logo
logo

ಶಿವ ಮತ್ತು ಗಂಗೆ - ಗಾಥೆ ಮತ್ತು ಅದರ ಅರ್ಥ

ಸದ್ಗುರುಗಳು ಶಿವನ ಜಟೆಯಿಂದ ಹರಿಯುವ ಗಂಗೆಯ ಗಾಥೆಯನ್ನು ಮತ್ತು ಈ ಕಥೆಯು ಏನನ್ನು ತಿಳಿಸಲು ಯತ್ನಿಸುತ್ತಿದೆ ಎಂಬುದನ್ನು ತಾತ್ವಿಕವಾಗಿ ತೋರ್ಪಡಿಸುತ್ತಿದ್ದಾರೆ.

ಶಿವ ಮತ್ತು ಗಂಗೆ - ಗಾಥೆ ಮತ್ತು ಅದರ ಅರ್ಥ

ಸದ್ಗುರು: ನಿಮಗೆ ತಿಳಿದಿರುವಂತೆ, ಗಂಗೆಯು ಶಿವನ ಜಟೆಯಿಂದ ಹನಿಯುವುದಾಗಿ ಹೇಳಲಾಗಿದೆ. ಹಿಮಾಲಯ ಪ್ರದೇಶಗಳಲ್ಲಿ ಒಂದು ಮಾತಿದೆ - ಪ್ರತಿಯೊಂದು ಶಿಖರವೂ ಶಿವನೇ ಆಗಿದ್ದಾನೆ ಎಂದು. ಹಿಮಾಲಯದ ಶಿಖರಗಳು ಹಿಮದಿಂದ ಮುಚ್ಚಲ್ಪಟ್ಟಿವೆ, ಮತ್ತು ಈ ಹಿಮಾವೃತ ಪರ್ವತಗಳಿಂದ ಹರಿಯುವ ಅನೇಕ ಚಿಕ್ಕ ಜಲಧಾರೆಗಳು ನಿಧಾನವಾಗಿ ಒಂದುಗೂಡಿ ತೊರೆಗಳಾಗಿ ನಂತರ ನದಿಗಳಾಗುತ್ತವೆ. ಇದಕ್ಕಾಗಿಯೇ ಪರ್ವತವು ಶಿವನಂತೆ ಇದೆ ಎಂದು ಹೇಳಿದರು, ಮತ್ತು ಕೆಳಗೆ ಹರಿಯುವ ಈ ಜಲಧಾರೆಗಳು ಜಟೆಗಳಂತೆ ಆಗಿ ಗಂಗಾ ನದಿಯಾಯಿತು, ಅದು ಆಕಾಶದಿಂದ ಬಂದದ್ದು - ಇದು ಬಹಳ ಸತ್ಯ ಏಕೆಂದರೆ ಹಿಮವು ಆಕಾಶದಿಂದ ಬೀಳುತ್ತದೆ.

