣಿಕೆ ಸಲ್ಲಿಸಲು ಈಶ ಫೌಂಡೇಶನ್ ನಿಮಗೊಂದು ಸದವಕಾಶವನ್ನು ನೀಡುತ್ತಿದೆ.
ಮಧ್ಯರಾತ್ರಿಯ ಧ್ಯಾನ
ಮಧ್ಯರಾತ್ರಿಯ ಹೊತ್ತಿಗೆ ಸರಿಯಾಗಿ ಸದ್ಗುರುಗಳು ನೆರೆದಿರುವ ಜನಸಮೂಹವನ್ನು ಶಕ್ತಿಯುತ ಧ್ಯಾನಸ್ಥಿತಿಗೆ ಕರೆದೊಯ್ಯುತ್ತಾರೆ. ಇದು ಮಹಾಶಿವರಾತ್ರಿಯ ಅತ್ಯಂತ ಕಾತರದಿಂದ ಎದುರುನೋಡಲಾಗುವ ಕಾರ್ಯಕ್ರಮ.
ನಿಮ್ಮ ಸಮಯವಲಯದಲ್ಲಿ ಮಧ್ಯರಾತ್ರಿಯ ಧ್ಯಾನವನ್ನು ಮಾಡಿ
ಮನೆಯಲ್ಲಿ ಮಹಾಶಿವರಾತ್ರಿ
ಮಹಾಶಿವರಾತ್ರಿಯಂದು ಈಶ ಯೋಗ ಕೇಂದ್ರದಲ್ಲಿ ಹಾಜರಿರಲು ಸಾಧ್ಯವಾಗದವರು, ಈ ರಾತ್ರಿಯ ಪ್ರಯೋಜನವನ್ನು ಕೆಳಕಂಡ ವಿಧಾನದಲ್ಲಿ ಪಡೆದುಕೊಳ್ಳಬಹುದು:
ವೆಬ್ ನೇರ ಪ್ರಸಾರ: ಸಾಮಾನ್ಯ ಪ್ರಶ್ನೆಗಳು
ನಾನು ನನ್ನ ಸ್ಥಳದ ಅಥವಾ ಭಾರತದ ಸಮಯ ವಲಯವನ್ನು ಅನುಸರಿಸಬೇಕೇ? ಉದಾಹರಣೆಗೆ, ಮಧ್ಯರಾತ್ರಿಯ ಧ್ಯಾನವನ್ನು ಭಾರತದ ಮಧ್ಯರಾತ್ರಿ ಅಥವಾ ನನ್ನ ಸಮಯ ವಲಯದನುಸಾರವಾಗಿ ಮಾಡಬೇಕೇ?
ದಯವಿಟ್ಟು ನಿಮ್ಮ ಸಮಯವಲಯದ ಸಮಯವನ್ನು ಅನುಸರಿಸಿ. ಉದಾಹರಣೆಗೆ, ಮಧ್ಯರಾತ್ರಿಯ ಧ್ಯಾನವನ್ನು ನಿಮ್ಮ ಸಮಯವಲಯದ ಮಧ್ಯರಾತ್ರಿಯಲ್ಲಿ ಮಾಡಬೇಕು.
ವೆಬ್ ಪ್ರಸಾರವು ಅನಿರೀಕ್ಷಿತವಾಗಿ ನಿಂತುಹೋಯಿತು. ನಾನೇನು ಮಾಡಬೇಕು?