ಈ ಸಾಂಕೇತಿಕತೆಯೇ ಗಂಗೆಯ ಗಾಥೆಯನ್ನು ರೂಪಿಸಿದ್ದು, ಮತ್ತು ಇದು ಆಕಾಶದಿಂದ ಬರುವುದರಿಂದ ಅತ್ಯಂತ ಪರಿಶುದ್ಧವಾದ ನೀರು ಎಂದು ಪರಿಗಣಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ನಿರ್ದಿಷ್ಟ ಭೂಪ್ರದೇಶದ ಮೂಲಕ ಹರಿಯುವುದರಿಂದ ನಿರ್ದಿಷ್ಟ ಗುಣವನ್ನು ಪಡೆದುಕೊಂಡಿದೆ. ನಾನು 19 ವರ್ಷದ ವಯಸ್ಸಿನಿಂದ ಪ್ರತಿ ವರ್ಷ ಹಿಮಾಲಯದಲ್ಲಿ ಒಂಟಿಯಾಗಿ ಟ್ರೆಕ್ಕಿಂಗ್ ಮಾಡಿದ್ದೇನೆ, ಮತ್ತು ನಾನು ಹೆಚ್ಚು ಸಾಮಗ್ರಿಗಳಿಲ್ಲದೆ ಹೋಗಿದ್ದರಿಂದ ಯಾವಾಗಲೂ ಚಳಿ ಮತ್ತು ಹಸಿವಿನಿಂದ ಇದ್ದೆ. ನನ್ನ ಬಳಿ ಕೇವಲ ಡೆನಿಮ್ ಪ್ಯಾಂಟ್ ಮತ್ತು ದಪ್ಪ ಟೀ-ಶರ್ಟ್ ಮಾತ್ರ ಇತ್ತು. ಕೇವಲ ಕೆಲವು ಬೊಗಸೆಗಳಷ್ಟು ಗಂಗಾ ಜಲ ನನ್ನನ್ನು ಯಾವುದೇ ಆಯಾಸದ ಭಾವನೆಯಿಲ್ಲದೆ 48 ಗಂಟೆಗಳಿಗಿಂತ ಹೆಚ್ಚು ಕಾಲ ಚೈತನ್ಯಶೀಲವಾಗಿರುಸುತ್ತಿತ್ತು ಎಂಬುದನ್ನು ನಾನು ಹಲವು ಬಾರಿ ಅನುಭವಿಸಿದ್ದೇನೆ. ಮತ್ತು ಗಂಗಾ ಜಲ ಕುಡಿಯುವುದರಿಂದ ತಮ್ಮ ಕಾಯಿಲೆಗಳು ಗುಣವಾದ ಬಗ್ಗೆ ಅನೇಕ ಜನರಿಂದ ನೇರವಾಗಿ ಕೇಳಿದ್ದೇನೆ. ನಿಮಗೆ ತಿಳಿದಿರುವಂತೆ, ಭಾರತದಲ್ಲಿ ಯಾರಾದರೂ ಸಾಯಬೇಕಾದರೂ ಸಹ, ಅವರಿಗೆ ಸ್ವಲ್ಪ ಗಂಗಾ ಜಲ ಬೇಕಾಗುತ್ತದೆ.

ಗಂಗಾಜಲವು ಬಹಳ ವಿಶೇಷವಾಗಿರುವ ಸಾಧ್ಯತೆಯಿದೆ, ಇದು ನಿಮ್ಮ ಯಾವುದೇ ನಂಬಿಕೆಯಿಂದಾಗಿ ಅಲ್ಲ, ಆದರೆ ಕೇವಲ ನೀರಿನ ಗುಣಮಟ್ಟ ಹಾಗಿರುವುದರಿಂದ. ಇದಕ್ಕೆ ಕಾರಣ ಹಿಮಾಲಯವೇ ಆಗಿದೆ.

ನದಿಯು ಒಂದು ಜೀವಂತ ಅಸ್ತಿತ್ವ


ಪುರಾಣದ ಪ್ರಕಾರ, ಗಂಗೆಯು ಈ ಭೂಮಿಗೆ ಇಳಿದ ದಿವ್ಯ ನದಿಯಾಗಿದ್ದು, ಅದರ ರಭಸವು ಜಗತ್ತಿಗೆ ಹಾನಿ ಮಾಡುವ ಸಂಭವವಿತ್ತು, ಆದ್ದರಿಂದ ಶಿವನು ಅದನ್ನು ತನ್ನ ತಲೆಯ ಮೇಲೆ ಇರಿಸಿ, ತನ್ನ ಕೂದಲ ಮೂಲಕ ಹಿಮಾಲಯದ ಇಳಿಜಾರುಗಳಲ್ಲಿ ಮೆಲ್ಲಗೆ ಹರಿಯಲು ಬಿಟ್ಟನು. ಇದು ಜನರಿಗೆ ಗಂಗೆಯ ಪವಿತ್ರತೆಯ ಮಹತ್ವವನ್ನು ತಿಳಿಸುವ ತಾತ್ವಿಕ ಅಭಿವ್ಯಕ್ತಿಯಾಗಿದೆ. ನದಿಯ ಶುದ್ಧತೆಯು ಭಾರತೀಯರಿಗೆ ಪವಿತ್ರತೆಯ ಸಂಕೇತವಾಗಿ ಮಾರ್ಪಟ್ಟಿದೆ. ನೀವು ನದಿಗಳೊಂದಿಗೆ ತೊಡಗಿಸಿಕೊಂಡಿದ್ದರೆ, ಪ್ರತಿಯೊಂದು ನದಿಗೂ ತನ್ನದೇ ಆದ ಜೀವನವಿದೆ ಎಂದು ತಿಳಿಯುತ್ತೀರಿ. ಇದು ಜಗತ್ತಿನಾದ್ಯಂತ ನಿಜ, ಅದು ಈಜಿಪ್ಟ್‌ನ ನೈಲ್ ಆಗಿರಲಿ, ಯೂರೋಪ್‌ನ ಡನ್ಯೂಬ್ ಆಗಿರಲಿ, ರಷ್ಯಾ ಮತ್ತು ಮಧ್ಯ ಏಷ್ಯಾದ ದೇಶಗಳ ಮೂಲಕ ಹರಿಯುವ ವೋಲ್ಗಾ ಆಗಿರಲಿ, ಅಮೇರಿಕಾದ ಮಿಸಿಸಿಪಿ ಅಥವಾ ದಕ್ಷಿಣ ಅಮೇರಿಕಾದ ಅಮೆಜಾನ್ ಆಗಿರಲಿ. ಅವುಗಳನ್ನು ಕೇವಲ ಜಲಮೂಲಗಳೆಂದು ಪರಿಗಣಿಸಲಾಗುವುದಿಲ್ಲ. ನಮಗೆ ತಿಳಿದಿರುವಂತೆ, ನೈಜ ಕಾರಣಗಳಿಗಾಗಿ ಹೆಚ್ಚಿನ ಸಂಸ್ಕೃತಿಗಳು ನದಿ ದಂಡೆಗಳಲ್ಲಿ ರೂಪುಗೊಂಡಿರುತ್ತವೆ, ಆದರೆ ನದಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿರುವ ಜನರಿಗೆ, ಅದು ಒಂದು ಜೀವಂತ ಅಸ್ತಿತ್ವವಾಗಿರುತ್ತದೆ. ಅದಕ್ಕೆ ತನ್ನದೇ ಆದ ವ್ಯಕ್ತಿತ್ವವಿದೆ; ತನ್ನದೇ ಆದ ಮನಸ್ಥಿತಿಗಳು, ಭಾವನೆಗಳು ಮತ್ತು ವೈಚಿತ್ರ್ಯಗಳಿವೆ.

ನದಿಯು ಜೀವಂತ ಪ್ರಕ್ರಿಯೆಯಾಗಿದೆ ಮತ್ತು ಇದು ಭಾರತದ ಗಂಗಾನದಿಗೂ ಅನ್ವಯಿಸುತ್ತದೆ. ಗಂಗಾ ನದಿಯ ಉಗಮಸ್ಥಾನವಾದ ಗೋಮುಖದವರೆಗೆ ಮತ್ತು ಅದರ ಎಲ್ಲ ಪ್ರಮುಖ ಉಪನದಿಗಳಾದ ಮಂದಾಕಿನಿ, ಅಲಕನಂದಾ ಮತ್ತು ಗಂಗೆಯ ಮುಖ್ಯ ಭಾಗವಾದ ಭಗೀರಥಿಯವರೆಗೆ ಪ್ರಯಾಣಿಸುವ ಭಾಗ್ಯ ನನ್ನದಾಗಿತ್ತು. ಹಿಮಾಲಯದಲ್ಲಿ ಇದು ಪವಿತ್ರತೆ ಮತ್ತು ಶುದ್ಧತೆಯನ್ನು ಸೂಚಿಸುತ್ತದೆ, ಆದರೆ ಬಯಲು ಪ್ರದೇಶಗಳಿಗೆ ಹರಿದು ಬರುವಾಗ ಇದು ಭಾರತೀಯ ಉಪಖಂಡದ ಉತ್ತರ ಬಯಲು ಪ್ರದೇಶಗಳ ಜೀವನಾಡಿಯಾಗಿದೆ. ಗಂಗಾನದಿಯು ಕಾಲಾನುಕ್ರಮದಲ್ಲಿ ಅನೇಕ ರಾಜವಂಶಗಳ ಏಳಿಗೆ ಮತ್ತು ಪತನಕ್ಕೆ ಸಾಕ್ಷಿಯಾಗಿದೆ. ಇದು ದೇಶದ ಆ ಭಾಗದ ಜನರಿಗೆ ನಿರಂತರ ಶಕ್ತಿ ಮತ್ತು ಸಮೃದ್ಧಿಯ ಮೂಲವಾಗಿದೆ.