ನಾವು ಯೂಟ್ಯೂಬ್ ನೇರ ಪ್ರಸಾರವನ್ನು ಬಳಸುತ್ತಿದ್ದೇವೆ. ಮೊಬೈಲ್ ಅಥವಾ ಡೆಸ್ಕ್-ಟಾಪ್ ಸಾಧನಗಳಲ್ಲಿ ಇದನ್ನು ವೀಕ್ಷಿಸುವುದರಲ್ಲಿ ಯಾವುದೇ ಸಮಸ್ಯೆಗಳಿರಬಾರದು. ಹಾಗೊಂದು ವೇಳೆ ನಿಮಗೆ ಸಮಸ್ಯೆಯೇನಾದರೂ ಎದುರಾದರೆ, ಅದು ನಿಮ್ಮ ಕಡೆಯಲ್ಲಿನ ನೆಟ್ವರ್ಕ್ ಅಥವಾ ಬ್ರೌಸರ್-ನ ಸಮಸ್ಯೆಯಾಗಿರಬಹುದು. ಕೆಳಗಿನ ಉಪಾಯಗಳು ಸಮಸ್ಯೆಯನ್ನು ಪರಿಹರಿಸಬಹುದು:
1.ನಿಮ್ಮ ಬ್ರೌಸರ್-ಅನ್ನು ರಿಫ್ರೆಶ್ ಮಾಡಿ (ರಿಫ್ರೆಶ್ ಬಟನ್ ಅಥವಾ F5 ಕ್ಲಿಕ್ ಮಾಡಿ)
2. ವೆಬ್ ಪ್ರಸಾರವನ್ನು ಬೇರೆ ಬ್ರೌಸರ್-ನಲ್ಲಿ ವೀಕ್ಷಿಸಲು ಪ್ರಯತ್ನಿಸಿ. ಫೈರ್ಫಾಕ್ಸ್, ಕ್ರೋಮ್ ಅಥವಾ ಸಫಾರಿ ಬ್ರೌಸರ್-ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇತ್ತೀಚಿನ ಬ್ರೌಸರ್ ಆವೃತ್ತಿಯನ್ನು ಪಡೆಯಲು ಪ್ರಯತ್ನಿಸಿ.
3.ನಿಮ್ಮ ಇಂಟರ್ನೆಟ್ ಸಂಪರ್ಕವು ಕಾರ್ಯನಿರ್ವಹಿಸುತ್ತಿದೆ ಮತ್ತದು 512kbps ಕನಿಷ್ಠ ವೇಗವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.
ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ, ದಯವಿಟ್ಟು ಪುಟದ ಕೆಳಗಿನ ಬಲಭಾಗದಲ್ಲಿರುವ ಚಾಟ್ ವಿಜೆಟ್ ಬಳಸಿ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.
ನಾನು ಈ ಕಾರ್ಯಕ್ರವನ್ನು ನೇರವಾಗಿ ವೀಕ್ಷಿಸಬಹುದಾದ ಇತರ ರೀತಿಗಳು ಯಾವುವು?
ಯೂಟ್ಯೂಬ್ ಮತ್ತು ಫೇಸ್ಬುಕ್-ನಲ್ಲಿ ನಾವು ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುತ್ತೇವೆ. ಈ ಕಾರ್ಯಕ್ರಮವು ಅನೇಕ ಟಿವಿ ಚಾನಲ್-ಗಳಲ್ಲಿಯೂ ಸಹ ಲಭ್ಯವಿದೆ.
ವೆಬ್ ನೇರ ಪ್ರಸಾರ ಯಾವ ಯಾವ ಭಾಷೆಗಳಲ್ಲಿ ಲಭ್ಯವಿದೆ?
ವೆಬ್ ನೇರ ಪ್ರಸಾರ ಈ ಭಾಷೆಗಳಲ್ಲಿ ಲಭ್ಯವಿದೆ
1. ಹಿಂದಿ + ಇಂಗ್ಲೀಷ್
2. ತಮಿಳು + ಇಂಗ್ಲೀಷ್
3. ಕನ್ನಡ + ಇಂಗ್ಲೀಷ್
ನನ್ನ ಸಮಯವಲಯದ ಮಧ್ಯರಾತ್ರಿಯಲ್ಲಿ ಮಧ್ಯರಾತ್ರಿ ಧ್ಯಾನ ಮಾಡಬಹುದೇ?
ನಿಮ್ಮ ಸ್ವಂತ ಸಮಯ ವಲಯದಲ್ಲಿಯೇ ಮಧ್ಯರಾತ್ರಿಯ ಧ್ಯಾನವನ್ನು ಮಾಡಬೇಕೆಂದು ಸದ್ಗುರು ಸೂಚಿಸಿದ್ದಾರೆ (ಮಧ್ಯರಾತ್ರಿಗಿಂತ 20 ನಿಮಿಷಗಳ ಮುಂಚಿತವಾಗಿ ಪ್ರಾರಂಭಿಸಿ).