ಈಗ ನಾವು ಗಂಗಾ ನದಿಯನ್ನು ಕೇವಲ ಸಂಪನ್ಮೂಲವಾಗಿ ನೋಡುವ ಕಾಲ ಬಂದಿದೆ ಮತ್ತು ಹಿಮಾಲಯದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ. ಇದರಿಂದ ಗಂಗೆಯನ್ನು ಜೀವಂತ ತಾಯಿ ಅಥವಾ ದೇವತೆಯಂತೆ ನೋಡುವ ಅನೇಕ ಜನರಿಗೆ ನೋವಾಗಿದೆ. ಬಯಲು ಪ್ರದೇಶಗಳಲ್ಲಿ ಇದು ಭಾರೀ ಮಾಲಿನ್ಯಕ್ಕೆ ಒಳಗಾಗಿದೆ. ಕೆಲವು ಕಾಳಜಿಯುಳ್ಳ ಜನರು ಗಂಗಾ ನದಿಯನ್ನು ಮತ್ತೆ ಅದರ ಮೂಲ ಸ್ವರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ನಾನು ಕಳೆದ ಮೂವತ್ತು ವರ್ಷಗಳಿಂದ ಹಿಮಾಲಯಕ್ಕೆ ಭೇಟಿ ನೀಡುತ್ತಿದ್ದೇನೆ ಮತ್ತು ಹಿಮದ ಪ್ರಮಾಣದಲ್ಲಿ ದೊಡ್ಡ ಬದಲಾವಣೆಯನ್ನು ಗಮನಿಸಿದ್ದೇನೆ. ಅನೇಕ ಹಿಮಾಚ್ಛಾದಿತ ಶಿಖರಗಳು ಈಗ ಹಿಮರಹಿತವಾಗಿ, ಕೇವಲ ಬರಿದಾದ, ನುಣುಪಾದ, ಕಠಿಣ ಅಂಚುಗಳಾಗಿ ಮಾರ್ಪಟ್ಟಿವೆ. ಗಂಗಾ ನದಿಗೆ ಗಂಭೀರ ಅಪಾಯವಿದೆ ಮತ್ತು ಹಿಮಪಟವು ವೇಗವಾಗಿ ಕ್ಷೀಣಿಸುತ್ತಿದೆ. ಇದನ್ನು ನಾವು ಗೋಮುಖದ ಪ್ರವೇಶದಲ್ಲಿ ಸ್ಪಷ್ಟವಾಗಿ ನೋಡಬಹುದು. ಇದಕ್ಕೆ ಗೋಮುಖ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಹಸುವಿನ ಮುಖದಂತೆ ಕಾಣುತ್ತಿತ್ತು. 1981ರ ಆಗಸ್ಟ್ ತಿಂಗಳಲ್ಲಿ ನಾನು ಮೊದಲ ಬಾರಿಗೆ ಅಲ್ಲಿಗೆ ಹೋದಾಗ - ಇದು ಕೇವಲ 15 ರಿಂದ 20 ಅಡಿ ಅಗಲದ ತೆರೆದ ಭಾಗವಾಗಿತ್ತು, ಅದರಿಂದ ನೀರು ಚಿಮ್ಮುತ್ತಿತ್ತು, ಮತ್ತು ಇದು ನಿಜವಾಗಿಯೂ ಹಸುವಿನ ಬಾಯಿಯಂತೆ ಕಾಣುತ್ತಿತ್ತು. ಇಂದು ಇದು 200 ಅಡಿ ಅಗಲದ ಗುಹೆಯಾಗಿದೆ, ಅಲ್ಲಿ ನೀವು ಬಯಸಿದರೆ ಸುಮಾರು ಅರ್ಧ ಮೈಲಿಯಷ್ಟು ನಡೆಯಬಹುದು.

ಹವಾಮಾನ ಬದಲಾವಣೆಯು ಗಂಗೆಯ ಜೀವನದ ಮೇಲೆ ಹೊಂದಿರುವ ಪರಿಣಾಮವು ಅಸಾಮಾನ್ಯವಾಗಿದೆ, ಮತ್ತು ಯಾವುದೇ ಸಮಯದಲ್ಲಿ ಅದು ನದಿಯ ಅಸ್ತಿತ್ವಕ್ಕೆ ಅಪಾಯ ಒಡ್ಡಬಹುದು, ಇದು ಯಾವಾಗಲೂ ಜನರ ಜೀವನಾಡಿಯಾಗಿರುವ ಭಾರತದ ಉತ್ತರ ಭಾಗಕ್ಕೆ ದೊಡ್ಡ ವಿಪತ್ತನ್ನು ತರಬಹುದು.

ಗಂಗೆಯನ್ನು ರಕ್ಷಿಸುವುದರ ಮಹತ್ವ


ಪ್ರತಿಯೊಂದು ಸಂಸ್ಕೃತಿ, ಜನಾಂಗ, ಪ್ರತಿಯೊಂದು ನಾಗರಿಕತೆಗೆ ತಮ್ಮ ಜೀವನದಲ್ಲಿ ಭಿನ್ನ ಮಟ್ಟದ ಪವಿತ್ರತೆಯನ್ನು ತರಲು ಪ್ರೇರೇಪಿಸುವ ಕೆಲವು ಸಾಂಕೇತಿಕತೆಯ ಅಗತ್ಯವಿದೆ. ಗಂಗೆಯು ಸದಾಕಾಲ ಇದನ್ನು ಮಾಡುತ್ತಾ ಬಂದಿದೆ ಮತ್ತು ಮಾನವ ಜೀವಿಗಳ ಅತಿದೊಡ್ಡ ಸಮ್ಮೇಳನವು ಕುಂಭಮೇಳಗಳ ಸಮಯದಲ್ಲಿ ಅದರ ದಂಡೆಗಳ ಮೇಲೆ ನಡೆಯುತ್ತದೆ, ಅಲ್ಲಿ 8 ರಿಂದ 10 ಕೋಟಿ ಜನರು ಒಟ್ಟುಗೂಡುತ್ತಾರೆ. ಭೂಮಿಯ ಮೇಲೆ ಬೇರೆಲ್ಲೂ ಇಂತಹ ಮಾನವ ಸಮೂಹದ ಸಮ್ಮೇಳನ ನಡೆಯುವುದಿಲ್ಲ. ಗಂಗೆಯು ಯಾವಾಗಲೂ ಈ ಸ್ಫೂರ್ತಿಯ ಬೆನ್ನೆಲುಬಾಗಿದ್ದು ಮತ್ತು ಜನರಿಗೆ ಶುದ್ದತೆಯ ಸಂಕೇತವಾಗಿದೆ. ಈ ಸಾಂಕೇತಿಕತೆ ಅತ್ಯಂತ ಅವಶ್ಯಕವಾಗಿದೆ. ಈ ನದಿಯನ್ನು ರಕ್ಷಿಸುವುದು ಮತ್ತು ಶುದ್ಧವಾಗಿ ಇರಿಸುವುದು ಕೇವಲ ನಮ್ಮ ಬದುಕುಳಿಯುವಿಕೆ ಮತ್ತು ಅಗತ್ಯಕ್ಕಾಗಿ ಮಾತ್ರವಲ್ಲ, ಆದರೆ ಮಾನವ ಚೈತನ್ಯವನ್ನು ಉನ್ನತವಾಗಿರಿಸಲು.

    Share

Related Tags

Get latest blogs on Shiva