ನಾನು ಭಾರತದಲ್ಲಿಲ್ಲ. ನಾನು ಇದನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬೇಕೇ ಅಥವಾ ನನ್ನ ಸ್ವಂತ ಸಮಯ ವಲಯದಲ್ಲಿ ವೀಕ್ಷಿಸಬೇಕೇ?
ಭಾರತದ ಹೊರಗಿರುವವರು ದಯವಿಟ್ಟು ವಿಳಂಬಿತ ವೆಬ್ ಪ್ರಸಾರವನ್ನು ನಿಮ್ಮ ಸಮಯವಲಯದಲ್ಲಿ ವೀಕ್ಷಿಸಬೇಕು.
ಈ ವೆಬ್ ಪ್ರಸಾರ ಹೆಚ್ ಡಿ (ಹೈ ಡೆಫನಿಶನ್)ನಲ್ಲಿದೆಯೆ?
ಹೌದು. ಈ ಪುಟದಲ್ಲಿನ ಯುಟ್ಯೂಬ್ ವೆಬ್ ಪ್ರಸಾರ ಹೈ ಡೆಫಿನಿಷನ್ (720p) ನಲ್ಲಿ ಲಭ್ಯವಿದೆ.
ಕಾರ್ಯಕ್ರಮದ ವೆಬ್ ನೇರ ಪ್ರಸಾರದ ಬಳಿಕ ಇದರ ರೆಕಾರ್ಡಿಂಗ್ ಲಭ್ಯವಿರುತ್ತದೆಯೇ?
ರೆಕಾರ್ಡ್ ಮಾಡಲಾದ ಕಾರ್ಯಕ್ರಮವು ಸೀಮಿತ ಸಮಯಕ್ಕೆ ಲಭ್ಯವಿರುತ್ತದೆ. ಕಾರ್ಯಕ್ರಮವು ನಡೆಯುತ್ತಿರುವಾಗ, ನಾವು ಪೂರ್ಣಗೊಂಡ ಪ್ರಸ್ತುತಿಗಳು ರೆಕಾರ್ಡ್ ಆದ ಆವೃತ್ತಿಗಳನ್ನು ಕೂಡಾ ಒದಗಿಸುತ್ತಿದ್ದೇವೆ. ರೆಕಾರ್ಡ್ ಮಾಡಲಾದ ಪ್ರಸ್ತುತಿಗಳು ಯುಟ್ಯೂಬ್-ನ ಪ್ಲೇ-ಲಿಸ್ಟಾಗಿಯೂ ಲಭ್ಯವಿರುತ್ತದೆ. ಕಾರ್ಯಕ್ರಮ ನಡೆಯುತ್ತಿರುವಾಗ ನೀವಿದನ್ನು ವೀಕ್ಷಿಸಲು ಬಯಸಿದರೆ, ಪ್ಲೇ-ಲಿಸ್ಟ್-ನಲ್ಲಿನ ಹೊಸ ವೀಡಿಯೊಗಳನ್ನು ವೀಕ್ಷಿಸಲು ನಿಯತಕಾಲಿಕವಾಗಿ ಪುಟವನ್ನು ರಿಫ್ರೆಶ್ ಮಾಡಬೇಕಾಗಬಹುದು.</p
ಈ ಪ್ರಶ್ನೆಗಳ ಪಟ್ಟಿಯಲ್ಲಿರದ ಒಂದು ಪ್ರಶ್ನೆಗೆ ನನಗೆ ಉತ್ತರ ಬೇಕಿದೆ. ನಾನೇನು ಮಾಡಲಿ?
ಪ್ರತಿ ಪುಟದ ಕೆಳಗಿನ ಬಲಭಾಗದಲ್ಲಿ ಲೈವ್ ಚಾಟ್ ವಿಜೆಟ್ ಇದೆ. ನೇರ ಪ್ರಸಾರದ ಸಮಯದಲ್ಲಿ, ನಿಮಗೆ ಎದುರಾಗಬಹುದಾದ ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ನಿಮಗೆ ಬೇರೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ, ದಯವಿಟ್ಟು info@mahashivarathri.org-ಗೆ ಇಮೇಲ್ ಮಾಡಿ.